ವಿಜಯಪುರದಲ್ಲಿ ಯತ್ನಾಳ ಪುತ್ರನ ವಿವಾಹ ಸಮಾರಂಭ: ರಾಜಕೀಯ ಗಣ್ಯರ ಸಾನ್ನಿಧ್ಯ
ವಿಜಯಪುರ, 15 ಮಾರ್ಚ್ (ಹಿ.ಸ.) ಆ್ಯಂಕರ್ : ವಿಜಯಪುರದ ಜನಪ್ರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪುತ್ರ ರಾಮನಗೌಡ ಪಾಟೀಲ ಅವರ ವಿವಾಹ ಸಮಾರಂಭವು ವಿಜಯಪುರದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಸಮಾರಂಭದಲ್ಲಿ ರಾಜ್ಯದ ಪ್ರಮುಖ ರಾಜಕೀಯ ಗಣ್ಯರು ಭಾಗಿಯಾಗಿ ನೂತನ ದಂಪತಿಗೆ ಶುಭಾಶಯ ಕೋರಿದರು. ಕಾರ್ಯ
Yatnal marriage


ವಿಜಯಪುರ, 15 ಮಾರ್ಚ್ (ಹಿ.ಸ.)

ಆ್ಯಂಕರ್ : ವಿಜಯಪುರದ ಜನಪ್ರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪುತ್ರ ರಾಮನಗೌಡ ಪಾಟೀಲ ಅವರ ವಿವಾಹ ಸಮಾರಂಭವು ವಿಜಯಪುರದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.

ಸಮಾರಂಭದಲ್ಲಿ ರಾಜ್ಯದ ಪ್ರಮುಖ ರಾಜಕೀಯ ಗಣ್ಯರು ಭಾಗಿಯಾಗಿ ನೂತನ ದಂಪತಿಗೆ ಶುಭಾಶಯ ಕೋರಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ, ಸಂಸದರಾದ ಗೋವಿಂದ್ ಕಾರಜೋಳ್, ಸಿ ಸಿ ಪಾಟೀಲ್, ಮಾಜಿ ಸಂಸದರಾದ ಉಮೇಶ್ ಜಾದವ್, ಮಾಜಿ ಸಚಿವರಾದ ಹಾಲಪ್ಪಾ ಆಚಾರ್, ಶಾಸಕರಾದ ಬಸವರಾಜ್ ಮಟ್ಟಿಮುಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಅಪ್ಪುಗೌಡ ಪಾಟೀಲ ರೇವೂರ, ವಿವೇಕಾನಂದ ಡಬ್ಬಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ದಂಪತಿಗೆ ಶುಭ ಹಾರೈಸಿದರು.

ವಿವಾಹ ಸಮಾರಂಭದಲ್ಲಿ ವಿಜಯಪುರ ಜಿಲ್ಲೆಯ ವಿವಿಧ ಕ್ಷೇತ್ರಗಳ ಗಣ್ಯರು, ಕಾರ್ಯಕರ್ತರು ಹಾಗೂ ಬಂಧುಬಳಗ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶುಭಾಶಯಗಳನ್ನು ಸಲ್ಲಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande