ಬಾರೆ ಹಣ್ಣು ಬೆಳೆದು ಭಾರಿ ಲಾಭಗಳಿಸಿದ ಬಸವನಾಡಿನ ರೈತ!
ವಿಜಯಪುರ, 11 ಜನವರಿ (ಹಿ.ಸ.) : ಆ್ಯಂಕರ್ : ಬಡವರ ಸೇಬು ಎಂದೇ ಖ್ಯಾತವಾಗಿರುವ ಬಾರೆ ಹಣ್ಣು ಬಸವನಾಡಿನ ರೈತನ ಕೈ ಹಿಡಿದಿದೆ! ನಾಗಠಾಣದ ಹಡಗಲಿ ಗ್ರಾಮದ ಪ್ರಗತಿ ಪರ ರೈತರಾದ ಸಂತೋಷ್ ಶ್ರೀ ಶೈಲ ಹತರಕಿ ಅವರು ತಮ್ಮ 2.5 ಎಕರೆ ಜಮೀನಿನಲ್ಲಿ ಬಾರೆ ಹಣ್ಣು ಬೆಳೆದು ಕೆ.ಜಿ. ಗೆ .ರೂ. 42ರಂತೆ ಮಾರಾಟ ಮಾಡಿ
ರೈತ


ವಿಜಯಪುರ, 11 ಜನವರಿ (ಹಿ.ಸ.) :

ಆ್ಯಂಕರ್ : ಬಡವರ ಸೇಬು ಎಂದೇ ಖ್ಯಾತವಾಗಿರುವ ಬಾರೆ ಹಣ್ಣು ಬಸವನಾಡಿನ ರೈತನ ಕೈ ಹಿಡಿದಿದೆ! ನಾಗಠಾಣದ ಹಡಗಲಿ ಗ್ರಾಮದ ಪ್ರಗತಿ ಪರ ರೈತರಾದ ಸಂತೋಷ್ ಶ್ರೀ ಶೈಲ ಹತರಕಿ ಅವರು ತಮ್ಮ 2.5 ಎಕರೆ ಜಮೀನಿನಲ್ಲಿ ಬಾರೆ ಹಣ್ಣು ಬೆಳೆದು ಕೆ.ಜಿ. ಗೆ .ರೂ. 42ರಂತೆ ಮಾರಾಟ ಮಾಡಿ ರೂ.3 ಲಕ್ಷ ಆದಾಯ ಗಳಿಸಿರುವುದಾಗಿ ತಿಳಿಸಿದರು. ಬಾರೆ ಹಣ್ಣಿನ ಜೊತೆಗೆ ತಮ್ಮ ಉಳಿದ ಜಮೀನಿನಲ್ಲಿ ವಾರ್ಷಿಕ ಸುಮಾರು 40-50 ಲಕ್ಷ ಗಳಿಸುತ್ತಿರುವುದಾಗಿ ಹೆಮ್ಮೆಯಿಂದ ನುಡಿದರು.

ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ನಮ್ಮ ನೀರಾವರಿ ಯೋಜನೆಗಳು ಅವರ ಕೃಷಿ ಮತ್ತು ತೋಟಗಾರಿಕೆಗೆ ವರದಾನವಾಗಿರುವುದಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ತಾವು ಬೆಳೆದಿರುವ ಬಾರೆ ಹಣ್ಣುಗಳನ್ನು ಉಡುಗೊರೆಯಾಗಿ ನೀಡಿದರು. ಅವರ ಪ್ರೀತಿ ಮತ್ತು ಅಭಿಮಾನಕ್ಕೆ ಹೃದಯಪೂರ್ವಕ ಧನ್ಯವಾದಗಳು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande