ಎ-ಖಾತೆ ಯೋಜನೆ ಮರೀಚಿಕೆ : ಬೆಂಗಳೂರಿಗರಿಗೆ ಸಂಕಷ್ಟ-ಆರ್. ಅಶೋಕ್
ಬೆಂಗಳೂರು, 14 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬೆಂಗಳೂರಿನಲ್ಲಿ ಬಿ-ಖಾತಾ ಆಸ್ತಿಗಳನ್ನು ಎ-ಖಾತಾವಾಗಿ ಪರಿವರ್ತಿಸುವ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪ್ರತಿ ಪಕ್ಷದ ನಾಯಕ ಆರ್.ಅಶೋಕ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುಮಾರು 8.25 ಲಕ್ಷ ಬಿ-ಖಾತ
ಎ-ಖಾತೆ ಯೋಜನೆ ಮರೀಚಿಕೆ : ಬೆಂಗಳೂರಿಗರಿಗೆ ಸಂಕಷ್ಟ-ಆರ್. ಅಶೋಕ್


ಬೆಂಗಳೂರು, 14 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬೆಂಗಳೂರಿನಲ್ಲಿ ಬಿ-ಖಾತಾ ಆಸ್ತಿಗಳನ್ನು ಎ-ಖಾತಾವಾಗಿ ಪರಿವರ್ತಿಸುವ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪ್ರತಿ ಪಕ್ಷದ ನಾಯಕ ಆರ್.ಅಶೋಕ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುಮಾರು 8.25 ಲಕ್ಷ ಬಿ-ಖಾತಾ ಆಸ್ತಿಗಳಿದ್ದರೂ, ಯೋಜನೆ ಘೋಷಣೆಯಾಗಿ ಆರು ತಿಂಗಳು ಕಳೆದರೂ ಕೇವಲ 8,308 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿದ್ದು, ಅವುಗಳಲ್ಲಿ ಶೇಕಡಾ 10ಕ್ಕಿಂತ ಕಡಿಮೆ ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ ಎಂದು ಅವರು ಹೇಳಿದರು.

“ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಕೇವಲ 818 ಅರ್ಜಿಗಳಿಗೆ ಮಾತ್ರ ಇ-ಖಾತಾ ಮಂಜೂರು ಮಾಡಲಾಗಿದ್ದು, ಉಳಿದ ಸಾವಿರಾರು ಅರ್ಜಿಗಳು ಇನ್ನೂ ಬಾಕಿಯೇ ಉಳಿದಿವೆ. ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ಅಶೋಕ್ ಆರೋಪಿಸಿದರು.

ಲಂಚಗುಳಿತದ ಭೀತಿಯಿಂದ ಸಾರ್ವಜನಿಕರು ಈ ಪ್ರಕ್ರಿಯೆಯಿಂದ ದೂರ ಉಳಿಯುತ್ತಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದು ಟೀಕಿಸಿದ ಅವರು, ಈ ಯೋಜನೆ ಜನರಿಗೆ ಸಹಾಯ ಮಾಡುವ ಬದಲು “ಲೂಟಿ ವ್ಯವಸ್ಥೆ”ಯಾಗಿ ಬದಲಾಗಿದೆ ಎಂದು ಆರೋಪಿಸಿದರು.

ಈ ಯೋಜನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಜಾರಿಯಲ್ಲಿದ್ದು, ಸರ್ಕಾರದ ಒಳಜಗಳವೇ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ಸಂಘರ್ಷದಿಂದ ಜನರ ಸಮಸ್ಯೆಗಳು ನಿರ್ಲಕ್ಷ್ಯವಾಗುತ್ತಿವೆ ಎಂದು ಆರೋಪಿಸಿದರು.

“ಜಾಹೀರಾತುಗಳ ಮೂಲಕ ಭ್ರಮೆ ಸೃಷ್ಟಿಸುವ ಬದಲು, ಸರ್ಕಾರ ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸುವತ್ತ ಗಮನ ಹರಿಸಬೇಕು. ಇಲ್ಲವಾದರೆ ಬೆಂಗಳೂರಿನ ನಾಗರಿಕರು ಮುಂಬರುವ ದಿನಗಳಲ್ಲಿ ತಕ್ಕ ಉತ್ತರ ನೀಡುವುದು ನಿಶ್ಚಿತ,” ಎಂದು ಎಚ್ಚರಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande