
ದಾವೋಸ್, 22 ಜನವರಿ (ಹಿ.ಸ.):
ಆ್ಯಂಕರ್:
ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯುರೋಪಿಯನ್ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವ ಬೆದರಿಕೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದೆ ಸರಿದಿದ್ದಾರೆ. ಆರ್ಕ್ಟಿಕ್ ಭದ್ರತೆ ಕುರಿತ ಭವಿಷ್ಯದ ಒಪ್ಪಂದದ ಚೌಕಟ್ಟಿನ ಬಗ್ಗೆ ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರೊಂದಿಗೆ ಒಪ್ಪಂದದ ರೂಪು ಕಂಡ ಬಳಿಕ, ಫೆಬ್ರವರಿ 1ರಿಂದ ಜಾರಿಗೆ ಬರಬೇಕಿದ್ದ ಸುಂಕಗಳನ್ನು ವಿಧಿಸುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ಆರ್ಕ್ಟಿಕ್ ಮತ್ತು ಗ್ರೀನ್‌ಲ್ಯಾಂಡ್‌ನಲ್ಲಿ ಅಮೆರಿಕ–ನ್ಯಾಟೋ ದೇಶಗಳು ಒಟ್ಟಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಈ ಒಪ್ಪಂದದಿಂದ ಗ್ರೀನ್‌ಲ್ಯಾಂಡ್‌ನ ಭದ್ರತೆ ಬಲಪಡಿಸಲಿದ್ದು, ರಷ್ಯಾ ಹಾಗೂ ಚೀನಾ ಅಲ್ಲಿ ನೆಲೆಗೊಳ್ಳುವುದನ್ನು ತಡೆಯುವುದು ಉದ್ದೇಶವಾಗಿದೆ.
ಡೆನ್ಮಾರ್ಕ್ ಈ ನಿರ್ಧಾರವನ್ನು ಸ್ವಾಗತಿಸಿದ್ದು, ಗ್ರೀನ್‌ಲ್ಯಾಂಡ್ ಅನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ಟ್ರಂಪ್ ತಳ್ಳಿ ಹಾಕಿರುವುದು ಸಕಾರಾತ್ಮಕ ಬೆಳವಣಿಗೆಯೆಂದು ಅಭಿಪ್ರಾಯಪಟ್ಟಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa