ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ
ನವದೆಹಲಿ, 23 ನವೆಂಬರ್ (ಹಿ.ಸ.): ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸೋಮವಾರ ಅದ್ಧೂರಿ ಔಪಚಾರಿಕ ಸ್ವಾಗತ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಬಾಲೇಂದ್ರ ಶಾ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಬಾಲೇಂದ್ರ
प्रधानमंत्री मोदी और नेपाल के प्रधानमंत्री एक-दूसरे से मुलाकात करते हुए।


ನವದೆಹಲಿ, 23 ನವೆಂಬರ್ (ಹಿ.ಸ.):

ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸೋಮವಾರ ಅದ್ಧೂರಿ ಔಪಚಾರಿಕ ಸ್ವಾಗತ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಬಾಲೇಂದ್ರ ಶಾ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಬಾಲೇಂದ್ರ ಶಾ ಅವರು ರಾಷ್ಟ್ರಪತಿ ಭವನದ ಆವರಣದಲ್ಲಿ ಗೌರವ ವಂದನೆ ಸ್ವೀಕರಿಸಿ, ಗೌರವ ರಕ್ಷೆಯನ್ನು ಪರಿಶೀಲಿಸಿದರು. ಪ್ರಧಾನಿ ನರೇಂದ್ರ ಮೋದಿ ಕೂಡ ಈ ವೇಳೆ ಉಪಸ್ಥಿತರಿದ್ದರು.

ಸ್ವಾಗತ ಸಮಾರಂಭದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರು ಉಭಯ ದೇಶಗಳ ಪ್ರತಿನಿಧಿ ಮಂಡಳಿಗಳ ಸದಸ್ಯರನ್ನು ಪರಸ್ಪರ ಪರಿಚಯಿಸಿಕೊಂಡರು. ಬಳಿಕ ಬಾಲೇಂದ್ರ ಶಾ ಅವರು ರಾಜ್‌ಘಾಟ್‌ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು.

ಬಾಲೇಂದ್ರ ಶಾ ಅವರು ತಮ್ಮ ಮೊದಲ ಭಾರತ ಪ್ರವಾಸಕ್ಕಾಗಿ ಶನಿವಾರ ನವದೆಹಲಿಗೆ ಆಗಮಿಸಿದ್ದರು. ಉಭಯ ದೇಶಗಳ ನಡುವಿನ ಸಮಗ್ರ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಇಂಧನ, ಸಂಪರ್ಕ ವ್ಯವಸ್ಥೆ, ರೈಲ್ವೆ, ಮೂಲಸೌಕರ್ಯ, ತಂತ್ರಜ್ಞಾನ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳುವ ಉದ್ದೇಶ ಈ ಭೇಟಿಯಲ್ಲಿದೆ.

36 ವರ್ಷದ ಬಾಲೇಂದ್ರ ಶಾ ಅವರ ಮೊದಲ ದ್ವಿಪಕ್ಷೀಯ ವಿದೇಶ ಪ್ರವಾಸ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇಂದು ನಡೆಯಲಿರುವ ಮಾತುಕತೆಯಲ್ಲಿ ಭವಿಷ್ಯದ ದ್ವಿಪಕ್ಷೀಯ ಸಹಭಾಗಿತ್ವಕ್ಕೆ ರೂಪುರೇಷೆ ಸಿದ್ಧಪಡಿಸುವುದರ ಜತೆಗೆ ಸಹಕಾರದ ಹೊಸ ಮಾರ್ಗಗಳನ್ನು ಕಂಡುಕೊಳ್ಳುವ ನಿರೀಕ್ಷೆಯಿದೆ.

ಬಾಲೇಂದ್ರ ಶಾ ಅವರೊಂದಿಗೆ 35 ಸದಸ್ಯರ ಉನ್ನತ ಮಟ್ಟದ ಪ್ರತಿನಿಧಿ ಮಂಡಳಿಯೂ ಭಾರತಕ್ಕೆ ಆಗಮಿಸಿದೆ. ಪ್ರವಾಸದ ಅಂಗವಾಗಿ ಭಾರತ-ನೇಪಾಳ ಉದ್ಯಮ ವೇದಿಕೆಯ ಸಭೆಯೂ ನಡೆಯಲಿದೆ.

ಮುಕ್ತ ಗಡಿ, ಪರಸ್ಪರ ವಿಶ್ವಾಸ, ಹಂಚಿಕೊಂಡ ಸಂಪ್ರದಾಯಗಳು ಹಾಗೂ ಜನರ ನಡುವಿನ ನಿಕಟ ಬಾಂಧವ್ಯವನ್ನು ಆಧರಿಸಿ ಭಾರತ ಮತ್ತು ನೇಪಾಳ ವಿಶಿಷ್ಟ ಹಾಗೂ ವ್ಯಾಪಕ ಸಂಬಂಧವನ್ನು ಹೊಂದಿವೆ. ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದುವರಿಸಲು ಉಭಯ ದೇಶಗಳ ನಡುವೆ 40ಕ್ಕೂ ಹೆಚ್ಚು ದ್ವಿಪಕ್ಷೀಯ ಸಾಂಸ್ಥಿಕ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande