ರಷ್ಯಾ–ಉಕ್ರೇನ್ ಯುದ್ಧ ಅಂತ್ಯಕ್ಕೆ ಇಂದು-ನಾಳೆ ತ್ರಿಪಕ್ಷೀಯ ಮಾತುಕತೆ
ದಾವೋಸ್, 23 ಜನವರಿ (ಹಿ.ಸ.) : ಆ್ಯಂಕರ್ : ನಾಲ್ಕು ವರ್ಷಗಳಿಂದ ಮುಂದುವರಿದಿರುವ ರಷ್ಯಾ–ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಜಧಾನಿ ಅಬುಧಾಬಿಯಲ್ಲಿ ಇಂದು ಮತ್ತು ನಾಳೆ ರಷ್ಯಾ, ಉಕ್ರೇನ್ ಹಾಗೂ ಅಮೆರಿಕ ನಡುವಿನ ಮಹತ್ವದ ಮಾತುಕತೆಗಳು ನಡೆಯಲಿವೆ.
Meeting


ದಾವೋಸ್, 23 ಜನವರಿ (ಹಿ.ಸ.) :

ಆ್ಯಂಕರ್ : ನಾಲ್ಕು ವರ್ಷಗಳಿಂದ ಮುಂದುವರಿದಿರುವ ರಷ್ಯಾ–ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಜಧಾನಿ ಅಬುಧಾಬಿಯಲ್ಲಿ ಇಂದು ಮತ್ತು ನಾಳೆ ರಷ್ಯಾ, ಉಕ್ರೇನ್ ಹಾಗೂ ಅಮೆರಿಕ ನಡುವಿನ ಮಹತ್ವದ ಮಾತುಕತೆಗಳು ನಡೆಯಲಿವೆ.

ಈ ಸಭೆ ಎರಡು ದಿನಗಳ ಕಾಲ ನಡೆಯುವ ನಿರೀಕ್ಷೆಯಿದೆ.

ಇದಕ್ಕೂ ಮುನ್ನ ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಸಭೆಯ ಸಂದರ್ಭ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗಿದ್ದರು.

ಈ ಭೇಟಿಯ ನಂತರ ಮಾತನಾಡಿದ ಟ್ರಂಪ್, ರಷ್ಯಾ–ಉಕ್ರೇನ್ ಯುದ್ಧ ಅಂತ್ಯಕ್ಕೆ ಇನ್ನೂ ಹೆಚ್ಚಿನ ಸಮಯ ಬೇಕಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.

ಇನ್ನೊಂದೆಡೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರು ಮಾಸ್ಕೋದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆ ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಕೂಡ ಚರ್ಚೆಯಲ್ಲಿ ಭಾಗವಹಿಸಿದ್ದರು ಎಂದು ಕ್ರೆಮ್ಲಿನ್ ತಿಳಿಸಿದೆ.

ಉಕ್ರೇನ್ ಯುದ್ಧ ಅಂತ್ಯಗೊಳಿಸುವ ಆಶಯದೊಂದಿಗೆ ವಿಟ್ಕಾಫ್ ಮತ್ತು ಕುಶ್ನರ್ ಗುರುವಾರ ತಡರಾತ್ರಿ ಮಾಸ್ಕೋ ತಲುಪಿದ್ದರು. ರಷ್ಯಾದ ಸಾರ್ವಭೌಮ ಸಂಪತ್ತು ನಿಧಿಯ ಮುಖ್ಯಸ್ಥ ಕಿರಿಲ್ ಡಿಮಿಟ್ರಿವ್ ಈ ಚರ್ಚೆಯನ್ನು ಅತ್ಯಂತ ಮಹತ್ವದ್ದೆಂದು ವರ್ಣಿಸಿದ್ದಾರೆ.

ಈ ನಡುವೆ, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಉಕ್ರೇನ್, ರಷ್ಯಾ ಹಾಗೂ ಅಮೆರಿಕ ನಡುವಿನ ತ್ರಿಪಕ್ಷೀಯ ಮಾತುಕತೆಗಳು ನಡೆಯಲಿವೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ತಿಳಿಸಿದ್ದಾರೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.

ದಾವೋಸ್‌ನಲ್ಲಿ ಮಾತನಾಡಿದ ಅವರು, “ಅಬುಧಾಬಿಯಲ್ಲಿ ನಡೆಯಲಿರುವ ಈ ಸಭೆ ಮೊದಲ ತ್ರಿಪಕ್ಷೀಯ ಮಾತುಕತೆಯಾಗಿದ್ದು, ಇದು ಶುಕ್ರವಾರ ಮತ್ತು ಶನಿವಾರ ನಡೆಯಲಿದೆ” ಎಂದು ಹೇಳಿದ್ದಾರೆ.

ಯುದ್ಧ ಅಂತ್ಯಕ್ಕೆ ಉಕ್ರೇನ್ ಮಾತ್ರವಲ್ಲದೆ ರಷ್ಯಾ ಕೂಡ ರಾಜಿ ಮಾರ್ಗಕ್ಕೆ ಸಿದ್ಧರಾಗಬೇಕಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ನಾಲ್ಕು ವರ್ಷಗಳ ಯುದ್ಧದಿಂದ ಕೈವ್ ಮತ್ತು ಮಾಸ್ಕೋ ಎರಡೂ ಗಂಭೀರ ಒತ್ತಡ ಮತ್ತು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande