ತಪೋವನದ ಶ್ರೀ ಶಿವಕುಮಾರ ಸ್ವಾಮಿಗಳು
ಧಾರವಾಡ, 12 ಮಾರ್ಚ್ (ಹಿ.ಸ.): ಆ್ಯಂಕರ್: ಧಾರವಾಡ ತಪೋವನದ ಶ್ರೀ ಶಿವಕುಮಾರ ಸ್ವಾಮಿಗಳು ಕುರಿತಾದ ಲೇಖನ ತಪೋವನ ಎಂಬ ಹೆಸರು ಎರಡು ಪದಗಳ ಸಂಯೋಜನೆಯಾಗಿದೆ: ತಪಸ್ ಮತ್ತು ವನ. ತಪಸ್ ಎಂದರೆ ಧ್ಯಾನ ಮತ್ತು ವನ ಎಂದರೆ ಕಾಡು ಅಥವಾ ಕಾಡು. ಆದ್ದರಿಂದ ತಪೋವನದ ಅರ್ಥ ಧ್ಯಾನಕ್ಕಾಗಿ ಉದ್ಯಾನ ಎಂದಾಗಿರಬಹುದು
Shivakumara Swami


ಧಾರವಾಡ, 12 ಮಾರ್ಚ್ (ಹಿ.ಸ.):

ಆ್ಯಂಕರ್:

ಧಾರವಾಡ ತಪೋವನದ ಶ್ರೀ ಶಿವಕುಮಾರ ಸ್ವಾಮಿಗಳು ಕುರಿತಾದ ಲೇಖನ

ತಪೋವನ ಎಂಬ ಹೆಸರು ಎರಡು ಪದಗಳ ಸಂಯೋಜನೆಯಾಗಿದೆ: ತಪಸ್ ಮತ್ತು ವನ. ತಪಸ್ ಎಂದರೆ ಧ್ಯಾನ ಮತ್ತು ವನ ಎಂದರೆ ಕಾಡು ಅಥವಾ ಕಾಡು. ಆದ್ದರಿಂದ ತಪೋವನದ ಅರ್ಥ ಧ್ಯಾನಕ್ಕಾಗಿ ಉದ್ಯಾನ ಎಂದಾಗಿರಬಹುದು. ಧಾರವಾಡ, ಒಂದು ಸುಂದರ ಮತ್ತು ಶಾಂತಿಯುತ ಪುಟ್ಟ ಪಟ್ಟಣ (ಒಂದು ಕಾಲದಲ್ಲಿ) ಮಹಾತಪಸ್ವಿ ಶ್ರೀ ಕುಮಾರಸ್ವಾಮಿಜಿಯವರ ತಪೋವನದ ನೆಲೆಯಾಗಿರುವ ಅದೃಷ್ಟ. ಅವರು ಯೋಗಿ, ತತ್ವಜ್ಞಾನಿ, ಮಾನವತಾವಾದಿ, ಬರಹಗಾರ ಮತ್ತು ಸಮಾಜ ಸುಧಾರಕರಾಗಿದ್ದರು.

ಜನನ ಮತ್ತು ಬಾಲ್ಯ:

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಪುಟ್ಟ ಗ್ರಾಮ ಹುಣಶಿಕಟ್ಟಿ ಅಲ್ಲಿ ಲಕ್ಷ್ಮಣಪ್ಪ ಮತ್ತು ಚಿನ್ನವ್ವ ಎಂಬ ಯಲಿಗಾರ ಕುಟುಂಬದ ಬಡ ದಂಪತಿಗಳು ಸಣ್ಣ ಪುಟ್ಟ ಕೂಲಿ ನಾಲೆ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದರು. ಮದುವೆಯಾಗಿ ಅನೇಕ ವರ್ಷಗಳಾಗಿದ್ದರೂ ದಂಪತಿಗಳಿಗೆ ಮಕ್ಕಳಾಗಿರಲಿಲ್ಲ. ಯಾರೋ ಒಬ್ಬರು ಚಿನ್ನಮ್ಮನಿಗೆ ಮಗಳೇ ಬೆಳಿಗ್ಗೆ ಆರಕ್ಕೆ ಎದ್ದು ರುದ್ರಮುನಿ ಗದ್ದುಗೆಯ ಮಠದಲ್ಲಿ ನಿನ್ನ ಸೆರಗಿನಿಂದ ಮಠದ ಕಸವನ್ನು ಹೊಡೆದರೆ ನಿನಗೆ ಮಕ್ಕಳಾಗುತ್ತವೆ ಎಂದಿದ್ದರಂತೆ. ಅದೇ ರೀತಿ ಚಿನ್ನಮ್ಮ ಪ್ರತಿನಿತ್ಯ ಬೆಳಿಗ್ಗೆ ಸೂರ್ಯೋದಯಕ್ಕಿಂತ ಪೂರ್ವದಲ್ಲಿ ತನ್ನ ಸೀರೆಯ ಸೆರಗಿನಿಂದ ಕಸವನ್ನು ಹೊಡೆಯುತ್ತಿದ್ದಳು. ಒಂದು ದಿನ ಶ್ರೀ ರುದ್ರಮುನಿಮಠದ ಪೀಠಾಧಿಪತಿ ಬೆಳಿಗ್ಗೆ ಯಾರೋ ಮಹಿಳೆ ಮಠದ ಕಸವನ್ನು ತನ್ನ ಸೀರೆಯ ಸೆರಗಿನಿಂದ ಹೊಡೆಯುತ್ತಿರುವುದನ್ನು ಕಂಡು ಯಾಕಮ್ಮ ಈ ರೀತಿಯ ಸೇವೆ ಎಂದು ಕೇಳಿದರಂತೆ , ಆಗ ಚಿನ್ನವ್ವ ತನ್ನ ಅಳಲನ್ನು ತೋಡಿಕೊಂಡಳು, ಆಗ ಶ್ರೀಗಳು ತಾಯೆ ನಿನಗೆ ಜಗದ್ವಿಖ್ಯಾತ ಮಗ ಹುಟ್ಟುತ್ತಾನೆ ಆದರೆ ಅವನನ್ನು ನೋಡಲಿಕ್ಕೆ ನೀನು ಇರುವುದಿಲ್ಲ ಎಂದಿದ್ದರಂತೆ, ಆಗ ಚಿನ್ನವ್ವ ಜಗತ್ ಸುಧಾರಣೆಗೆ ನನ್ನಿಂದ ಒಬ್ಬ ಮಗ ಹುಟ್ಟುತ್ತಾನೆ ಎಂದರೆ ಅದಕ್ಕಿಂತ ಹೆಚ್ಚಿನ ಸಂತೋಷವೇನು ಎಂದು ಹೇಳಿ ಶ್ರೀಗಳಿಗೆ ನಮಸ್ಕರಿಸಿ ಮನೆಗೆ ಹೋದಳು. ಮುಂದೆ ಕೆಲವು ದಿನಗಳಲ್ಲಿ ಗರ್ಭವತಿಯಾಗಿ ಗಂಡು ಮಗುವಿಗೆ ಜನ್ಮ ನೀಡುತ್ತಲೇ , ಆದರೆ ಹೆರಿಗೆಯಾದ ಕೆಲವೇ ಕ್ಷಣಗಳಲ್ಲಿ ಚಿನ್ನವ್ವ ಅಸುನೀಗುತ್ತಾಳೆ ಓಣಿಯ ಹೆಣ್ಣುಮಕ್ಕಳ ಎದೆ ಹಾಲು ಕುಡಿದು ಅವರಿವರ ಪೋಷಣೆಯಲ್ಲಿ ಮಗು ಬೆಳೆಯಿತು ಎನ್ನುವ ಮಾತುಗಳು ಕೇಳಿ ಬರುತ್ತವೆ.

ಸ್ವಾಮೀಜಿ 1909 ರಲ್ಲಿ ಬೆಳಗಾವಿ ಜಿಲ್ಲೆಯ ಹುಣಶಿಕಟ್ಟಿ ಗ್ರಾಮದಲ್ಲಿ ಲಕ್ಷ್ಮಣಪ್ಪ ಮತ್ತು ಚಿನ್ನಮ್ಮ ದಂಪತಿಗಳಿಗೆ ಜನಿಸಿದರು. ಗುರುದೇವ ಎಂದು ಕರೆಯಲ್ಪಡುವ ಗಂಡು ಮಗುವನ್ನು ಚಿಕ್ಕ ವಯಸ್ಸಿನಲ್ಲಿಯೇ ಅನಾಥನನ್ನಾಗಿ ಮಾಡುತ್ತಾರೆ. ಗುರುದೇವರನ್ನು ಹುಣಶಿಕಟ್ಟಿಯ ನೀಲಮ್ಮ ದತ್ತು ತೆಗೆದುಕೊಳ್ಳುತ್ತಾರೆ. ಚಿಕ್ಕ ಗುರುದೇವರು ಬಾಲ್ಯದಲ್ಲಿಯೇ ಆಧ್ಯಾತ್ಮಿಕ ಆಸಕ್ತಿಯನ್ನು ಹೊಂದಿದ್ದಾರೆ. ಗುರುದೇವರು ಸೌದತ್ತಿ ಬಳಿಯ ಮಲಪ್ರಭಾ ನದಿಯ ದಡದಲ್ಲಿರುವ ನವಿಕುತೀರ್ಥದಲ್ಲಿ ಹಲವು ವರ್ಷಗಳ ಕಾಲ ಶಿವಯೋಗವನ್ನು ಅಭ್ಯಾಸ ಮಾಡುತ್ತಾರೆ. ಗುರುದೇವರು 18 ವರ್ಷ ವಯಸ್ಸಾಗುವ ಹೊತ್ತಿಗೆ ಗಮನಾರ್ಹ ಆಧ್ಯಾತ್ಮಿಕ ಬೆಳವಣಿಗೆಯನ್ನು ಪಡೆದಿದ್ದಾರೆ. ಗುರುದೇವರು 1932 ರಲ್ಲಿ ಪದವಿ ಪಡೆದರು ಮತ್ತು 1933 ರಲ್ಲಿ ದೀಕ್ಷೆ ಪಡೆದರು. ಅವರು ಧಾರವಾಡದ ಸಪ್ತಾಪುರದಲ್ಲಿ ನವಕಲ್ಯಾಣಮಠವನ್ನು ಸ್ಥಾಪಿಸಿದರು ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡರು. 1965 ರಲ್ಲಿ ಗುರುದೇವರು ಸಾಮಾಜಿಕ ಚಟುವಟಿಕೆಯಿಂದ ಮುಕ್ತರಾಗಿ ವಿದ್ವತ್ ಸನ್ಯಾಸವನ್ನು ಕೈಗೊಂಡರು. ಗುರುದೇವ, ಈಗ ಶ್ರೀ ಕುಮಾರಸ್ವಾಮಿಜಿ ಅವರು ಒಂದು ಆಧ್ಯಾತ್ಮಿಕ ಆಶ್ರಮವನ್ನು ಸ್ಥಾಪಿಸಿ ಅದಕ್ಕೆ ತಪೋವನ ಎಂದು ಹೆಸರಿಸಿದರು.

ಧಾರವಾಡದ ಸಪ್ತಾಪುರದಲ್ಲಿರುವ ತಪೋವನದ ಶ್ರೀ ಕುಮಾರಸ್ವಾಮಿಗಳು ಮಹಾನ್ ಆಧ್ಯಾತ್ಮಿಕ ಚಿಂತಕರು ಮತ್ತು ಸಮಾಜ ಸುಧಾರಕರು. 1933 ರಲ್ಲಿ ನವಕಲ್ಯಾಣಮಠ ಸ್ಥಾಪಿಸಿದ ಇವರು, ನಂತರ ತಪೋವನವನ್ನು ಸ್ಥಾಪಿಸಿ ಯೋಗ, ವೇದಾಂತ ಮತ್ತು ಸಾಮಾಜಿಕ ಸೇವೆಗೆ ಬದುಕು ಮುಡಿಪಾಗಿಟ್ಟಿದ್ದರು. ಇವರು 'ಪ್ರಣವ' ಮಾಸಿಕ ಪತ್ರಿಕೆಯ ಮೂಲಕ ಜ್ಞಾನ ಪ್ರಸಾರ ಮಾಡಿದರು.

ಅಂತಾರಾಷ್ಟ್ರೀಯ ಶಸ್ತ್ರ ಚಿಕಿತ್ಸಾ ತಜ್ಞರ ಸಮ್ಮೇಳನದಲ್ಲಿ ವಿದ್ವತ್ ಪೂರ್ಣ ಮಾತುಗಳನ್ನು ಆಡಿ ಇಡೀ ವೈದ್ಯಕೀಯ ವೈಜ್ಞಾನಿಕ ಜಗತ್ತನ್ನು ತಮ್ಮೆಡೆಗೆ ಸೆಳೆದುಕೊಂಡವರು. ಪಿನಿಯಲ್ ಗ್ರಂಥಿಯ ಕ್ರಿಯಾಶೀಲತೆ ಮತ್ತು ಯೋಗದ ಮಹತ್ವದ ಬಗ್ಗೆ ಸಾಕಷ್ಟು ಸಂಶೋಧನೆಯನ್ನು ಮಾಡಿದ್ದರು. ಯೋಗ ಅದರಲ್ಲೂ ಶರಣರು ಕಂಡ ಶಿವಯೋಗದ ಬಗ್ಗೆ ಅತ್ಯಂತ ವಿದ್ವತ್ ಪೂರ್ಣ ಮಾತುಗಳನ್ನಾಡಿ ಇಡೀ ಜಗತ್ತಿಗೆ ಬಸವಣ್ಣನವರ ಶರಣರ ಸಂದೇಶಗಳನ್ನು ಸಾರಿದರು.

ಕ್ರೈಸ್ತ್ ಜಗದ್ಗುರುಗಳಿಗೆ ಇಷ್ಟಲಿಂಗದ ಮಹತ್ವವನ್ನು ನೀಡಿದರು:

ಬಸವ ತತ್ವ ಮತ್ತು ಶಿವಯೋಗ ಸಾಧನೆ ಮಾಡುತ್ತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಉಪನ್ಯಾಸವನ್ನು ನೀಡುತ್ತಾ ಒಮ್ಮೆ ವ್ಯಾಟಿಕನ್ ನಗರಕ್ಕೂ ಹೋಗಿದ್ದರು ಅಲ್ಲಿ ಅವರಿಗೆ ಜಾನ್ ಪೋಪ್ ಪಾಲ್ 2 ಕ್ರೈಸ್ತ ಧರ್ಮದ ಜಾಗತಿಕ ಗುರುಗಳನ್ನು ಭೇಟಿ ಮಾಡಲು ಇಚ್ಛೆ ಪಟ್ಟರು ಹತ್ತು ದಿನಗಳ ಮೇಲೆ ಪೋಪ್ ರಿಂದ ಎರಡು ನಿಮಿಷಗಳ ಭೇಟಿಯ ಅವಕಾಶಕ್ಕೆ ಸಮಯ ನಿಗಧಿಪಡಿಸಿದರು. ತಪೋವನದ ಶ್ರೀ ಶಿವಕುಮಾರ ಸ್ವಾಮಿಗಳು ರೋಮ್ ಧಾರ್ಮಿಕ ರಾಜ್ಯಧಾನಿಯಲ್ಲಿ ಪೋಪ್ ರನ್ನು ಭೇಟಿ ಮಾಡುವುದೇ ಅತ್ಯಂತ ಸಂತಸದ ವಿಷಯವೆಂದು ತಿಳಿದು ತಮ್ಮಲ್ಲಿರುವ ಕೆಲ ಶರಣ ಸಾಹಿತ್ಯದ ಆಂಗ್ಲ ಭಾಷೆಯ ಕೃತಿಗಳನ್ನು ತೆಗೆದುಕೊಂಡು ಹೋದರು.

ತಪೋವನದ ಶ್ರೀಗಳನ್ನು ಅತ್ಯಂತ ಶೃದ್ಧೆ ಗೌರವದಿಂದ ಬರಮಾಡಿಕೊಂಡ ಪೋಪ್ ರು ಅವರ ಯೋಗ ಕ್ಷೇಮ ಕೇಳ ಹತ್ತಿದರು, ಆಗ ಶಿವಕುಮಾರ ಶ್ರೀಗಳು ಪೋಪ್ ಗುರುಗಳಿಗೆ ತಮ್ಮಲ್ಲಿದ್ದ ಇಷ್ಟಲಿಂಗವನ್ನು ಅವರ ಕೈಗೆ ಇಟ್ಟು ಅಪ್ಪ ಬಸವಣ್ಣನವರು ಕೊಟ್ಟ ಇಷ್ಟಲಿಂಗದ ಪರಿಕಲ್ಪನೆಯನ್ನು ಅವರಿಗೆ ವಿವರಿಸುತ್ತಾ ಹೊರಟರು. ಶಿವಕುಮಾರ ಶ್ರೀಗಳ ಮಾತನ್ನು ಆಲಿಸುತ್ತಾ ಅವತ್ತಿನ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಇಡೀ ದಿನ ತಪೋವನದ ಶ್ರೀ ಶಿವಕುಮಾರ ಸ್ವಾಮಿಗಳ ಜೊತೆಗೆ ಶರಣರ ಚಿಂತನೆಯಲ್ಲಿ ತೊಡಗಿದರು. ಆಗ ಜಾನ್ ಪೋಪ್ ಪಾಲ್ 2 ಇವರು ತಪೋವನದ ಶ್ರೀಗಳಲ್ಲಿ ಭಿನ್ನವಿಸಿಕೊಂಡು ಇಷ್ಟಲಿಂಗದ ಪರಿಕಲ್ಪನೆಯನ್ನು ಇಉರೋಪೆ ರಾಷ್ಟ್ರಗಳಲ್ಲಿ ಹೇಳಬೇಡಿ, ಇಲ್ಲಿ ಬಹುದೊಡ್ಡ ಕ್ರಾಂತಿಯೇ ಜರಗುತ್ತದೆ ಎಂದರಂತೆ, ಇಲ್ಲಿ ಶಿವಯೋಗ ಸಾಧನೆಗೆ ಬೇಕಾದ ಸಾಹಿತ್ಯ ಮತ್ತು ಸಲಕರಣೆಗಳು ಸಿಗುವುದಿಲ್ಲ. ಭಕ್ತರಲ್ಲಿ ಗೊಂದಲ ಉಂಟಾಗುತ್ತದೆ ಕಾಲಕ್ರಮೇಣ ಇಂತಹ ಸಾಧನೆಗಳ ಬಗ್ಗೆ ತಮ್ಮಿಂದ ನಾವು ಕಳೆಯುತ್ತೇವೆ ಎಂದು ಹೇಳಿ ಹರಸಿದರಂತೆ.

ಶಿವಯೋಗದ ವಿಶ್ವ ವಿದ್ಯಾಲಯ ಜಾಗೃಬ

ತಪೋವನದ ಅನೇಕ ಭಕ್ತರು ರಶಿಯಾ ಕ್ರೊಯೇಶಿಯ ಜಾಗೃಬ್ ಮುಂತಾದ ರಾಷ್ಟ್ರಗಳಿಂದ ಇವರ ಭೇಟಿಗೆ ಬರುತ್ತಿದ್ದರು. ಇಷ್ಟಲಿಂಗ ಯೋಗದ ಮಹತ್ವದ ಸಾಧನೆಯನ್ನು ಜಗತ್ತಿಗೆ ಸಾರಲು ಪಾಶ್ಚಿಮಾತ್ಯ ಪೌರಾತ್ಯ ರಾಷ್ಟ್ರದವ ಒತ್ತಾಯದ ಆಗ್ರಹದ ಮೇಲೆ ತಪೋವನದ ಶ್ರೀ ಶಿವಕುಮಾರ ಸ್ವಾಮಿಗಳು ಜಾಗೃಬದಲ್ಲಿ ಶಿವಯೋಗದ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿದರು. ಈಗಲೂ ಕೂಡ ರಶಿಯಾ ಮತ್ತು ಬೇರೆ ಬೇರೆ ರಾಷ್ಟ್ರಗಳಿಂದ ಡಿಸೆಂಬರ್ 25 ರಿಂದ ಜನೆವರಿ 26 ರವರೆಗೆ ಜಗತ್ತಿನ ಹಲವು ರಾಷ್ಟ್ರದ ಸಾಧಕರು ಧಾರವಾಡದ ತಪೋವನಕ್ಕೆ ಬಂದು ತಮ್ಮಇಷ್ಟಲಿಂಗ ಸಾಧನೆ ಮಾಡುತ್ತಾರೆ. ಸ್ವಾಮೀಜಿಗೆ ಪ್ರಪಂಚದಾದ್ಯಂತ ಶಿಷ್ಯರಿದ್ದರು. ಶಿವಕುಮಾರ ಸ್ವಾಮೀಜಿಗೆ ಭಾರತೀಯ ಶಿಷ್ಯರಿಗಿಂತ ಯುರೋಪಿಯನ್ ಶಿಷ್ಯರು ಹೆಚ್ಚು ಎಂದು ಹೇಳುತ್ತಿದ್ದರು. ಸ್ವಾಮೀಜಿ ಪ್ರಪಂಚದಾದ್ಯಂತ ಉಪನ್ಯಾಸಗಳನ್ನು ನೀಡಿದ್ದರು ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿದ್ದರು.

ಸಾಹಿತ್ಯ:

ಕನ್ನಡ ಹಿಂದಿ ಇಂಗ್ಲಿಷ್ ಮರಾಠಿಯಲ್ಲಿ ಅನೇಕ ಧಾರ್ಮಿಕ ಆಧ್ಯಾತ್ಮಿಕ ಕೃತಿಗಳನ್ನು ರಚಿಸಿ ಶರಣರ ಶಿವಯೋಗದ ಕಲ್ಪನೆಯನ್ನು ಸಾರ್ವತ್ರಿಕಗೊಳಿಸಿದ ಮಹಾ ಮೇಧಾವಿ.

*ಇವರ ಪ್ರಕಟಿತ ಕೃತಿಗಳು*

ಬುದ್ಧ ಮತ್ತು ಬಸವಣ್ಣ

ಮುಕ್ಕಣ್ಣ

ಕಾಲಪ್ರವಾಹ

how to open the third eye ಮುಂತಾದ ಅನೇಕ ನೂರಕ್ಕೂ ಅಧಿಕ ಕೃತಿಗಳು ಪ್ರಕಟಗೊಂಡಿವೆ.

*ತಪೋವನಕ್ಕೆ ಬೆಳ್ಳಿ ಹಬ್ಬ*

ತಪೋವನದ ಬೆಳ್ಳಿ ಮಹೋತ್ಸವವನ್ನು ಡಿಸೆಂಬರ್ 1990 ರಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಪರಮಪೂಜ್ಯ ದಲೈ ಲಾಮಾ ಉದ್ಘಾಟಿಸಿದರು. ಆ ಸಂದರ್ಭದಲ್ಲಿ ವಿಜ್ಞಾನ ಮತ್ತು ಯೋಗ ಸಮ್ಮೇಳನವನ್ನು ನಡೆಸಲಾಯಿತು, ಇದರಲ್ಲಿ ವಿಶ್ವದ ವಿವಿಧ ಭಾಗಗಳಿಂದ ವಿದ್ವಾಂಸರು, ಚಿಂತಕರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು.

ಬಯಲಾದರು

ಶ್ರೀ ಕುಮಾರ ಸ್ವಾಮಿಜಿ ಅವರು ಅಕ್ಟೋಬರ್ 22, 1995 ರಂದು ಸಮಾಧಿಯಾದರು . ಶ್ರೀ ಕುಮಾರಸ್ವಾಮಿಜಿಯವರ ಸಮಾಧಿ ಮಂದಿರ. ತಮ್ಮ ಐಕ್ಯದ ಬಗ್ಗೆ ಜನರಿಗೆ ಮೊದಲೇ ಹೇಳಿದ್ದರು.

*ಧಾರವಾಡ ತಪೋವನದ ಕುಮಾರಸ್ವಾಮಿಗಳ ಬಗ್ಗೆ ಪ್ರಮುಖಾಂಶಗಳು:*

ಆಧ್ಯಾತ್ಮಿಕ ಸೇವೆ: ಶ್ರೀ ಕುಮಾರಸ್ವಾಮಿಗಳು ಧಾರವಾಡದ ಸಪ್ತಾಪುರದಲ್ಲಿ ತಪೋವನ ಎಂಬ ಆಧ್ಯಾತ್ಮಿಕ ಕೇಂದ್ರವನ್ನು ಸ್ಥಾಪಿಸಿದರು. ಇದು ಯೋಗ ಮತ್ತು ವೇದಾಂತದ ಅಧ್ಯಯನಕ್ಕೆ ಪ್ರಸಿದ್ಧವಾಗಿದೆ.

ಸಾಮಾಜಿಕ ಕಾರ್ಯ: ಅವರು ಕೇವಲ ಆಧ್ಯಾತ್ಮಿಕ ಬೋಧಕರಲ್ಲ, ಸಾಮಾಜಿಕ ಸುಧಾರಣೆಯಲ್ಲೂ ಸಕ್ರಿಯರಾಗಿದ್ದರು. ನವಕಲ್ಯಾಣಮಠದ ಮೂಲಕ ಸಮಾಜ ಸೇವೆ ಮಾಡಿದರು.

ಜ್ಞಾನ ಪ್ರಸಾರ: 'ಪ್ರಣವ' ಎಂಬ ಕನ್ನಡ ಮಾಸಿಕ ಪತ್ರಿಕೆಯನ್ನು ನಡೆಸುತ್ತಿದ್ದರು, ಇದರ ಮೂಲಕ ಅಧ್ಯಾತ್ಮಿಕ ವಿಚಾರಗಳನ್ನು ಜನರಿಗೆ ತಲುಪಿಸುತ್ತಿದ್ದರು.

ಸಮಾರಂಭ: 1990 ರಲ್ಲಿ ತಪೋವನದ ರಜತ ಮಹೋತ್ಸವವನ್ನು ಆಚರಿಸಲಾಯಿತು, ಇದರಲ್ಲಿ ದಲೈಲಾಮಾ ಭಾಗವಹಿಸಿದ್ದರು.

ಸಮಾಧಿ ಮಂದಿರ: ಶ್ರೀ ಕುಮಾರಸ್ವಾಮಿಗಳು ಅಕ್ಟೋಬರ್ 22, 1995 ರಂದು ಸಮಾಧಿ ಹೊಂದಿದರು. ಅವರ ಸಮಾಧಿ ಮಂದಿರವನ್ನು 2012 ರಲ್ಲಿ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಉದ್ಘಾಟಿಸಿದರು.

ಲೇಖಕರು:

ಡಾ. ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande