ವಿಜಯಪುರ, 28 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾರತ ಮತ್ತು ಪಾಕಿಸ್ತಾನದ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಫೈನಲ್ ಪಂದ್ಯಾವಳಿಗೆ ವಿಜಯಪುರ ನಗರದಲ್ಲಿ ಭಾರೀ ಉತ್ಸಾಹ ಮನೆ ಮಾಡಿದೆ. ಕ್ರಿಕೆಟ್ ಅಭಿಮಾನಿಗಳು ಮತ್ತು ಸೇನೆ ಸೇರಲು ಆಕಾಂಕ್ಷೆ ಯುವಕರು 'ಗೆದ್ದು ಬಾ ಇಂಡಿಯಾ, ಆಲ್ ದ ಬೆಸ್ಟ್ ಇಂಡಿಯಾ' ಎಂಬ ಘೋಷಣೆಗಳೊಂದಿಗೆ ಭಾರತ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ನಗರದ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಘೋಷಣೆ ಹಾಕಿದರು. ಅಲ್ಲದೇ, ಈ ಹಣಾಹಣಿಯಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನು ದೇಶಪ್ರೇಮದೊಂದಿಗೆ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande