ಸರಕಾರದಿಂದ ನಿವೃತ್ತ ಯೋಧರಿಗೆ ಅವಮಾನ ; ಬಿಜೆಪಿ ಆಕ್ರೋಶ
ಬೆಂಗಳೂರು, 17 ಏಪ್ರಿಲ್ (ಹಿ.ಸ.) : ಆ್ಯಂಕರ್ : ದೇಶ ಕಾಯುವ ಸೈನಿಕರಿಗೆ ಗೌರವ ಸಲ್ಲಿಸುವುದು ಹಾಗಿರಲಿ, ಅವರ ಹಕ್ಕಿನ ಒಂದು ತುಂಡು ಭೂಮಿ ನೀಡಲು ಕಾಂಗ್ರೆಸ್ ಸರ್ಕಾರಕ್ಕೆ ಮನಸ್ಸಿಲ್ಲ. 15,973 ಅರ್ಜಿಗಳಲ್ಲಿ 70% ಕ್ಕೂ ಹೆಚ್ಚು ಅರ್ಜಿಗಳನ್ನು ಧೂಳು ತಿನ್ನಲು ಬಿಟ್ಟಿರುವುದು ನಿವೃತ್ತ ಸೈನಿಕರಿಗೆ ಮಾಡು
Bjp


ಬೆಂಗಳೂರು, 17 ಏಪ್ರಿಲ್ (ಹಿ.ಸ.) :

ಆ್ಯಂಕರ್ : ದೇಶ ಕಾಯುವ ಸೈನಿಕರಿಗೆ ಗೌರವ ಸಲ್ಲಿಸುವುದು ಹಾಗಿರಲಿ, ಅವರ ಹಕ್ಕಿನ ಒಂದು ತುಂಡು ಭೂಮಿ ನೀಡಲು ಕಾಂಗ್ರೆಸ್ ಸರ್ಕಾರಕ್ಕೆ ಮನಸ್ಸಿಲ್ಲ. 15,973 ಅರ್ಜಿಗಳಲ್ಲಿ 70% ಕ್ಕೂ ಹೆಚ್ಚು ಅರ್ಜಿಗಳನ್ನು ಧೂಳು ತಿನ್ನಲು ಬಿಟ್ಟಿರುವುದು ನಿವೃತ್ತ ಸೈನಿಕರಿಗೆ ಮಾಡುತ್ತಿರುವ ಘೋರ ಅಪಮಾನ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.

ದೇಶದ ಗಡಿ ಕಾಯುವವರಿಗೆ ನಾಡಿನ ನೆಲದಲ್ಲೇ ಅಲೆದಾಡುವಂತೆ ಮಾಡಿದ ಸಿದ್ದರಾಮಯ್ಯ ಅವರ ಬೇಜವಾಬ್ದಾರಿ ಸರ್ಕಾರಕ್ಕೆ ಸೈನಿಕರ ಶಾಪ ತಟ್ಟದೆ ಇರದು. ನಾಡಿನ ಹೆಮ್ಮೆಯ ಯೋಧರಿಗೆ ಭೂಮಿ ನೀಡದೆ ಸತಾಯಿಸುತ್ತಿರುವ ಇಂತಹ ಅಸಮರ್ಥ ಆಡಳಿತಕ್ಕೆ ಧಿಕ್ಕಾರ ಎಂದು ಬಿಜೆಪಿ ಹೇಳಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande