ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಜೆಡಿಎಸ್ ತಿರುಗೇಟು
ಬೆಂಗಳೂರು, 05 ನವೆಂಬರ್ (ಹಿ.ಸ.): ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ''ಹಳ್ಳಿ ಗುಗ್ಗು'' ಎಂದು ಕರೆದ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಜೆಡಿಎಸ್ ರಾಜ್ಯ ಘಟಕ ಎಕ್ಸ್ ಖಾತೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಎಸಿ ಕೊಠಡಿಗಳಲ್ಲಿ ಕುಳಿತು ರಾಜಕೀಯ ಮಾಡುವವರಿಗೆ ಬಿಸಿಲಿನಲ್ಲಿ
ಜೆಡಿಎಸ್ ಎಕ್ಸ್ ಖಾತೆ ಪೋಟೋ


ಬೆಂಗಳೂರು, 05 ನವೆಂಬರ್ (ಹಿ.ಸ.):

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು 'ಹಳ್ಳಿ ಗುಗ್ಗು' ಎಂದು ಕರೆದ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಜೆಡಿಎಸ್ ರಾಜ್ಯ ಘಟಕ ಎಕ್ಸ್ ಖಾತೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಎಸಿ ಕೊಠಡಿಗಳಲ್ಲಿ ಕುಳಿತು ರಾಜಕೀಯ ಮಾಡುವವರಿಗೆ ಬಿಸಿಲಿನಲ್ಲಿ ಬೆವರಿಳಿಸಿ ದುಡಿಯುವ ರೈತರ ಕಷ್ಟವೇನು ಗೊತ್ತು? ಗ್ರಾಮ ವಾಸ್ತವ್ಯ ಮಾಡಿ ಜನರ ಕಣ್ಣೀರು ಒರೆಸಿದ ಕುಮಾರಸ್ವಾಮಿ ಅವರಿಗೆ ನೀವು 'ಹಳ್ಳಿ ಗುಗ್ಗು' ಎಂದು ಕರೆಯುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಜೆಡಿಎಸ್ ತಿರುಗೇಟು ನೀಡಿದೆ.

ಹಳ್ಳಿಯ ಜನರ ಮತ ಬೇಕು, ಆದರೆ ಹಳ್ಳಿಯ ನಾಯಕರೇ ನಿಮಗೆ ಗುಗ್ಗುಗಳಾ? ಇದು ದೇಶದ ಸಮಸ್ತ ಹಳ್ಳಿಯ ಜನತೆಗೆ ಮಾಡಿದ ಅಪಮಾನ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ನಿಮ್ಮ ದೌಲತ್ತು ಮತ್ತು ಕುಹಕದ ಮಾತುಗಳಿಗೆ ಜನರು ಚುನಾವಣೆಯಲ್ಲಿ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಘಟಕ ಎಚ್ಚರಿಕೆ ನೀಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande