
ಕೋಲಾರ, ಜೂನ್ ೨೮ (ಹಿ.ಸ) :
ಆ್ಯಂಕರ್ : ಸಾವಿರಾರು ಕೋಟಿ ವಹಿವಾಟು ನಡೆಯುವ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಟೊಮೋಟೊ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ರೈತ ಸಂಘದ ಉಪಾಧ್ಯಕ್ಷ ನಾರಾಯಣಗೌಡ ಒತ್ತಾಯಿಸಿದ್ದಾರೆ.
ಲಕ್ಷಾಂತರ ರೂಪಾಯಿ ಭೂಮಿ ತಾಯಿ ಮೇಲೆ ಬಂಡವಾಳ ಹಾಕಿ ಬೆವರು ಸುರಿಸಿ ೩ ತಿಂಗಳ ಕಾಲ ಬೆಳೆಯನ್ನು ರಕ್ಷಣೆ ಮಾಡಿಕೊಂಡು ಮಾರುಕಟ್ಟೆಗೆ ಟೊಮೊಟೊ ತರುವ ರೈತರಿಗೆ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಹೊರ ಜಿಲ್ಲೆಗಳಿಂದ ಬರುವ ರೈತರು ಮತ್ತು ಬದುಕುಕಟ್ಟಿಕೊಳ್ಳಲು ಬರುವ ಹೊರ ರಾಜ್ಯದ ಕೂಲಿ ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಗುಣಮಟ್ಟದ ಊಟ ಜೊತೆಗೆ ರಾತ್ರಿವೇಳೆ ಮಲಗಲು ವಿಶ್ರಾಂತಿ ಗೃಹಗಳ ಕೊರತೆ ಇದೆ. ರಾತ್ರಿ ವೇಳೆ ಸೊಳ್ಳೆಗಳ ಮದ್ಯೆ ಹಾಗೂ ಸ್ವಚ್ಚತೆ ಇಲ್ಲದ ಕೊಳತ ಟೊಮೋಟೊಗಳ ಮದ್ಯೆ ಕಾಲಕಳೆದು ಅನಾರೋಗ್ಯ ಪೀಡಿತರಾಗಬೇಕಾದ ಮಟ್ಟಕ್ಕೆ ವ್ಯವಸ್ಥೆ ಹದಗೆಟ್ಟು ಕುಟುಂಬಗಳನ್ನು ನಾಶ ಮಾಡುವ ಮದ್ಯ ಮಾತ್ರ ೨೪ ಗಂಟೆ ದೊರೆಯುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಎ.ಪಿ.ಎಂ.ಸಿ ಅಧಿಕಾರಿಗಳು ವಿಪಲವಾಗಿದ್ದಾರೆಂದು ಅವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಸಾವಿರಾರು ಕೋಟಿ ವಹಿವಾಟು ನಡೆಯುವ ಸಾವಿರಾರು ಕೂಲಿಕಾರ್ಮಿಕರು ಬದುಕು ಕಟ್ಟಿಕೊಳ್ಳುವ ಮಾರುಕಟ್ಟೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಪ್ರತಿ ದಿನವೂ ರೈತರ ದ್ವಿಚಕ್ರ ವಾಹನಗಳು ಕಳ್ಳತನವಾಗುವ ಜೊತೆಗೆ ಭದ್ರತೆ ದೃಷ್ಠಿಯಿಂದ ಸಿ.ಸಿ ಕ್ಯಾಮಾರ ಅಳವಡಿಕೆ ಮಾಡದೆ ನಿರ್ಲಕ್ಷೆ ಮಾಡುವ ಜೊತೆಗೆ ಮಳೆ ಬಂದರೆ ಸಮರ್ಪಕವಾದ ಚರಂಡಿ ವ್ಯವಸ್ಥೆಯಿಲ್ಲದೆ ಕೆರೆ ಕುಂಟೆಗಳಾಗಿ ಮಾರ್ಪಟ್ಟು, ಸ್ವಚ್ಚತೆಗಾಗಿ ಲಕ್ಷಾಂತರ ರೂಪಾಯಿ ಗುತ್ತಿಗೆ ನೀಡಿರುವ ಗುತ್ತಿಗೆದಾರರು ನಾಪತ್ತೆ ಆಗಿ ಬಡವರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ಆರೋಪ ಮಾಡಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಹೊರ ರಾಜ್ಯಗಳಿಂದ ಬರುವ ಕಾರ್ಮಿಕರನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು ಜೊತೆಗೆ ಯುವಕರ ಭವಿಷ್ಯವನ್ನು ಹಾಳು ಮಾಡುವ ಮಾದಕ ವಸ್ತುಗಳಾದ ಗಾಂಜಾ, ಅಪೀಮು ಗಳನ್ನು ಕಾನೂನಿನ ಭಯವಿಲ್ಲದೆ ಟೊಮೊಟೊ, ತರಕಾರಿ ಲಾರಿಗಳಲ್ಲಿ ಸಾಗಾಣಿಕೆ ಮುಖಾಂತರ ಜಿಲ್ಲೆಯಲ್ಲಿ ಮಾರಾಟ ದಂದೆ ಹೆಚ್ಚಾಗಿದ್ದು, ಕಡಿವಾಣ ಹಾಕಲು ವಿಶೇಷ ಪೋಲಿಸ್ ತಂಡ ರಚನೆ ಮಾಡುವ ಜೊತೆಗೆ ಮಾರುಕಟ್ಟೆಯ ಸುತ್ತ ೧ ಕಿ.ಲೋ ವ್ಯಾಪ್ತಿಯಲ್ಲಿ ಯಾವುದೇ ಮದ್ಯ ಮಾರಾಟ ಮಾಡದಂತೆ ಆದೇಶ ಮಾಡಬೇಕು ಹಾಗೂ ಮಾರುಕಟ್ಟೆಯಲ್ಲಿ ದ್ವನಿವರ್ದಕ ಮುಖಾಂತರ ಮಾದಕ ವಸ್ತು ಹಾಗೂ ಮದ್ಯ ಮಾರಾಟ ಮತ್ತಿತರ ಕಾನೂನಿನ ಬಗ್ಗೆ ರೈತ ಕೂಲಿಕಾರ್ಮಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಒತ್ತಾಯಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್