ತಿರುವಳ್ಳುವರ್ ಪ್ರತಿಮೆಗೆ ಸಚಿವ ದಿನೇಶ್ ಗುಂಡೂರಾವ್ ಮಾಲಾರ್ಪಣೆ
ಬೆಂಗಳೂರು, 16 ಜನವರಿ (ಹಿ.ಸ.) : ಆ್ಯಂಕರ್ : ವಿಶ್ವಕವಿ ತಿರುವಳ್ಳುವರ್ ಅವರ ಜಯಂತಿಯ ಅಂಗವಾಗಿ ಬೆಂಗಳೂರಿನ ಹಲಸೂರು ಪ್ರದೇಶದಲ್ಲಿರುವ ತಿರುವಳ್ಳುವರ್ ಅವರ ಪ್ರತಿಮೆಗೆ ಸಚಿವ ದಿನೇಶ್ ಗುಂಡೂರಾವ್ ಅವರು ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಹಾನ್ ದಾರ್ಶನಿಕ ಹಾಗೂ ವಿಶ್ವಕವಿ ತಿರುವಳ್ಳುವರ್ ಅವರ
Garlands


ಬೆಂಗಳೂರು, 16 ಜನವರಿ (ಹಿ.ಸ.) :

ಆ್ಯಂಕರ್ : ವಿಶ್ವಕವಿ ತಿರುವಳ್ಳುವರ್ ಅವರ ಜಯಂತಿಯ ಅಂಗವಾಗಿ ಬೆಂಗಳೂರಿನ ಹಲಸೂರು ಪ್ರದೇಶದಲ್ಲಿರುವ ತಿರುವಳ್ಳುವರ್ ಅವರ ಪ್ರತಿಮೆಗೆ ಸಚಿವ ದಿನೇಶ್ ಗುಂಡೂರಾವ್ ಅವರು ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಹಾನ್ ದಾರ್ಶನಿಕ ಹಾಗೂ ವಿಶ್ವಕವಿ ತಿರುವಳ್ಳುವರ್ ಅವರ ಜೀವನ ಮತ್ತು ಕೃತಿಗಳಲ್ಲಿರುವ ಉನ್ನತ ಮಾನವೀಯ ಮೌಲ್ಯಗಳನ್ನು ಸ್ಮರಿಸಲಾಯಿತು.

ಸಮಾಜಕ್ಕೆ ಪ್ರೀತಿ, ಶಾಂತಿ ಹಾಗೂ ಸಮಾನತೆಯ ಸಂದೇಶವನ್ನು ಸಾರಿದ ತಿರುವಳ್ಳುವರ್ ಅವರ ತತ್ವಗಳು ಇಂದಿಗೂ ಸಮಕಾಲೀನವಾಗಿದ್ದು, ಎಲ್ಲರಿಗೂ ದಾರಿದೀಪವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande