ಡಿ. 1ರಂದು ವಿಕಲಚೇತನರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ
ಬಳ್ಳಾರಿ, 26 ನವೆಂಬರ್ (ಹಿ.ಸ.) ವಿಶ್ವ ವಿಕಲಚೇತನರ ದಿನಾಚರಣೆ-2026ರ ಅಂಗವಾಗಿ ಬಳ್ಳಾರಿ ಜಿಲ್ಲೆಯ ವಿಕಲಚೇತನರಿಗಾಗಿ ಡಿಸೆಂಬರ್ 1ರಂದು ಬೆಳಿಗ್ಗೆ 10 ಗಂಟೆಗೆ ನಗರದ ಬಿಎಂಸಿಆರ್ಸಿ ಕ್ರೀಡಾಂಗಣದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ
ಡಿ. 1ರಂದು ವಿಕಲಚೇತನರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ


ಬಳ್ಳಾರಿ, 26 ನವೆಂಬರ್ (ಹಿ.ಸ.)

ವಿಶ್ವ ವಿಕಲಚೇತನರ ದಿನಾಚರಣೆ-2026ರ ಅಂಗವಾಗಿ ಬಳ್ಳಾರಿ ಜಿಲ್ಲೆಯ ವಿಕಲಚೇತನರಿಗಾಗಿ ಡಿಸೆಂಬರ್ 1ರಂದು ಬೆಳಿಗ್ಗೆ 10 ಗಂಟೆಗೆ ನಗರದ ಬಿಎಂಸಿಆರ್ಸಿ ಕ್ರೀಡಾಂಗಣದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಹೆಚ್ಚಿನ ಸಂಖ್ಯೆಯ ವಿಕಲಚೇತನರು ಈ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

*ಸ್ಪರ್ಧೆಗಳ ವಿವರ:*

ದೈಹಿಕ ಅಂಗವಿಕಲರಿಗೆ (ಕ್ರೀಡೆ): ಗುಂಡು ಎಸೆತ, ಜಾವಲಿನ್ ಥ್ರೋ, ಬೈಕ್ ರೇಸ್ ಮತ್ತು ಬೋತ್ ಲೆಗ್ ಗುಂಡು ಎಸೆತ

ಅಂಧರಿಗೆ (ಕ್ರೀಡೆ): ಕೇನ್ ರೇಸ್ ಮತ್ತು ಗುಂಡು ಎಸೆತ

ಶ್ರವಣದೋಷವುಳ್ಳವರಿಗೆ (ಕ್ರೀಡೆ): 100 ಮೀಟರ್ ಓಟ ಮತ್ತು ಗುಂಡು ಎಸೆತ

ಬುದ್ಧಿಮಾಂದ್ಯರಿಗೆ (ಕ್ರೀಡೆ): ಮ್ಯೂಜಿಕಲ್ ಚೇರ್ ಮತ್ತು ಚೆಂಡು ಎಸೆತ

ಕುಬ್ಜರಿಗೆ (ಕ್ರೀಡೆ): ಗುಂಡು ಎಸೆತ

ಸಾಂಸ್ಕೃತಿಕ ಸ್ಪರ್ಧೆಗಳು: ಶ್ರವಣದೋಷವುಳ್ಳ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ; ದೈಹಿಕ ಅಂಗವಿಕಲರಿಗೆ ಮತ್ತು ದೃಷ್ಟಿದೋಷವುಳ್ಳವರಿಗೆ ಜಾನಪದ ಗೀತೆ ಹಾಗೂ ಭಾವಗೀತೆ; ಬುದ್ಧಿಮಾಂದ್ಯ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ (ವೇಷ ಭೂಷಣ) ಸ್ಪರ್ಧೆ

ವಯಸ್ಕರಿಗೆ: ದೈಹಿಕ ವಿಕಲಚೇತನರ ಕ್ರಿಕೆಟ್ ಮತ್ತು ಅಂಧ ವಿಕಲಚೇತನರ ಕ್ರಿಕೆಟ್

ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವ ವಿಕಲಚೇತನರು ತಮ್ಮ ತಾಲೂಕಿನ ಎಂಆರ್ಡಬ್ಲ್ಯೂ ಅವರ ಬಳಿ ಹೆಸರು ನೋಂದಾಯಿಸಿಕೊಳ್ಳಬೇಕು. ಭಾಗವಹಿಸುವಾಗ ಕಡ್ಡಾಯವಾಗಿ ಯುಡಿಐಡಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ತರಬೇಕು.

ಬಳ್ಳಾರಿ / ಕಂಪ್ಲಿ (MRW): ರಾಣಿ – 8880875620, ಸಿರುಗುಪ್ಪ (MRW): ಸಾಬೇಶ್ – 9743509698, ಸಂಡೂರು (MRW): ಕರಿಬಸಜ್ಜ – 9632052270, ಕುರುಗೋಡು (MRW): ರೇವಣ್ಣ – 9538000887.

ಹೆಚ್ಚಿನ ಮಾಹಿತಿಗೆ ಯೋಜನಾ ಸಹಾಯಕ ರಾಘವೇಂದ್ರ ನಾಯ್ಕ್ (9513081723) ಅಥವಾ ಬಳ್ಳಾರಿಯ ಶಾಂತಿಧಾಮ ಆವರಣ, ಕಂಟೋನ್ಮೆಂಟ್ನಲ್ಲಿರುವ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08392-267886 ಅನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande