
ಮುನಿರಾಬಾದ್, 06 ಮೇ (ಹಿ.ಸ.) :
ಆ್ಯಂಕರ್ : ಜೆಸ್ಕಾಂ ಮುನಿರಾಬಾದ್ ಉಪ ವಿಭಾಗ ವ್ಯಾಪ್ತಿಯ ಕೆರೆಹಳ್ಳಿ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ 1ನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ನಿಮಿತ್ತ ಮೇ 7 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕೆರೆಹಳ್ಳಿ ವಿದ್ಯುತ್ ವಿತರಣಾ ಉಪ ಕೇಂದ್ರದ ವ್ಯಾಪ್ತಿಯ ಗ್ರಾಮಗಳಾದ ಕೆರೆಹಳ್ಳಿ, ಗುಳದಳ್ಳಿ, ಬೂದುಗುಂಪಾ, ಹಳೆಕುಮುಟಾ, ಬಿಳೆಬಾವಿ, ನಾಗೇಶನಹಳ್ಳಿ, ಇಂದಿರಾನಗರ, ಚಂದ್ರಗಿರಿ, ಜಬ್ಬಲಗುಡ್ಡ, ಕೂಕನಪಳ್ಳಿ, ವನಬಳ್ಳಾರಿ. ಇಂದರಗಿ ಮತ್ತು ಅಮರಾಪುರ, ಎಫ್.4 ಇಂದರಗಿ ಐಪಿ ಫೀಡರ್, ಎಫ್10 ನಾರಾಯಣ ಪೇಟೆ ಐಪಿ ಫೀಡರ್, ಎಫ್ 5 ವನಬಳ್ಳಾರಿ ಐಪಿ ಫೀಡರ್, ಎಫ್11 ಹಳೆಕುಮುಟಾ ಐಪಿ ಫೀಡರ್ , ಎಫ್1 ಗುಳದಳ್ಳಿ ಐಪಿ ಫೀಡರ್, ಎಫ್ 2 ಅಬ್ಬಿಗೇರಾ ಫೀಡರ್, ಎಫ್3 ಕೂಕನಪಳ್ಳಿ ಐಪಿ ಫೀಡರ್, ಎಫ್ 8 ಜಬ್ಬಲಗುಡ್ಡ ಐಪಿ ಫೀಡರ್, ಎಫ್ 3 ಇಂಡಸ್ಟ್ರಿಯಲ್ ಫೀಡರ್ ಮತ್ತು ಎಫ್9 ಎಕ್ಸಪ್ರೆಸ್ ಇಂಡಸ್ಟ್ರಿಯಲ್ ಫೀಡರ್, ಎಫ್ 12 ಸುಲ್ತಾನಪುರ ಫೀಡರ್, ಎಫ್1 ಡಿ.ಹೊಸಳ್ಳಿ ಐಪಿ ಫೀಡರ್ ಮತ್ತು ಎಫ್5 ಬೂದೇಶ್ವರ ಐಪಿ ಫೀಡರ್ನಲ್ಲಿ ಮೇ 7 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು.
ಕಾಮಗಾರಿಯು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಂಡಲ್ಲಿ ಯಾವುದೇ ಸಮಯದಲ್ಲೂ ವಿದ್ಯುತ್ ಸರಬರಾಜು ಪುನಃ ಪ್ರಾರಂಭಿಸಲಾಗುವುದು. ಈ ಅವಧಿಯಲ್ಲಿ ಸಾರ್ವಜನಿಕರು ಯಾವುದೇ ವಿಧದ ವಿದ್ಯುತ್ ದುರಸ್ತಿ ಅಥವಾ ಸಂಬ0ಧಿತ ಕೆಲಸಗಳನ್ನು ಕೈಗೊಳ್ಳಬಾರದೆಂದು ಸೂಚಿಸಲಾಗಿದೆ. ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಮುನಿರಾಬಾದ್ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್