
ಧಾರವಾಡ, 30 ಮೇ (ಹಿ.ಸ.) :
ಆ್ಯಂಕರ್ : ಧಾರವಾಡ ನಗರದಾದ್ಯಂತ ಇರುವ ಸ್ವಯಂ ಚಾಲಿತ ಸಿ.ಸಿ.ಟಿ.ವಿ ಕ್ಯಾಮರಾಗಳಲ್ಲಿ ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘನೆ ಮಾಡಿದ ಬಗ್ಗೆ ಮೋಟಾರ ವಾಹನ ಪ್ರಕರಣಗಳು ದಾಖಲಾಗಿರುತ್ತವೆ.
ಆದ್ದರಿಂದ ಸಾರ್ವಜನಿಕರು ಕೂಡಲೇ ಬಾಕಿ ಇರುವ ದಂಡದ ಮೊತ್ತವನ್ನು ಕರ್ನಾಟಕ ಒನ್ ಆನ್ಲೈನ್ ಮುಖಾಂತರ ಅಥವಾ ಸಂಚಾರ ಠಾಣೆಯ ಎ.ಎಸ್.ಐ ಮೇಲ್ಪಟ್ಟ ಅಧಿಕಾರಿಗಳ ಬಳಿ ಅಥವಾ ಟಿ.ಎಂ.ಸಿ ಕೇಂದ್ರ ಧಾರವಾಡ ಸಂಚಾರ ಠಾಣೆಯಲ್ಲಿ ಖುದ್ದಾಗಿ ಬಂದು ದಂಡ ಪಾವತಿ ಮಾಡಬೇಕೆಂದು ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.