
ಗದಗ, 02 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪುರಾತತ್ವ ಇಲಾಖೆಯಿಂದ ನಡೆಯುತ್ತಿರುವ ಉತ್ಖನನ ಕಾರ್ಯ 15ನೇ ದಿನಕ್ಕೂ ಮುಂದುವರಿದಿದೆ. ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಪುರಾತನ ಇತಿಹಾಸ ಬೆಳಕಿಗೆ ಬರ್ತಾಯಿದೆ.
ಸುಮಾರು 35ಕ್ಕೂ ಹೆಚ್ಚು ಸಿಬ್ಬಂದಿ ಅತ್ಯಂತ ಸೂಕ್ಷ್ಮತೆಯಿಂದ ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ 50ಕ್ಕೂ ಹೆಚ್ಚು ಅಪರೂಪದ ಪ್ರಾಚ್ಯಾವಶೇಷಗಳು ಪತ್ತೆಯಾಗಿದ್ದು, ಲಕ್ಕುಂಡಿಯ ಐತಿಹಾಸಿಕ ಮಹತ್ವ ಮತ್ತಷ್ಟು ದೃಢಪಡಿಸಿದೆ.
ಪ್ರತಿದಿನವೂ ಹೊಸ ಹೊಸ ಶಿಲೆಗಳು, ಪುರಾತನ ಅವಶೇಷಗಳು ಪತ್ತೆಯಾಗುತ್ತಿರುವ ಹಿನ್ನೆಲೆ, ಇಂದು ಕೂಡ ಪುರಾತನ ಕಾಲದ ಮಹತ್ವದ ಪ್ರಾಚ್ಯಾವಶೇಷಗಳು ಸಿಕ್ಕಿಬೀಳುವ ನಿರೀಕ್ಷೆ ವ್ಯಕ್ತವಾಗಿದೆ. ಉತ್ಖನನ ಸ್ಥಳಕ್ಕೆ ಭೇಟಿ ನೀಡುತ್ತಿರುವ ಇತಿಹಾಸಾಸಕ್ತರು ಮತ್ತು ಗ್ರಾಮಸ್ಥರು ಕಾರ್ಯವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.
ಲಕ್ಕುಂಡಿ ಗ್ರಾಮವು ಈಗಾಗಲೇ ಚಾಲುಕ್ಯರ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳಿಗೆ ಪ್ರಸಿದ್ಧವಾಗಿದ್ದು, ಪ್ರಸ್ತುತ ಉತ್ಖನನ ಕಾರ್ಯದಿಂದ ಇನ್ನಷ್ಟು ಇತಿಹಾಸ ದಾಖಲೆಗಳು ಹೊರಬರುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / lalita MP