
ಗದಗ, 13 ಮಾರ್ಚ್ (ಹಿ.ಸ.)
ಆ್ಯಂಕರ್: 2014 ರಲ್ಲಿ ಮನಮೋಹನ್ ಸಿಂಗ ರವರು ಪ್ರಧಾನಮಂತ್ರಿಯಾಗಿದ್ದಾಗ ಅಂದಿನ ಸಿಲೆಂಡರ್ ಬೆಲೆ 1241 ರೂಪಾಯಿ ಇತ್ತು ಬಿಜೆಪಿ ಅಧಿಕಾರಕ್ಕೆ ಬಂದ ನಂತರ 2021 ರಲ್ಲಿ ಪ್ರತಿ ಸಿಲೆಂಡರ್ ಬೆಲೆ 805 ರೂಪಾಯಿಗೆ ಇಳಿಸಿದ ಬಿಜೆಪಿ ಸರ್ಕಾರ 2025 ರಲ್ಲಿ 853 ರೂಪಾಯಿ ಇತ್ತು ಕೊಲ್ಲಿ ರಾಷ್ಟ್ರದಲ್ಲಿ ಯುದ್ಧ ನಡೆದಿದ್ದರಿಂದ ಪ್ರತಿ ಸಿಲೆಂಡರ್ ಬೆಲೆಯನ್ನು ಕೇಂದ್ರ ಸರ್ಕಾರ 60 ರೂಪಾಯಿ ಏರಿಸಿದ್ದು ಒಟ್ಟಾರೆ ಕಾಂಗ್ರೆಸ್ ಸರ್ಕಾರಕ್ಕಿಂತ ಬಿಜೆಪಿ ಸರ್ಕಾರದಲ್ಲಿ 328 ರೂಪಾಯಿ ಕಡಿಮೆ ಮಾಡಿ ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದು, ಇದರ ಬಗ್ಗೆ ಕಾಂಗ್ರೇಸ್ನ ನಾಯಕರು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದು ಇದಕ್ಕೆ ಕಿವಿಗೊಡಬಾರದೆಂದು ಜಿಲ್ಲಾ ಬಿಜೆಪಿ ವಕ್ತಾರರಾದ ಎಂ.ಎಂ.ಹಿರೇಮಠರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅವರಿಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಕಾಂಗ್ರೆಸ್ ಸರ್ಕಾರದಲ್ಲಿ ಸಿಕ್ಕಾಪಟ್ಟೆ ಬೆಲೆಯನ್ನು ಏರಿಸಿರುವುದನ್ನು ಮರೆತಂತೆ ಕಾಣುತ್ತದೆ. ಕಾಂಗ್ರೇಸ್ ಕಾಲದಲ್ಲಿ ಗ್ಯಾಸ್ ಬುಕ್ ಮಾಡಿ 15 ದಿನಗಳು ಕಳೆದರೂ ಸಿಲೆಂಡರ್ ಸಿಗದೆ ಬೆಳಗಿನ ಜಾವ 05 ಗಂಟೆಗೆ ಗ್ಯಾಸ್ ಏಜೆನ್ಸಿ ಮುಂದೆ ಜನ ಕ್ಯೂ ನಿಲ್ಲುತ್ತಿದ್ದರು. ಹಿಂದಿನ ಕಾಂಗ್ರೇಸ್ ಸರ್ಕಾರ ವರ್ಷಕ್ಕೆ ಕೇವಲ 6 ಸಿಲೆಂಡರ್ ಮಾತ್ರ ನೀಡುತ್ತಿದ್ದರು. ಮೋದಿಯವರು ಅಧಿಕಾರಕ್ಕೆ ಬಂದ ನಂತರ ಒಂದು ಕರೆ ಮಾಡಿದ ಅರ್ಧ ದಿನ ಅಥವಾ ಒಂದು ದಿನದಲ್ಲಿ ಮನೆಯ ಬಾಗಿಲಿಗೆ ಸಿಲೆಂಡರ್ ಬರುವಂತೆ ಮಾಡಿರುವರು. ಕಟ್ಟಿಗೆ ಹುಡುಕಿ ಅಡುಗೆ ಮಾಡುತ್ತಿದ್ದ ಗ್ರಾಮೀಣ ಮಹಿಳೆಯರಿಗೆ ಕೂಡ ಅನುಕೂಲವಾಗಲೆಂದು ಉಜ್ವಲ ಯೋಜನೆಯ ಅಡಿಯಲ್ಲಿ ಸುಮಾರು 15 ಕೋಟಿ ಉಚಿತ ಗ್ಯಾಸ್ ಸಂಪರ್ಕ ಕೊಟ್ಟ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ.
ಅಂತಾರಾಷ್ಟ್ರೀಯ ಯುದ್ಧದ ಕಾರಣಕ್ಕೆ ಗ್ಯಾಸ್ ಸಿಲೆಂಡರ್ ಸರಬುರಾಜಿನಲ್ಲಿ ಸ್ವಲ್ಪ ವ್ಯತ್ಯಾಸವಾಗಿದ್ದನ್ನೇ ಕಾಂಗ್ರೇಸ್ ನ ನಾಯಕರುಗಳು ಲೋಕಸಭೆಯ ಮುಂದೆ, ಜಿಲ್ಲಾ ಕೇಂದ್ರದಲ್ಲಿ ಹಾರಾಟ, ಚೀರಾಟವನ್ನು ಮಾಡುತ್ತಿರುವುದು ಬುದ್ಧಿ ಇಲ್ಲದೆ ವರ್ತಿಸುತ್ತಿರುವುದನ್ನು ನೋಡಿದರೆ ಕನಿಕರವೆನಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ನಿಮಿಷ ಕೂಡ ದೇಶದ ಅಭಿವೃದ್ಧಿಗಾಗಿ ಜನರ ನಾಡಿಮಿಡಿತವನ್ನು ಅರಿತುಕೊಂಡು ಜನರಿಗಾಗಿ ಕೆಲಸವನ್ನು ಮಾಡುತ್ತಿರುವರು. ಆದರೆ ಕೇಂದ್ರದ ವಿರೋಧ ಪಕ್ಷದ ನಾಯಕ ಬೇಜಾಬ್ದಾರಿಯಿಂದ ವರ್ತಿಸುತ್ತಾ ದೇಶದ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಇಂತಹ ಕಠಿಣ ಸಂದರ್ಭದಲ್ಲಿ ಸರ್ಕಾರದೊಂದಿಗೆ ಕೈಜೊಡಿಸುವುದನ್ನು ಬಿಟ್ಟು, ಬಿಟ್ಟಿ ಪ್ರಚಾರಕ್ಕಾಗಿ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಾ ಜನರ ಮನಸನ್ನು ಕೆಡಿಸುತ್ತಾ ಹೊರಟಿರುವುದು ನಾಚಿಕೆಗೆಡಿನ ಕ್ರಮ. ‘ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡುಗುಗಳಿಗೆ ಇರಾನ ಸರ್ಕಾರ ಅನುಮತಿ ನೀಡಿದೆ. ಇದು ಭಾರತದ ರಾಜತಾಂತ್ರಿಕ ಗೆಲುವು.
ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ದೇಶಗಳೊಂದಿಗೆ ಒಳ್ಳೆಯ ಸೌಹಾರ್ದತೆಯನ್ನು ಇಟ್ಟುಕೊಂಡು ಬಂದಿರುವರು. ಜಗತ್ತಿನ 26 ದೇಶಗಳು ತಮ್ಮ, ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ನೀಡಿರುವರು. 19 ದೇಶದ ಪಾರ್ಲಿಮೆಂಟ್ನಲ್ಲಿ ಹೋಗಿ ಭಾಷಣ ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಜಗತ್ತಿನ ಈ ವರೆಗಿನ ಯಾವ ನಾಯಕರಿಗೂ ಸಿಗದ ಗೌರವವನ್ನು ಪ್ರಧಾನಿ ನರೇಂದ್ರ ಮೋದಿಯವರು ಪಡೆಯುತ್ತಿರುವುದನ್ನು ಸಹಿಸಲಾರದ ಕಾಂಗ್ರೇಸ್ ಗರು ಅವರ ಬಗ್ಗೆ ಸುಳ್ಳು ಅಪಪ್ರಚಾರವನ್ನು ಮಾಡುವುದನ್ನು ಇನ್ನಾದರೂ ನಿಲ್ಲಿಸಬೇಕೆಂದು ಎಂ.ಎಂ.ಹಿರೇಮಠರವರು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP