
ಬೆಂಗಳೂರು, 19 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಜನಗಣತಿ–2027ರ ಮೊದಲ ಹಂತದ ಮನೆ ಗಣತಿ ಹಾಗೂ ಮನೆ ಪಟ್ಟಿ ಸಿದ್ಧಪಡಿಸುವ ಕಾರ್ಯವು ದಿನಾಂಕ 16 ಏಪ್ರಿಲ್ 2026 ರಿಂದ ಪ್ರಾರಂಭಗೊಂಡಿದ್ದು, ಈ ಕಾರ್ಯವನ್ನು ಗಣತಿದಾರರು ಹಾಗೂ ಮೇಲ್ವಿಚಾರಕರು ಸಕ್ರಿಯವಾಗಿ ನಡೆಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ, ಇಂದು ಭಾನುವಾರದ ಸಾರ್ವತ್ರಿಕ ರಜೆ ಹಾಗೂ ಏಪ್ರಿಲ್ 20 ರಂದು ವಿಶ್ವಗುರು ಬಸವಣ್ಣ ಜಯಂತಿ ನಿಮಿತ್ತ ಸರ್ಕಾರಿ ರಜೆ ಇದ್ದರೂ ಸಹ, ಈ ಎರಡೂ ದಿನಗಳಲ್ಲಿಯೂ ಮನೆಗೆ ಭೇಟಿ ನೀಡಿ ಮನೆ ಗಣತಿ ಮತ್ತು ಮನೆ ಪಟ್ಟಿ ಸಿದ್ಧಪಡಿಸುವ ಕಾರ್ಯವನ್ನು ಎಂದಿನಂತೆ ಮುಂದುವರಿಸಲು ಸೂಚಿಸಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತರ ತಿಳಿಸಿದ್ದಾರೆ.
ನಗರದ ಎಲ್ಲಾ ನಾಗರಿಕರು ಮನೆ ಗಣತಿ ಕಾರ್ಯಕ್ಕಾಗಿ ಭೇಟಿ ನೀಡುವ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಅಗತ್ಯ ಸಹಕಾರ ನೀಡುವಂತೆ ಕೋರಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa