
ವಿಜಯಪುರ, 15 ಮಾರ್ಚ್ (ಹಿ.ಸ.)
ಆ್ಯಂಕರ್ : ಕರ್ನಾಟಕದ ಪೌರಾಣಿಕ ರಂಗಭೂಮಿ ಪರಂಪರೆಯನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯಮಟ್ಟದ ಪೌರಾಣಿಕ ನಾಟಕಗಳ ಏಕವ್ಯಕ್ತಿ ಪಾತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಕರ್ನಾಟಕ ನಾಟಕ ಜನಪದ ಕಲಾವಿದರ ಅಭಿವೃದ್ಧಿ ಸಂಘ ಹುಬ್ಬಳ್ಳಿ ಸಂಸ್ಥೆಯ ವತಿಯಿಂದ ಏಪ್ರಿಲ್ 25 ಮತ್ತು 26, 2026ರಂದು ಈ ಸ್ಪರ್ಧೆ ನಡೆಯಲಿದೆ ಎಂದು ತನು ಪೌಂಡೇಷನ್ ಸದಸ್ಯರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕನ್ನಡದ ಪೌರಾಣಿಕ ನಾಟಕಗಳಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ಅಪಾರ ಬೇಡಿಕೆ ಇದ್ದು, ಇಂತಹ ನಾಟಕಗಳಲ್ಲಿ ಅಭಿನಯಿಸುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸಂಸ್ಥೆಯ ಸಂಸ್ಥಾಪಕರಾದ ತೆರೆಸಮ್ಮ ಡಿಸೋಜಾ ಅವರ ಪುಣ್ಯಸ್ಮರಣೆಯ ನೆನಪಿನೋತ್ಸವದ ಅಂಗವಾಗಿ ಸ್ಪರ್ಧೆಯನ್ನು ನಡೆಸಲಾಗುತ್ತಿದೆ.
ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರು ಪೌರಾಣಿಕ ನಾಟಕಗಳ ಪ್ರಸಿದ್ಧ ಪಾತ್ರಗಳನ್ನು ಏಕವ್ಯಕ್ತಿಯಾಗಿ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಸ್ಪರ್ಧೆಯ ಮೂಲಕ ಪೌರಾಣಿಕ ರಂಗಭೂಮಿ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಡಾ. ಹೆಲೆನ್ ಮೈಸೂರು ತಿಳಿಸಿದ್ದಾರೆ.
ಬಹುಮಾನಗಳು:
ಪ್ರಥಮ ಬಹುಮಾನ: ₹10,000
ದ್ವಿತೀಯ ಬಹುಮಾನ: ₹5,000
ತೃತೀಯ ಬಹುಮಾನ: ₹3,000
ಸ್ಪರ್ಧೆಯ ನಿಯಮಗಳು:
ಏಕವ್ಯಕ್ತಿ ಪಾತ್ರವು ಕಡ್ಡಾಯವಾಗಿ ಪೌರಾಣಿಕ ನಾಟಕದ ಪ್ರಸಂಗವಾಗಿರಬೇಕು ಮತ್ತು ಅರ್ಜಿಯಲ್ಲಿ ನಾಟಕಕಾರ ಹಾಗೂ ನಾಟಕದ ಹೆಸರನ್ನು ನಮೂದಿಸಬೇಕು.
ವಯೋಮಿತಿ:
ಜೂನಿಯರ್: 6 ರಿಂದ 18 ವರ್ಷ
ಸೀನಿಯರ್: 19 ರಿಂದ 70 ವರ್ಷ
ಲಿಂಗಭೇದವಿಲ್ಲದೆ ಎಲ್ಲಾ ವಯಸ್ಸಿನವರು ಭಾಗವಹಿಸಬಹುದು.
ಪಾತ್ರದ ವೇಷಭೂಷಣ, ಅಲಂಕಾರ ಮತ್ತು ಸಂಗೀತ ವ್ಯವಸ್ಥೆ ಸ್ಪರ್ಧಿಗಳದೇ ಆಗಿರುತ್ತದೆ.
ಪ್ರದರ್ಶನದ ಗರಿಷ್ಠ ಅವಧಿ 10 ನಿಮಿಷ; ತೀರ್ಪುಗಾರರ ತೀರ್ಮಾನವೇ ಅಂತಿಮ.
ಪ್ರವೇಶ ಶುಲ್ಕ ₹2000.
ಸ್ಪರ್ಧೆ ಕನ್ನಡ ಸಾಹಿತ್ಯ ಪರಿಷತ್ತಿನ ವರಣದಲ್ಲಿರುವ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಜೂನಿಯರ್ ವಿಭಾಗ: ಏಪ್ರಿಲ್ 25, ಬೆಳಿಗ್ಗೆ 10:30
ಸೀನಿಯರ್ ವಿಭಾಗ: ಏಪ್ರಿಲ್ 26, ಬೆಳಿಗ್ಗೆ 10:30 ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ತನು ಪೌಂಡೇಷನ್, ಈ ಕುರಿತು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ದೂರವಾಣಿ ಸಂಖ್ಯೆ ನೀಡಿದ್ದಾರೆ. 7624820252, 9902096451, 8197137309 ಸಂಪರ್ಕಿಸಬಹುದು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande