
ಗದಗ, 13 ಮಾರ್ಚ್ (ಹಿ.ಸ.)
ಆ್ಯಂಕರ್: ಮೋದಿ ನೇತ್ರತ್ವದ ಕೇಂದ್ರ ಸರ್ಕಾರದ ಧೋರಣೆಯಿಂದಾಗಿ ಜಾಗತೀಕವಾಗಿ ಭಾರತದ ಮಾನ ಹರಾಜಾಗುವಂತಾಗಿದೆ ಬೆಲೆ ಏರಿಕೆಯಿಂದ ಜನರ ಬದುಕು ಕಷ್ಟವಾಗಿದೆ ಎಂದು ಮಾಜಿ ಸಚಿವರಾದ ಬಿ.ಆರ್. ಯಾವಗಲ್ಲ ಅಕ್ರೋಶ ವ್ಯಕ್ತಪಡಿಸಿದರು.
ಗದಗ ನಗರದ ಗಾಂಧಿ ಸರ್ಕಲ್ ನಲ್ಲಿ ಗದಗ ಜಿಲ್ಲಾ ಕಾಂಗ್ರೆಸ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಡುಗೆ ಅನಿಲ( ಸಿಲಿಂಡರ) ದರ ಏರಿಸಿದ್ದನ್ನು ಕೆಂದ್ರ ಸರ್ಕಾರದ ನಡೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ನಮ್ಮ ದೇಶ ಎಲ್ಲರನ್ನು ಸಮಾನರಾಗಿ ಕಾಣುವ ಮೂಲಕ ಭಾರತ ದೇಶಕ್ಕೆ ಶತ್ರುಗಳ ಸಂಖ್ಯೆ ಇಲ್ಲದಂತಾಗಿತ್ತು. ಆದರೆ ನರೇಂದ್ರ ಮೋದಿ ಅವರ ಆಡಳಿತದ ವೈಫಲ್ಯದಿಂದಾಗಿ ಇಂದು ಭಾತರಕ್ಕೆ ಶತ್ರುಗಳ ಸಂಖ್ಯೆ ಹೆಚ್ಚುವಂತೆ ಮಾಡಿದೆ. ಮೋದಿಯವರ ವಿಚಿತ್ರ ನೀತಿಯಿಂದಾಗಿ ದೇಶ ಎತ್ತ ಸಾಗುತ್ತಿದೆ ಎನ್ನುವುದೇ ತಿಳಿಯದಾಗಿದೆ. ವಿದೇಶಾಮಗ ನೀತಿಯನ್ನು ಬಿಟ್ಟಿರಿ, ಆರ್ಥಿಯ ನೀತಿಯು ಹಾಳಾಗಿದೆ. ಎಲ್ಲರಿಗೂ ಬೇಕಾದ ಭಾರತದ ಮರ್ಯಾದೆಯನ್ನು ಹಾಳಾಗಿದೆ. ನಮ್ಮ ದೇಶಕ್ಕೆ ಬರಬೇಕಾದ ಸಾಮಗ್ರಿಗಳು, ಗೌರವ ಎಲ್ಲವನ್ನು ಇಲ್ಲದಂತೆ ಮಾಡಿಬಿಟ್ಟಿದ್ದೀರಿ ಯುದ್ಧದ ಸಂದರ್ಭವನ್ನು ಅರ್ಥಮಾಡುಕೊಳದೆ ಬೆಂಕಿ ಹತ್ತಿದಾಗ ಬಾವಿ ತೊಟುವ ಕೆಲಸ ಮಾಡುತ್ತಿದ್ದಿರಿ, ಅಂಬಾನಿ, ಅದಾನಿಯಂಥರ ಗೆಳೆತನದಿಂದಾಗಿ ದೇಶದ ಸಾಮಾನ್ಯ ಜನರ ಮುರಾಬಟ್ಟೆ ಮಾಡುತ್ತಿದ್ದಿರಿ ಎಂದು ಅಜ್ರೋಶ ವ್ಯಕ್ತಪಡಿಸಿದರು.
ಗದಗ ಜಿಲ್ಲಾ ಯುವ ಕಾಂಗ್ರೆಸ ಅಧ್ಯೆ ಕೃಷ್ಣಗೌಡ ಪಾಟೀಲ ಮಾತನಾಡಿ ಬಿಜೆಪಿ ನೇತ್ರತ್ವದ ಕೇಂದ್ರ ಸರ್ಕಾರ ಧ್ವಂಧ್ವ ನೀತಿಯಿಂದಾಗಿ ಜಾಗತೀಕವಾಗಿ ಭಾರತ ಎಲ್ಲ ದೇಶಗಳ ಸ್ನೇಹಚನ್ನು ಕಳೆದುಕೊಂಡಿದ್ದು ಇನ್ನು ದೇಶದಲ್ಲಿ ಜನರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಅಡುಗೆ ಅನಿಲ ಪೂರೈಕೆ ಮಾಡದೆ ಜನರಿಗೆ ತೊಂದರೆ ನೀಡುತ್ತಿದ್ದು ಕೇಂದ್ರದಿಂದ ಜನಸಾಮಾನ್ಯರಿಗೆ ನಿತ್ಯ ದೊಂದರೆಯಾಗುತ್ತಿದ್ದು ಇದನ್ನು ಮನವರಿಕೆ ಮಾಡಿಕೊಂಡು ಅಧಿಕಾರ ನಡೆಸಬೇಕಾದ ಸರ್ಕಾರ ಕಣ್ಮುಚ್ಚಿ ಕುಳಿತಿದ್ದು ಜನರುಗೆ ಮಾಡಿದ ಮೋಸವಾಗಿದೆ ಎಂದರು.
ಎಲ್ಲ ಸಂದರ್ಭದಲ್ಲಿಯೂ ಸರ್ಕಾರಗಳು ಜನಪರವಾಗುರಬೇಕು ಆದರೆ ಜನರಿಗೆ ಬೆಲೆ ಏರಿಕೆ ಹೆರುವ ಮೂಲಕ ಬಡ ಜನರಿಗೆ ಕೇಂದ್ರ ಸರ್ಕಾರ ಶಾಪದಂತೆ ನಡೆದುಕೊಳುತ್ತಿದೆ ಎಂದರು.
ದೇಶದಲ್ಲಿ ಮನ ಮೋಹನ ಸಿಂಗ್ ನೇತ್ರತ್ವದ ಸರ್ಕಾರ ಸಾಕಷ್ಟು ಜನಪರ ಕಾರ್ಯಗಳನ್ನು ಹಮ್ನಿಕೊಂಡು ದೇಶವನ್ನು ಅಉಸ್ಥಿಯಲ್ಲಿಟ್ಟಿದನ್ನು ಗಮನಿಸಬೇಕಾದ ಅಗತ್ಯವಿದೆ ಎಂದರು.
ರೋಣ ತಾಲುಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲ ಮಾತನಾಡಿ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದಿಂದ ತೊಂದರೆಯಾಗುತ್ತಿದೆ. ಜನವಸಾಕಷ್ಟು ಕೇಂದ್ರದ ಆಡಳಿತದ ವಿರುದ್ಧ ದಂಗೆ ಏಳುತ್ತಿದೆ ಅಂಥ ನೀಚ ಆಡಳಿತವನ್ನು ಜನರಿಗೆ ನೀಡುತ್ತಿರುವುದರಿಂದ ಜನರಿಗೆ, ಹೊಟಲ್ ಗಳಿಗೆ ಅಡುಗೆ ಸಿಲಿಂಡರ ನಿಡದೆ ಜನಸಾಮಾನ್ಯರ ಬದುಕು ದುಸ್ಥರಗೊಂಡಿದೆ. ಜನರಿಗೆ ಪೆಟ್ರೊಲ, ಡಿಸೆಲ್, ಸಿಲೆಂಡರ ಸೇರಿದಂತೆ ಯಾವುದೆ ಸೌಲಭ್ಯವನ್ನು ನೀಡದೆ ಜನರುಗೆ ದ್ರೊಹ ಮಾಡುತ್ತಿದೆ ಎಂದರು.
ಗದಗ ಜಿಲ್ಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ವಿ. ಅಸೂಟಿ ಮಾತನಾಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ರಂತರ ಅನ್ಯಾಯ ನಿರಂತರವಾಗಿ ಜನರ ದಿನ ನಿತ್ಯದ ಅಡುಗೆ ಅನಿಲ ಪೂರೈಸುವಲ್ಲಿಯೂ ವಿಫಲವಾಗಿದ್ದು ದೇಶಕ್ಕೆ ಅನ್ಯಾಯದ ಜೊತೆಗೆ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದರು.
ಗದಗ ಜಿಲ್ಲಾ ಮಹಿಳಾ ಕಾಂಗ್ರೆಸ ಅಧ್ಯಕ್ಷೆ ನೀಲಮ್ಮ ಬೋಳನವರ ಮಾತನಾಡಿ ಕೇಂದ್ರ ಸರ್ಕಾರ ಮಹಿಳೆಯರ ರಕ್ಷಣೆಗೆ ನಿಲ್ಲುವ ಬದಲು ಸಿಲಿಂಡರ ದರ ಏರಿಗೆ, ಪೂರೈಕೆ ಸ್ಥಗಿತ ಮಾಡುವ ಮೂಲಕ ಮಹಿಳೆಯರನ್ನು ಶೋಷಣೆ ಮಾಡುತ್ತಿದ್ದು ಮಹಿಳೆಯರು ದಂಗೆ ಏಳುವ ಮೊದಲು ಎಚ್ಚೆತ್ತುಕೊಳಬೇಕು, ಕೆಂದ್ರ ಸರ್ಕಾರಕ್ಕೆ ಮಹಿಳೆಯರ ಶಾಪ ತಟ್ಟುತ್ತದೆ ಇಲ್ಲವಾದರೆ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪ್ರವೀಣ ಯಾವಗಲ್ಲ, ಗದಗ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಅಶೋಕ ಮಂದಾಲಿ, ಸಿಗದಗ ಜಿಪಂ ಮಾಜಿ ಅಧ್ಯಕ್ಷ ದ್ದು ಪಾಟೀಲ, ಅಕ್ಬರಸಾಬ ಬಬರ್ಚಿ, ಭಾಷಾಸಾಬ ಮಲ್ಲಸಮುದ್ರ,ಎಸ್.ಎನ್.ಬಳ್ಳಾರಿ ವ್ಹಿ.ಬಿ. ಸೋಮನಕಟ್ಟಿಮಠ, ಬಸವರಾಜ ಕಡೇಮನಿ, ಉಮರಫಾರುಕ ಹುಬ್ಬಳ್ಳಿ, ಅಮರೇಶ ಮಾಗಡಿ,ಬಿ.ಆರ್ ಬೆನಕನವಾರಿ, ಉಮೇಶ ಹೂಗಾರ, ರಮೇಶ ಹೊನ್ನಿನಾಯ್ಕರ, ಡಿ.ಡಿ. ಮುರನಾಳ, ಶರಣಪ್ಪ ಬೆಟಗೇರಿ, ಎಂ.ಎನ್. ಶಾಲಗಾರ,ಪ್ರವೀಣ ಯಾವಗಲ್, ವೀರಯ್ಯ ಮಠಪರಿ,ಸಂಜಯ ದೊಡ್ಡ ಮನಿ ವಾಣಿ ಹಿರೇಮಠ, ಸಾವಿತ್ರಿ ಹೂಗಾರ, ದಾಕ್ಷಾಯಿಣಿ ಹಾಸನಕರ್, ಲಲಿತಾ ಗೊಳಗೊಳಕಿ ಸೇರಿದಂತೆ ಮತ್ತಿತರರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP