ವಿಧಿವಿಧಾನಗಳೊಂದಿಗೆ ಚಳಿಗಾಲಕ್ಕಾಗಿ ಯಮುನೋತ್ರಿ ಧಾಮದ ಬಾಗಿಲು ಬಂದ್
ಉತ್ತರಕಾಶಿ/ಯಮುನೋತ್ರಿ, 11 ನವೆಂಬರ್ (ಹಿ.ಸ.): ಉತ್ತರಾಖಂಡದ ಪ್ರಸಿದ್ಧ ಯಮುನೋತ್ರಿ ಧಾಮದ ಬಾಗಿಲುಗಳನ್ನು ಭೈಯಾ ದೂಜ್ ಪರ್ವದ ಅಂಗವಾಗಿ ಬುಧವಾರ ಬೆಳಿಗ್ಗೆ 10.28ಕ್ಕೆ ವೈದಿಕ ಮಂತ್ರಘೋಷ, ಧಾರ್ಮಿಕ ವಿಧಿವಿಧಾನಗಳು ಹಾಗೂ ಯಮುನಾ ದೇವಿಯ ಜಯಘೋಷಗಳ ನಡುವೆ ಚಳಿಗಾಲಕ್ಕಾಗಿ ಮುಚ್ಚಲಾಯಿತು. ಆರು ತಿಂಗಳ
शीतकाल के लिए बंद हुए यमुनोत्री धाम के कपाट।


ಉತ್ತರಕಾಶಿ/ಯಮುನೋತ್ರಿ, 11 ನವೆಂಬರ್ (ಹಿ.ಸ.):

ಉತ್ತರಾಖಂಡದ ಪ್ರಸಿದ್ಧ ಯಮುನೋತ್ರಿ ಧಾಮದ ಬಾಗಿಲುಗಳನ್ನು ಭೈಯಾ ದೂಜ್ ಪರ್ವದ ಅಂಗವಾಗಿ ಬುಧವಾರ ಬೆಳಿಗ್ಗೆ 10.28ಕ್ಕೆ ವೈದಿಕ ಮಂತ್ರಘೋಷ, ಧಾರ್ಮಿಕ ವಿಧಿವಿಧಾನಗಳು ಹಾಗೂ ಯಮುನಾ ದೇವಿಯ ಜಯಘೋಷಗಳ ನಡುವೆ ಚಳಿಗಾಲಕ್ಕಾಗಿ ಮುಚ್ಚಲಾಯಿತು.

ಆರು ತಿಂಗಳ ಬೇಸಿಗೆ ಅವಧಿಯ ಯಾತ್ರೆಯ ಬಳಿಕ ಶುಭ ಮುಹೂರ್ತದಲ್ಲಿ ದೇಗುಲದ ಬಾಗಿಲುಗಳನ್ನು ಮುಚ್ಚಲಾಯಿತು. ಈ ಸಂದರ್ಭದಲ್ಲಿ ಶುಕ್ಲ ಪಕ್ಷದ ದ್ವಿತೀಯ ತಿಥಿ, ಅನುರಾಧ ನಕ್ಷತ್ರ, ಸೌಮ್ಯ ಯೋಗ ಮತ್ತು ಧನು ಲಗ್ನದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಬಾಗಿಲು ಮುಚ್ಚಿದ ಬಳಿಕ ಶನಿದೇವರ ನೇತೃತ್ವದಲ್ಲಿ ಯಮುನಾ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಸಾಂಪ್ರದಾಯಿಕ ವಾದ್ಯಗಳ ನಾದ ಹಾಗೂ ಭಕ್ತರ ಜಯಘೋಷಗಳ ನಡುವೆ ಚಳಿಗಾಲದ ವಾಸಸ್ಥಳವಾದ ಖರ್ಸಾಲಿಯತ್ತ ಪ್ರಯಾಣ ಬೆಳೆಸಿತು.

ಮಧ್ಯಾಹ್ನದ ಬಳಿಕ ಯಮುನಾ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಖರ್ಸಾಲಿ ಗ್ರಾಮ ತಲುಪಿತು. ದೇವಿಯ ತವರು ಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮಸ್ಥರು ಹಾಗೂ ಭಕ್ತರು ಹೂಮಾಲೆಗಳನ್ನು ಅರ್ಪಿಸಿ, ಜಯಘೋಷಗಳೊಂದಿಗೆ ಉತ್ಸವ ಮೂರ್ತಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದರು.

ಮುಂದಿನ ಆರು ತಿಂಗಳ ಚಳಿಗಾಲದ ಅವಧಿಯಲ್ಲಿ ಭಕ್ತರು ಖರ್ಸಾಲಿಯಲ್ಲಿರುವ ಯಮುನಾ ದೇವಿಯ ದೇವಸ್ಥಾನದಲ್ಲಿಯೇ ದರ್ಶನ ಮತ್ತು ಪೂಜೆ ಸಲ್ಲಿಸಬಹುದಾಗಿದೆ.

ಈ ಸಂದರ್ಭದಲ್ಲಿ ಯಮುನೋತ್ರಿ ಶಾಸಕ ಸಂಜಯ್ ದೋಭಾಲ್, ಬ್ಲಾಕ್ ಪ್ರಮುಖ್ ಪ್ರತಿನಿಧಿ ಅಜಬೀನ್ ಪನ್ವಾರ್, ಯಮುನೋತ್ರಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಸುನಿಲ್ ಉನಿಯಾಲ್, ವಕ್ತಾರ ಪುರುಷೋತ್ತಮ್ ಉನಿಯಾಲ್, ಖಜಾಂಚಿ ಪ್ರದೀಪ್ ಉನಿಯಾಲ್ ಸೇರಿದಂತೆ ವಿವಿಧ ದೇವತಾ ಮೆರವಣಿಗೆಗಳ ಪ್ರತಿನಿಧಿಗಳು, ಪೊಲೀಸರು, ಆಡಳಿತಾಧಿಕಾರಿಗಳು, ತೀರ್ಥ ಪುರೋಹಿತರು ಹಾಗೂ ಭಕ್ತರು ಉಪಸ್ಥಿತರಿದ್ದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande