
ಬಾಗಲಕೋಟೆ, 13 ಜೂನ್ (ಹಿ.ಸ.) :
ಆಂಕರ್ : ಪಂಚಮಸಾಲಿ ಹಾಗೂ ಲಿಂಗಾಯತ ಉಪಸಮಾಜಗಳಿಗೆ ಒಬಿಸಿ (OBC) ಮೀಸಲಾತಿ ಕಲ್ಪಿಸುವ ಸಂಕಲ್ಪದೊಂದಿಗೆ ಮೂರನೇ ಪಂಚಮಸಾಲಿ ಸಂಕಲ್ಪ ಸಭೆಯನ್ನು ಜೂನ್ 14ರಂದು ಉಳವಿ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ.
ಲಿಂಗಾಯತ ಪಂಚಮಸಾಲಿ ಸಮಾಜದ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿಗಾಗಿ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಸಂಕಲ್ಪ ಸಭೆ ನಡೆಯಲಿದೆ. ಜೂನ್ 14ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಸಂಕಲ್ಪ ಸಭೆ ನಡೆಯಲಿದ್ದು, ಜೂನ್ 15ರ ಸೋಮವಾರ ಬೆಳಿಗ್ಗೆ 6 ಗಂಟೆಗೆ ಇಷ್ಟಲಿಂಗ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಈ ಪ್ರಕಟಣೆಯಲ್ಲಿ ತಿಳಿಸಿದರು.
ಬೆಳಗಾವಿ ಹಾಗೂ ಧಾರವಾಡ ಜಿಲ್ಲಾ ಘಟಕಗಳ ಆಶ್ರಯದಲ್ಲಿ, ಉಳವಿ ಗ್ರಾಮ ಘಟಕದ ಸಹಯೋಗದಲ್ಲಿ ಹಾಗೂ ಉಳವಿ ಚನ್ನಬಸವೇಶ್ವರ ಟ್ರಸ್ಟ್ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಪಂಚಮಸಾಲಿ, ಮಲೆಗೌಡ, ಗೌಳಿ, ಲಿಂಗಾಯತ ಗೌಡ, ದೀಕ್ಷಾ ಲಿಂಗಾಯತ ಸೇರಿದಂತೆ ಲಿಂಗಾಯತ ಉಪಸಮಾಜಗಳ ಮಕ್ಕಳ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಉದ್ಯೋಗಾವಕಾಶಕ್ಕಾಗಿ ಮೀಸಲಾತಿ ಪಡೆಯುವ ಸಂಕಲ್ಪದೊಂದಿಗೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ.
ಲಿಂಗಾಯತ ಪಂಚಮಸಾಲಿ ಮಹಾಸಭಾ, ಯುವ ಘಟಕ, ಪಂಚಸೇನಾ, ಮಹಿಳಾ ಘಟಕ, ರೈತ ಘಟಕ, LPAP, LPVP, ಸಾಮಾಜಿಕ ಜಾಲತಾಣ, ಐಟಿ ವಿಭಾಗ, ಸಾಹಿತ್ಯ ವಿಭಾಗ ಸೇರಿದಂತೆ ವಿವಿಧ ರಾಷ್ಟ್ರೀಯ, ರಾಜ್ಯ, ಜಿಲ್ಲಾ, ತಾಲೂಕು, ನಗರ ಹಾಗೂ ಗ್ರಾಮ ಘಟಕಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ.
ಕಾರ್ಯಕ್ರಮಕ್ಕೆ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ, ಧರ್ಮಕ್ಷೇತ್ರ ಕೂಡಲಸಂಗಮ ಅವರು ಮಾರ್ಗದರ್ಶನ ನೀಡಲಿದ್ದಾರೆ.
ಸಭೆಯ ಯಶಸ್ಸಿಗಾಗಿ ಪಂಚನಗೌಡ ದ್ಯಾಮನಗೌಡ (ಬೆಳಗಾವಿ ಜಿಲ್ಲಾ ಗೌರವ ಅಧ್ಯಕ್ಷ) ಹಾಗೂ ಶ್ರೀಶೈಲ ಬೊಳಣ್ಣ (ಉಳವಿ ಸಂಕಲ್ಪ ಸಭೆ ಸ್ವಾಗತ ಸಮಿತಿ ಅಧ್ಯಕ್ಷ) ಸೇರಿದಂತೆ ವಿವಿಧ ಮುಖಂಡರು ಸಿದ್ಧತೆ ಕೈಗೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande