ವಿಜಯಪುರ, 19 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಶಿಶಿಕ್ಷು ತರಬೇತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಅನುಷ್ಠಾನಗೊಳಿಸಲು ನಾಳೆ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿಜಯಪುರ ನರದ ಮಠಪತಿ ಗಲ್ಲಿಯ ಖೇಡ ಕಾಲೇಜ್ ಆವರಣದಲ್ಲಿ ಶಿಶುಕ್ಷು ಮೇಳ ಆಯೋಜಿಸಲಾಗಿದೆ.
ಐಟಿಐ ಪಾಸಾದ ಅಭ್ಯರ್ಥಿಗಳು ನ್ಯಾಪ್ ಲಿಂಕ್ http://www.apprenticeshipindia.gov.in/candidate-registration ಮೂಲಕ ನೊಂದಾಯಿಸಿಕೊಂಡು ಮೇಳದಲ್ಲಿ ಭಾಗವಹಿಸಬಹುದಾಗಿದೆ ಹಾಗೂ ಉದ್ದಿಮೆದಾರರು ಗೂಗಲ್ ಲಿಂಕ್ www.apprenticeshipindia.gov.in/establishment-registration ನಲ್ಲಿ ನೊಂದಾಯಿಸಿಕೊಂಡು ಈ ಮೇಳದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ : 9886437517/9620848158/8867215182 ಸಂಖ್ಯೆಗೆ ಅಥವಾ ಸರ್ಕಾರಿ-ಅನುದಾನಿತ ಖಾಸಗಿ ಐಟಿಐ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ದೇವರಹಿಪ್ಪರಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande