ಬಸವತತ್ತ್ವದ ಪ್ರಚಾರಕ್ಕೆ ಜೀವನ ಸಮರ್ಪಿಸಿದ ಮಾತೆ ಮಹಾದೇವಿ:ಎಂಬಿಪಿ
ವಿಜಯಪುರ, 13 ಮಾರ್ಚ್ (ಹಿ.ಸ.) ಆ್ಯಂಕರ್ : ಬಸವತತ್ತ್ವ ಹಾಗೂ ವಚನ ಸಾಹಿತ್ಯದ ಪ್ರಚಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವಿಶ್ವದ ಪ್ರಪ್ರಥಮ ಮಹಿಳಾ ಜಗದ್ಗುರುಗಳಾದ ಡಾ ಮಾತೆ ಮಹಾದೇವಿ ಅವರ ಜನ್ಮದಿನದ ಅಂಗವಾಗಿ ಲಿಂಗಾಯತ ಸಮಾಜದ ಭಕ್ತರು ಹಾಗೂ ಬಸವಭಕ್ತರು ಭಕ್ತಿಪೂರ್ವಕವಾಗಿ ಅವರನ್ನು ಸ್ಮರಿಸಬೇಕು
ಮಾತೆಮಹಾದೇವಿ


ವಿಜಯಪುರ, 13 ಮಾರ್ಚ್ (ಹಿ.ಸ.)

ಆ್ಯಂಕರ್ : ಬಸವತತ್ತ್ವ ಹಾಗೂ ವಚನ ಸಾಹಿತ್ಯದ ಪ್ರಚಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವಿಶ್ವದ ಪ್ರಪ್ರಥಮ ಮಹಿಳಾ ಜಗದ್ಗುರುಗಳಾದ ಡಾ ಮಾತೆ ಮಹಾದೇವಿ ಅವರ ಜನ್ಮದಿನದ ಅಂಗವಾಗಿ ಲಿಂಗಾಯತ ಸಮಾಜದ ಭಕ್ತರು ಹಾಗೂ ಬಸವಭಕ್ತರು ಭಕ್ತಿಪೂರ್ವಕವಾಗಿ ಅವರನ್ನು ಸ್ಮರಿಸಬೇಕು ಎಂದು ವಿಜಯಪುರ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸವಧರ್ಮದ ಪೀಠಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಮಾತೆ ಮಹಾದೇವಿ ಅವರು ಬಸವಣ್ಣ ಪ್ರತಿಪಾದಿಸಿದ ಬಸವತತ್ತ್ವ ಮತ್ತು ವಚನ ಸಾಹಿತ್ಯದ ಮಹತ್ವವನ್ನು ಸಮಾಜಕ್ಕೆ ಪರಿಚಯಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಸಮಾನತೆ, ಮಾನವೀಯತೆ, ಶ್ರಮದ ಗೌರವ ಮತ್ತು ಅಂಧಶ್ರದ್ಧೆ ನಿರ್ಮೂಲನೆ ಎಂಬ ಬಸವತತ್ತ್ವದ ಮೌಲ್ಯಗಳನ್ನು ಜನಮಾನಸಕ್ಕೆ ತಲುಪಿಸುವುದಕ್ಕಾಗಿ ಅವರು ತಮ್ಮ ಬದುಕನ್ನೇ ಸಮರ್ಪಿಸಿದ್ದರು.

ಲಿಂಗಾಯತ ಧರ್ಮದ ಬೋಧನೆ ಮತ್ತು ಪ್ರಸಾರಕ್ಕಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಬಸವಧರ್ಮದ ಪೀಠಗಳನ್ನು ಸ್ಥಾಪಿಸಿ ಧಾರ್ಮಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಗಳನ್ನು ಕೈಗೊಂಡಿದ್ದರು. ಬಸವತತ್ತ್ವದ ಅಧ್ಯಯನ, ವಚನ ಸಾಹಿತ್ಯದ ಪ್ರಚಾರ, ಸಮಾಜದಲ್ಲಿ ಸಮಾನತೆ ಹಾಗೂ ಮಹಿಳಾ ಸಬಲೀಕರಣಕ್ಕೆ ಅವರು ನೀಡಿದ ಕೊಡುಗೆ ಲಿಂಗಾಯತ ಸಮಾಜಕ್ಕೆ ಅಮೂಲ್ಯವಾಗಿದೆ.

ವಿಶ್ವದ ಪ್ರಪ್ರಥಮ ಮಹಿಳಾ ಜಗದ್ಗುರು ಎಂಬ ಗೌರವಕ್ಕೆ ಪಾತ್ರರಾದ ಮಾತೆ ಮಹಾದೇವಿ ಅವರು ಮಹಿಳೆಯರಿಗೂ ಧಾರ್ಮಿಕ ಹಾಗೂ ಸಾಮಾಜಿಕ ನಾಯಕತ್ವದ ಅವಕಾಶವಿದೆ ಎಂಬ ಸಂದೇಶವನ್ನು ಬಲವಾಗಿ ಸಾರಿದರು. ಅವರ ಉಪನ್ಯಾಸಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕ ಬಸವತತ್ತ್ವದ ಸಂದೇಶವನ್ನು ದೇಶದಾದ್ಯಂತ ಹರಡಿದರು.

ಇಂದು ಅವರ ಜನ್ಮದಿನದ ಅಂಗವಾಗಿ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳು, ಬಸವಭಕ್ತರು ಹಾಗೂ ಅಭಿಮಾನಿಗಳು ಅವರನ್ನು ಗೌರವಪೂರ್ವಕವಾಗಿ ಸ್ಮರಿಸಿ, ಬಸವತತ್ತ್ವದ ಮಾರ್ಗದಲ್ಲಿ ನಾವೆಲ್ಲರೂ ನಡೆಯುವ ಸಂಕಲ್ಪವನ್ನು ಮಾಡೊಣ ಎಂದು ಅವರು ಕರೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande