ಬಳ್ಳಾರಿ ವ್ಯಕ್ತಿ ನಾಪತ್ತೆ - ಪತ್ತೆಗೆ ಮನವಿ
ಬಳ್ಳಾರಿ, 05 ನವೆಂಬರ್ (ಹಿ.ಸ.) ಬಳ್ಳಾರಿ ನಗರದ ಮಿಲ್ಲರ್ ಪೇಟೆಯ ನಿವಾಸಿ ಮಹಮ್ಮದ್ ಮುನ್ನಿಸಾ ಅಲಿಯಾಸ್ ಮುನೀರ್ (42) ಎಂಬುವವರು ಅಕ್ಟೋಬರ್ 22ರಿಂದ ಕಾಣೆಯಾಗಿದ್ದು, ಈ ಕುರಿತು ಬಳ್ಳಾರಿ ಎ.ಪಿ.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ
ಬಳ್ಳಾರಿ ವ್ಯಕ್ತಿ ನಾಪತ್ತೆ - ಪತ್ತೆಗೆ ಮನವಿ


ಬಳ್ಳಾರಿ, 05 ನವೆಂಬರ್ (ಹಿ.ಸ.)

ಬಳ್ಳಾರಿ ನಗರದ ಮಿಲ್ಲರ್ ಪೇಟೆಯ ನಿವಾಸಿ ಮಹಮ್ಮದ್ ಮುನ್ನಿಸಾ ಅಲಿಯಾಸ್ ಮುನೀರ್ (42) ಎಂಬುವವರು ಅಕ್ಟೋಬರ್ 22ರಿಂದ ಕಾಣೆಯಾಗಿದ್ದು, ಈ ಕುರಿತು ಬಳ್ಳಾರಿ ಎ.ಪಿ.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.

ಕಾಣೆಯಾದ ವ್ಯಕ್ತಿಯ ಚಹರೆ ಮತ್ತು ವಿವರ:

ಸುಮಾರು 5.6 ಅಡಿ ಎತ್ತರ, ಕೆಂಪನೆ ಮೈಬಣ್ಣ, ದುಂಡು ಮುಖ, ತೆಳ್ಳನೆಯ ಶರೀರ ಹೊಂದಿದ್ದು, ಬೆನ್ನಿನ ಬಲಭಾಗದಲ್ಲಿ ಒಂದು ಕಪ್ಪು ಮಚ್ಚೆ ಇದೆ. ಕಾಣೆಯಾದ ಸಂದರ್ಭದಲ್ಲಿ ನೇರಳೆ ಬಣ್ಣದ ತುಂಬು ತೋಳಿನ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಹಿಂದಿ ಮತ್ತು ಕನ್ನಡ ಭಾಷೆ ಮಾತನಾಡುತ್ತಾನೆ.

ಕಾಣೆಯಾದ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತರೆ ಎ.ಪಿ.ಎಂ.ಸಿ ಯಾರ್ಡ್ ಪೊಲೀಸ್ ಠಾಣೆ: 08392-250033, 9480803096, ಪೊಲೀಸ್ ಕಂಟ್ರೋಲ್ ರೂಂ, ಬಳ್ಳಾರಿ: 08392-258100 ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande