ಬಲ್ವೀರ್ ಪುಂಜ್ ನಿಧನಕ್ಕೆ ಆರ್.ಎಸ್.ಎಸ್ ಸಂತಾಪ
ನವದೆಹಲಿ, 19 ಏಪ್ರಿಲ್ (ಹಿ.ಸ.) : ಆ್ಯಂಕರ್ : ಖ್ಯಾತ ಚಿಂತಕ, ಬರಹಗಾರ ಹಾಗೂ ಮಾಜಿ ಸಂಸದರಾಗಿದ್ದ ಬಲ್ವೀರ್ ಪುಂಜ್ ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪ ಸೂಚಿಸಿದೆ. ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ತಮ್ಮ ಸಂತಾಪ ಸಂದೇಶದಲ್ಲಿ, ಬಲ್ವೀರ್ ಪುಂಜ್ ಅವರ ನಿಧನವು ಭಾ
ಬಲವಿರ್ ಪುಂಜ್


ನವದೆಹಲಿ, 19 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಖ್ಯಾತ ಚಿಂತಕ, ಬರಹಗಾರ ಹಾಗೂ ಮಾಜಿ ಸಂಸದರಾಗಿದ್ದ ಬಲ್ವೀರ್ ಪುಂಜ್ ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪ ಸೂಚಿಸಿದೆ.

ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ತಮ್ಮ ಸಂತಾಪ ಸಂದೇಶದಲ್ಲಿ, ಬಲ್ವೀರ್ ಪುಂಜ್ ಅವರ ನಿಧನವು ಭಾರತದ ಸಾರ್ವಜನಿಕ ಜೀವನಕ್ಕೆ ಆಳವಾದ ಹೊಡೆತ ನೀಡಿದೆ ಎಂದು ಹೇಳಿದ್ದಾರೆ.

“ತಮ್ಮ ಸುದೀರ್ಘ ಸಾರ್ವಜನಿಕ ಜೀವನದುದ್ದಕ್ಕೂ ಅವರು ವ್ಯಾಪಕ ಅಧ್ಯಯನ ಮತ್ತು ಜವಾಬ್ದಾರಿಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಸಮಕಾಲೀನ ವಿಷಯಗಳ ಕುರಿತು ಅವರ ಒಳನೋಟವುಳ್ಳ ಬರಹಗಳು ಸದಾ ಮಹತ್ವ ಪಡೆದಿದ್ದವು,” ಎಂದು ಅವರು ತಿಳಿಸಿದ್ದಾರೆ.

ಬಲ್ವೀರ್ ಪುಂಜ್ ಅವರ ಚಿಂತನೆ, ಬರಹ ಮತ್ತು ಸಾರ್ವಜನಿಕ ಬದುಕಿನ ಕೊಡುಗೆಗಳು ಸದಾ ಸ್ಮರಣೀಯವಾಗಿರಲಿವೆ ಎಂದು ಹೇಳಿದ ಹೊಸಬಾಳೆ, ದೇವರು ಅವರ ಕುಟುಂಬ ಹಾಗೂ ಸ್ನೇಹಿತರಿಗೆ ಈ ನಷ್ಟವನ್ನು ಭರಿಸುವ ಶಕ್ತಿ ನೀಡಲಿ ಹಾಗೂ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande