ಗೋರಖನಾಥ ದೇವಸ್ಥಾನದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ವಿಶೇಷ ಪೂಜೆ
ಗೋರಖ್‌ಪುರ, 05 ನವೆಂಬರ್ (ಹಿ.ಸ.): ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಉತ್ತರಪ್ರದೇಶದ ಗೋರಖಪುರಕ್ಕೆ ಭೇಟಿ ನೀಡಿದ ನಿತಿನ್ ನವೀನ್ ಅವರು ಗುರುವಾರ ಬೆಳಗ್ಗೆ ಗೋರಖನಾಥ ದೇವಸ್ಥಾನಕ್ಕೆ ತೆರಳಿ ಶಿವಾವತಾರ ಮಹಾಯೋಗಿ ಗುರು ಗೋರಖನಾಥರ ದರ್ಶನ ಪಡೆದು
गोरखनाथ मंदिर में गुरुवार को भाजपा के राष्ट्रीय अध्यक्ष नितिन नबीन ने गुरु गोरखनाथ का दर्शन-पूजन किया। इस दौरान मुख्यमंत्री योगी आदित्यनाथ ने उनका स्वागत कर मंदिर परिसर का भ्रमण कराया और अंगवस्त्र, प्रसाद एवं गुरु गोरखनाथ की प्रतिमा भेंटकर अभिनंदन किया।


गोरखनाथ मंदिर में गुरुवार को भाजपा के राष्ट्रीय अध्यक्ष नितिन नबीन ने गुरु गोरखनाथ का दर्शन-पूजन किया। इस दौरान मुख्यमंत्री योगी आदित्यनाथ ने उनका स्वागत कर मंदिर परिसर का भ्रमण कराया और अंगवस्त्र, प्रसाद एवं गुरु गोरखनाथ की प्रतिमा भेंटकर अभिनंदन किया।


ಗೋರಖ್‌ಪುರ, 05 ನವೆಂಬರ್ (ಹಿ.ಸ.):

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಉತ್ತರಪ್ರದೇಶದ ಗೋರಖಪುರಕ್ಕೆ ಭೇಟಿ ನೀಡಿದ ನಿತಿನ್ ನವೀನ್ ಅವರು ಗುರುವಾರ ಬೆಳಗ್ಗೆ ಗೋರಖನಾಥ ದೇವಸ್ಥಾನಕ್ಕೆ ತೆರಳಿ ಶಿವಾವತಾರ ಮಹಾಯೋಗಿ ಗುರು ಗೋರಖನಾಥರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು

ವಿಶ್ವಪ್ರಸಿದ್ಧ ನಾಥಪಂಥದ ಪ್ರಮುಖ ಧಾರ್ಮಿಕ ಕೇಂದ್ರವಾದ ಗೋರಖನಾಥ ದೇವಸ್ಥಾನದಲ್ಲಿ ಗೋರಕ್ಷಪೀಠದ ಪೀಠಾಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗೋರಖನಾಥ ದೇವಸ್ಥಾನ ಹಾಗೂ ನಾಥಪಂಥದ ಪರಂಪರೆ ಮತ್ತು ವೈಶಿಷ್ಟ್ಯಗಳ ಕುರಿತು ನಿತಿನ್ ನವೀನ್ ಅವರಿಗೆ ಮಾಹಿತಿ ನೀಡಿದರು. ಬಳಿಕ ಅಂಗವಸ್ತ್ರ, ಪ್ರಸಾದ ಹಾಗೂ ಗುರು ಗೋರಖನಾಥರ ಪ್ರತಿಮೆಯನ್ನು ನೀಡಿ ಗೌರವಿಸಿದರು.

ದೇವಸ್ಥಾನದಲ್ಲಿ ಪ್ರಸಾದ ಮತ್ತು ಉಪಾಹಾರ ಸ್ವೀಕರಿಸಿದ ಬಳಿಕ ನಿತಿನ್ ನವೀನ್ ಅವರು ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವ ಕಮಲೇಶ್ ಪಾಸ್ವಾನ್, ಮೇಯರ್ ಡಾ. ಮಂಗಲೇಶ್ ಶ್ರೀವಾಸ್ತವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ, ರಾಜ್ಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಧರ್ಮಪಾಲ್ ಸಿಂಗ್, ರಾಜ್ಯದ ಜಲಶಕ್ತಿ ಸಚಿವ ಸ್ವತಂತ್ರ ದೇವ್ ಸಿಂಗ್, ಸಂಸದರಾದ ರವಿಕಿಶನ್ ಶುಕ್ಲಾ, ವಿಜಯ್ ದುಬೆ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಕಾಮೇಶ್ವರ್ ಸಿಂಗ್, ಶಾಸಕ ವಿಪಿನ್ ಸಿಂಗ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

-------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande