ಭಾರತ-ಇಟಲಿ ಜವಳಿ ಮತ್ತು ಫ್ಯಾಷನ್ ಕ್ಷೇತ್ರಗಳ ಸಹಕಾರ ಬಲವರ್ಧನೆಗೆ ಒತ್ತು
ಪ್ರಾಟೊ/ನವದೆಹಲಿ, 05 ನವೆಂಬರ್ (ಹಿ.ಸ.): ಭಾರತ ಮತ್ತು ಇಟಲಿ ನಡುವಿನ ಜವಳಿ ಹಾಗೂ ಫ್ಯಾಷನ್ ಕ್ಷೇತ್ರಗಳಲ್ಲಿನ ಕಾರ್ಯತಂತ್ರ ಮತ್ತು ತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಜವಳಿ ಸಚಿವಾಲಯದ ಕಾರ್ಯದರ್ಶಿ ನೀಲಂ ಶಮಿ ರಾವ್ ನೇತೃತ್ವದ ಭಾರತೀಯ ನಿಯೋಗ ಇಟಲಿ ಪ್ರವಾಸ ಕೈಗೊಂಡಿದೆ.
कपड़ा मंत्रालय की सचिव नीलम शमी राव प्रातो की कपड़ा विनिर्माण इकाइयों का दौरा करती हुईं।


ಪ್ರಾಟೊ/ನವದೆಹಲಿ, 05 ನವೆಂಬರ್ (ಹಿ.ಸ.):

ಭಾರತ ಮತ್ತು ಇಟಲಿ ನಡುವಿನ ಜವಳಿ ಹಾಗೂ ಫ್ಯಾಷನ್ ಕ್ಷೇತ್ರಗಳಲ್ಲಿನ ಕಾರ್ಯತಂತ್ರ ಮತ್ತು ತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಜವಳಿ ಸಚಿವಾಲಯದ ಕಾರ್ಯದರ್ಶಿ ನೀಲಂ ಶಮಿ ರಾವ್ ನೇತೃತ್ವದ ಭಾರತೀಯ ನಿಯೋಗ ಇಟಲಿ ಪ್ರವಾಸ ಕೈಗೊಂಡಿದೆ.

ಪ್ರವಾಸದ ಮೂರನೇ ದಿನವಾದ ಬುಧವಾರ ನಿಯೋಗವು ಇಟಲಿಯ ಪ್ರಮುಖ ಜವಳಿ ಉತ್ಪಾದನಾ ಕೇಂದ್ರವಾದ ಪ್ರಾತೋಗೆ ಭೇಟಿ ನೀಡಿ, ಅಲ್ಲಿನ ಜವಳಿ ಉದ್ಯಮದ ಕಾರ್ಯವೈಖರಿಯನ್ನು ವೀಕ್ಷಿಸಿತು.

ಈ ಸಂದರ್ಭದಲ್ಲಿ ನೀಲಂ ಶಮಿ ರಾವ್ ಅವರು 'ಕಾನ್ಫಿಂದುಸ್ತ್ರಿಯಾ ತೋಸ್ಕಾನಾ ನಾರ್ಡ್' ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ ಆಯೋಜಿಸಲಾಗಿದ್ದ ವಿಶೇಷ ವಿಚಾರ ಸಂಕಿರಣದಲ್ಲಿ ಭಾರತ ಮತ್ತು ಇಟಲಿ ನಡುವಿನ ಸಹಕಾರ, ತಾಂತ್ರಿಕ ವಿನಿಮಯ, ಹೂಡಿಕೆ ಹಾಗೂ ಕೈಗಾರಿಕಾ ಪಾಲುದಾರಿಕೆಗೆ ಒತ್ತು ನೀಡಲಾಯಿತು.

ಜಾಗತಿಕ ಜವಳಿ ಉದ್ಯಮಕ್ಕೆ ಪ್ರಮುಖ ವೇದಿಕೆಯಾಗಲಿರುವ 'ಭಾರತ್ ಟೆಕ್ಸ್ 2027'ರ ಮಹತ್ವವನ್ನು ಈ ಸಂದರ್ಭದಲ್ಲಿ ಪರಿಚಯಿಸಲಾಯಿತು. ಈ ವೇದಿಕೆಯು ಉಭಯ ದೇಶಗಳ ಉದ್ಯಮಿಗಳಿಗೆ ಹೊಸ ವ್ಯಾಪಾರ ಅವಕಾಶಗಳನ್ನು ಕಲ್ಪಿಸಲಿದೆ ಎಂದು ತಿಳಿಸಲಾಯಿತು.

ವಿಚಾರ ಸಂಕಿರಣದ ಬಳಿಕ ಭಾರತೀಯ ಮತ್ತು ಇಟಲಿ ಜವಳಿ ಉತ್ಪಾದಕರ ನಡುವೆ ನೇರ ವ್ಯಾವಹಾರಿಕ ಸಭೆಗಳು ನಡೆದವು. ನೇರ ವ್ಯಾಪಾರ, ಕಚ್ಚಾ ವಸ್ತುಗಳ ಪೂರೈಕೆ ಹಾಗೂ ಹೊಸ ಒಪ್ಪಂದಗಳ ಸಾಧ್ಯತೆಗಳ ಕುರಿತು ಚರ್ಚಿಸಲಾಯಿತು.

ಇದೇ ವೇಳೆ ಭಾರತೀಯ ನಿಯೋಗವು ಪ್ರಾತೋದಲ್ಲಿನ ಜವಳಿ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿ, ಇಟಲಿಯ ಉತ್ಪಾದನಾ ಪರಿಣತಿ, ಜವಳಿ ಮರುಬಳಕೆ ಆಧಾರಿತ ಆರ್ಥಿಕ ವ್ಯವಸ್ಥೆ ಹಾಗೂ ಸುಸ್ಥಿರ ಉತ್ಪಾದನಾ ವಿಧಾನಗಳನ್ನು ಪರಿಶೀಲಿಸಿತು.

ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ಈ ಪ್ರವಾಸವು ಉಭಯ ದೇಶಗಳ ನಡುವಿನ ದೀರ್ಘಕಾಲೀನ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸುವ ಹಾಗೂ ಮಾರುಕಟ್ಟೆ ಪ್ರವೇಶದ ಅವಕಾಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

-------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande