
ಬೆಂಗಳೂರು, 15 ಮಾರ್ಚ್ (ಹಿ.ಸ.):
ಆ್ಯಂಕರ್:
ಬೆಂಗಳೂರಿನ ಇಂದಿರಾ ಲಂಕೇಶ್ ಪ್ರಕಾಶನ ಕೊಂಡಜ್ಜಿ ಬಸಪ್ಪ ಸಭಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಿ.ಲಂಕೇಶ್ ಅವರ ಟೀಕೆ ಟಿಪ್ಪಣಿ 3 ಭಾಗಗಳ ಪುಸ್ತಕ ಹಾಗೂ ಲಂಕೇಶರ ಕಥೆಗಳ ಆಡಿಯೊ ಪುಸ್ತಕ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ನಟ ಪ್ರಕಾಶ್ ರೈ, ಸಾಹಿತಿ ನಟರಾಜ್ ಹುಳಿಯಾರ್, ಲೇಖಕಿ-ವಿಮರ್ಷಕಿ ಎಂ.ಎಸ್.ಆಶಾದೇವಿ, ಇಂದಿರಾ ಲಂಕೇಶ್, ಕವಿತಾ ಲಂಕೇಶ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa