ಬಳ್ಳಾರಿ ಜಿಲ್ಲೆಯಾದ್ಯಂತ ನವೆಂಬರ್ ‘ಪ್ರಜಾಸೇವೆ ಆಂದೋಲನ’
ಬಳ್ಳಾರಿ, 05 ನವೆಂಬರ್ (ಹಿ.ಸ.) ರಾಜ್ಯ ಸರ್ಕಾರದ ಪ್ರಜಾಸೇವಾ ಇಲಾಖೆಯ ನಿರ್ದೇಶನದಂತೆ ಬಳ್ಳಾರಿ ಜಿಲ್ಲೆಯಾದ್ಯಂತ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸಲು ನವೆಂಬರ್ ಮಾಹೆಯ ಪ್ರತಿ ಶನಿವಾರದಂದು ‘ಪ್ರಜಾಸೇವೆ ಆಂದೋಲನ’ ಸಭೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್
ಬಳ್ಳಾರಿ ಜಿಲ್ಲೆಯಾದ್ಯಂತ ನವೆಂಬರ್ ‘ಪ್ರಜಾಸೇವೆ ಆಂದೋಲನ’


ಬಳ್ಳಾರಿ, 05 ನವೆಂಬರ್ (ಹಿ.ಸ.)

ರಾಜ್ಯ ಸರ್ಕಾರದ ಪ್ರಜಾಸೇವಾ ಇಲಾಖೆಯ ನಿರ್ದೇಶನದಂತೆ ಬಳ್ಳಾರಿ ಜಿಲ್ಲೆಯಾದ್ಯಂತ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸಲು ನವೆಂಬರ್ ಮಾಹೆಯ ಪ್ರತಿ ಶನಿವಾರದಂದು ‘ಪ್ರಜಾಸೇವೆ ಆಂದೋಲನ’ ಸಭೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.

ಈ ಸಭೆಗಳು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಪ್ರತಿ ಶನಿವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿವೆ. ಸಾರ್ವಜನಿಕರು ತಮ್ಮ ಕುಂದುಕೊರತೆಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ಪಡೆಯಲು ನಿಗದಿತ ನಮೂನೆಗಳಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳುವಂತೆ ಕೋರಿದ್ದಾರೆ.

*ತಾಲ್ಲೂಕುವಾರು ಸಭೆಗಳ ವೇಳಾಪಟ್ಟಿ:*

*ಬಳ್ಳಾರಿ ತಾಲ್ಲೂಕು:*

ನವೆಂಬರ್ 7 (1ನೇ ಶನಿವಾರ): ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ನೇತೃತ್ವದಲ್ಲಿ ಬಂಡಿಮೋಟ್ ನಲ್ಲಿ ನಡೆಯಲಿದೆ.

ನವೆಂಬರ್ 14 (2ನೇ ಶನಿವಾರ): ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರ ನೇತೃತ್ವದಲ್ಲಿ ರೂಪನಗುಡಿ ಹೋಬಳಿಯ ಅಸುಂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ.

ನವೆಂಬರ್ 21 (3ನೇ ಶನಿವಾರ): ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ನೇತೃತ್ವದಲ್ಲಿ ಜೋಳದರಾಶಿ ದೊಡ್ಡನಗೌಡ ರಂಗಮAದಿರದಲ್ಲಿ ಸಭೆ ನಡೆಯಲಿದೆ.

ನವೆಂಬರ್ 28 (4ನೇ ಶನಿವಾರ): ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರ ನೇತೃತ್ವದಲ್ಲಿ ಮೋಕಾ ಹೋಬಳಿಯ ಗೋನಾಳ್ ಗ್ರಾಮ ಪಂಚಾಯಿತಿ ಆವರಣದಲ್ಲಿ ಜರುಗಲಿದೆ.

*ಸಿರುಗುಪ್ಪ ತಾಲ್ಲೂಕು:*

(ಎಲ್ಲಾ ಸಭೆಗಳು ಶಾಸಕ ಬಿ.ಎಂ. ನಾಗರಾಜ ಅವರ ನೇತೃತ್ವದಲ್ಲಿ ನಡೆಯಲಿವೆ)

ನವೆಂಬರ್ 7: ಸಿರುಗುಪ್ಪ ಹೋಬಳಿಯ ಕುಡುದರಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ನವೆಂಬರ್ 14: ಹಚ್ಚೋಳ್ಳಿ ಹೋಬಳಿಯ ಬೀರಳ್ಳಿ ಗ್ರಾಮದ ಸಮುದಾಯ ಭವನ.

ನವೆಂಬರ್ 21: ಕರೂರು ಹೋಬಳಿಯ ಬಲಕುಂದಿ ಗ್ರಾಮ ಪಂಚಾಯಿತಿ ಕಾರ್ಯಾಲಯ.

ನವೆಂಬರ್ 28: ತೆಕ್ಕಲಕೋಟೆ ಹೋಬಳಿಯ ಮಣ್ಣೂರು ಸೂಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

*ಸಂಡೂರು ತಾಲ್ಲೂಕು:*

(ಎಲ್ಲಾ ಸಭೆಗಳು ಶಾಸಕಿ ಅನ್ನಪೂರ್ಣ ತುಕಾರಾಂ ಅವರ ನೇತೃತ್ವದಲ್ಲಿ ನಡೆಯಲಿವೆ)

ನವೆಂಬರ್ 7: ನಿಡಗುರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ನವೆಂಬರ್ 14: ಭುಜಂಗ ನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ನವೆಂಬರ್ 21: ಸಂಡೂರು ತಾಲ್ಲೂಕು ಕಚೇರಿ ಸಭಾಂಗಣ.

ನವೆAಬರ್ 28: ರಾಜಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

*ಕಂಪ್ಲಿ ಹಾಗೂ ಕುರುಗೋಡು ತಾಲ್ಲೂಕು:*

(ಎಲ್ಲಾ ಸಭೆಗಳು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರ ನೇತೃತ್ವದಲ್ಲಿ ನಡೆಯಲಿವೆ)

ನವೆಂಬರ್ 7 (ಕುರುಗೋಡು): ಕೋಳೂರು ಹೋಬಳಿಯ ಸೋಮಸಮುದ್ರ ಗ್ರಾಮ ಪಂಚಾಯಿತಿ ಕಾರ್ಯಾಲಯ.

ನವೆಂಬರ್ 14 (ಕಂಪ್ಲಿ): ದೇವಸಮುದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ನವೆಂಬರ್ 21 (ಕುರುಗೋಡು): ಕುರುಗೋಡು ಹೋಬಳಿಯ ಗಣಿಕೆಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ.

ನವೆಂಬರ್ 28 (ಕಂಪ್ಲಿ): ದೇವಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande