ಹಾಸನಾಂಬೆ ಜಾತ್ರೆ ಸಾಂಸ್ಕೃತಿಕ ವೇದಿಕೆಯಲ್ಲಿ ಸಚಿವ ಶಿವಲಿಂಗೇಗೌಡ ಭರ್ಜರಿ ನೃತ್ಯ; ಭಕ್ತರಿಂದ ಶಿಳ್ಳೆ, ಚಪ್ಪಾಳೆ
ಹಾಸನ, 01 ನವೆಂಬರ್ (ಹಿ.ಸ.): ಹಾಸನಾಂಬೆ ದೇವಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಭೇಟಿ ನೀಡಿ, ಭಕ್ತರ ದರ್ಶನಕ್ಕೆ ಮಾಡಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು. ದೇವಾಲಯದ ವಿವಿಧ ಸರತಿ ಸಾಲುಗಳನ್ನು ವೀಕ್ಷಿಸಿದ ಸಚಿವರು, ಧರ್ಮದರ್ಶನದ ಸಾಲಿನಲ್ಲಿನ ವ್ಯವಸ್ಥೆಗಳನ್ನೂ ಪರಿಶೀಲಿಸಿ
Hassan Minister K M Shivalingegowda Dance At Hasanamba Temple Cultural Stage


ಹಾಸನ, 01 ನವೆಂಬರ್ (ಹಿ.ಸ.):

ಹಾಸನಾಂಬೆ ದೇವಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಭೇಟಿ ನೀಡಿ, ಭಕ್ತರ ದರ್ಶನಕ್ಕೆ ಮಾಡಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ದೇವಾಲಯದ ವಿವಿಧ ಸರತಿ ಸಾಲುಗಳನ್ನು ವೀಕ್ಷಿಸಿದ ಸಚಿವರು, ಧರ್ಮದರ್ಶನದ ಸಾಲಿನಲ್ಲಿನ ವ್ಯವಸ್ಥೆಗಳನ್ನೂ ಪರಿಶೀಲಿಸಿದರು.

ಈ ವೇಳೆ ಧರ್ಮದರ್ಶನದ ಸರತಿ ಸಾಲಿನ ಪಕ್ಕದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ನಿರ್ಮಿಸಲಾಗಿರುವ ವೇದಿಕೆಗೆ ಆಗಮಿಸಿದ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು, ವೇದಿಕೆಯ ಮೇಲೆ ನೃತ್ಯ ಮಾಡುವ ಮೂಲಕ ಗಮನ ಸೆಳೆದರು.

'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟುಬೇಕು' ಎಂಬ ಜನಪ್ರಿಯ ಕನ್ನಡ ಗೀತೆಗೆ ಸಚಿವರು ಭರ್ಜರಿಯಾಗಿ ಹೆಜ್ಜೆ ಹಾಕಿದರು. ಸಚಿವರ ನೃತ್ಯವನ್ನು ಕಂಡು ಸ್ಥಳದಲ್ಲಿದ್ದ ಭಕ್ತರು ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಾಸನಾಂಬೆ ದೇವಿಯ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದರು. ಭಕ್ತರ ದರ್ಶನದ ವ್ಯವಸ್ಥೆ ಪರಿಶೀಲನೆಗೆ ಬಂದಿದ್ದ ಸಚಿವರು, ಸಾಂಸ್ಕೃತಿಕ ವೇದಿಕೆಯಲ್ಲಿ ನೃತ್ಯ ಮಾಡಿ ಭಕ್ತರ ಗಮನ ಸೆಳೆದರು.

ಈ ಮೂಲಕ ಹಾಸನಾಂಬೆ ಜಾತ್ರಾ ಮಹೋತ್ಸವದ ಧಾರ್ಮಿಕ ಸಂಭ್ರಮದ ನಡುವೆ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರ ನೃತ್ಯವೂ ವಿಶೇಷ ಆಕರ್ಷಣೆಯಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande