ರಾಯಚೂರು ಜಿಲ್ಲಾ ಉತ್ಸವ ಕವಿಗೋಷ್ಠಿಗೆ ಕವಿತೆಗಳ ಆಹ್ವಾನ
ರಾಯಚೂರು, 11 ಜನವರಿ (ಹಿ.ಸ.) : ಆ್ಯಂಕರ್ : 2026ರ ಜನವರಿ 29, 30 ಮತ್ತು 31ರಂದು ರಾಯಚೂರಿನಲ್ಲಿ ಜಿಲ್ಲಾಡಳಿತದಿಂದ ನಡೆಯಲಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ನಿಮಿತ್ತ ಕವಿಗೋಷ್ಠಿ ನಡೆಸಲು ರಾಯಚೂರು ಜಿಲ್ಲಾಡಳಿತವು ರಾಯಚೂರು ಜಿಲ್ಲಾ ವ್ಯಾಪ್ತಿಯಲ್ಲಿನ ಕವಿಗಳಿಂದ ಸ್ವರಚಿತ ಕವಿತೆಗ
ರಾಯಚೂರು ಜಿಲ್ಲಾ ಉತ್ಸವ ಕವಿಗೋಷ್ಠಿಗೆ ಕವಿತೆಗಳ ಆಹ್ವಾನ


ರಾಯಚೂರು, 11 ಜನವರಿ (ಹಿ.ಸ.) :

ಆ್ಯಂಕರ್ : 2026ರ ಜನವರಿ 29, 30 ಮತ್ತು 31ರಂದು ರಾಯಚೂರಿನಲ್ಲಿ ಜಿಲ್ಲಾಡಳಿತದಿಂದ ನಡೆಯಲಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ನಿಮಿತ್ತ ಕವಿಗೋಷ್ಠಿ ನಡೆಸಲು ರಾಯಚೂರು ಜಿಲ್ಲಾಡಳಿತವು ರಾಯಚೂರು ಜಿಲ್ಲಾ ವ್ಯಾಪ್ತಿಯಲ್ಲಿನ ಕವಿಗಳಿಂದ ಸ್ವರಚಿತ ಕವಿತೆಗಳನ್ನು ಆಹ್ವಾನಿಸಿದೆ.

ಕವಿತೆಯು ಸ್ವತಂತ್ರ ರಚನೆಯಾಗಿರಬೇಕು. ಕವಿತೆಯನ್ನು ಒಂದು ಪುಟ ಮೀರದಂತೆ ನುಡಿ ಅಥವಾ ಯುನಿಕೋಡ್‌ನಲ್ಲಿ ಟೈಪ್ ಮಾಡಿ ವರ್ಡ್ ಫಾರ್ಮೇಟನಲ್ಲಿ ಜನವರಿ 14ರೊಳಗೆ ಇ-ವಿಳಾಸ raichurdipr@gmail.com ಗೆ ಇ-ಮೇಲ್ ಮಾಡಬಹುದು. ಅಥವಾ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪತ್ರಿಕಾ ಭವನದ ಮೊದಲನೇ ಮಹಡಿ, ಶ್ರೀ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರ ಹಿಂದುಗಡೆ, ರೈಲ್ವೆ ನಿಲ್ದಾಣದ ರಸ್ತೆ, ರಾಯಚೂರು ಜಿಲ್ಲೆ, ರಾಯಚೂರು ಇಲ್ಲಿಗೆ ಪೋಸ್ಟ್ ಮಾಡಬಹುದು. ಅಥವಾ ಮೊಬೈಲ್ ಸಂಖ್ಯೆ 9916111356 ಅಥವಾ 9008462236 ಗೆ ವಾಟ್ಸಪ್ ಮಾಡಬಹುದಾಗಿದೆ.

ಕವಿತೆಯೊಂದಿಗೆ ಕಡ್ಡಾಯವಾಗಿ ತಮ್ಮ ಹೆಸರು, ಸ್ಥಳ, ವಿದ್ಯಾರ್ಹತೆ, ದೂರವಾಣಿ ಸಂಖ್ಯೆಯ ವಿವರ, ವಯಸ್ಸಿನ ದಾಖಲೆಗಾಗಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಮತ್ತು ವಿಳಾಸದ ದಾಖಲೆಗಾಗಿ ಆಧಾರ್ ಕಾರ್ಡ್ ಝರಾಕ್ಸ ಪ್ರತಿ ಕಳುಹಿಸಬೇಕು. ಕವಿಗಳ ಆಯ್ಕೆಯಲ್ಲಿ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ಕೊನೆಯ ದಿನಾಂಕದ ನಂತರ ಬರುವ ಕವಿತೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ರಾಯಚೂರು ಜಿಲ್ಲಾ ಉತ್ಸವದ ಪುಸ್ತಕ ಪ್ರದರ್ಶನ, ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿ ಸಮಿತಿಯ ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande