ವಿಶ್ವ ರೋಗಿಗಳ ಸುರಕ್ಷತಾ ದಿನದ ಅಂಗವಾಗಿ ಜಾಗೃತಿ ಮಾತುಕತೆ ಕಾರ್ಯಕ್ರಮ
ವಿಜಯಪುರ, 19 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : 10ನೇ ರಾಷ್ಟೀಯ ಆಯುರ್ವೇದ ದಿನಾಚರಣೆ ಅಂಗವಾಗಿ ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಶಲ್ಯತಂತ್ರ ವಿಭಾಗ ಮತ್ತು ಬಿ.ಎಲ್.ಡಿ.ಇ(ಡೀಮ್ಡ್) ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನೆ ಕೇಂ
ಜಾಗೃತಿ


ವಿಜಯಪುರ, 19 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : 10ನೇ ರಾಷ್ಟೀಯ ಆಯುರ್ವೇದ ದಿನಾಚರಣೆ ಅಂಗವಾಗಿ ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಶಲ್ಯತಂತ್ರ ವಿಭಾಗ ಮತ್ತು ಬಿ.ಎಲ್.ಡಿ.ಇ(ಡೀಮ್ಡ್) ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಸಹಯೋಗದಲ್ಲಿ ವಿಶ್ವ ರೋಗಿಗಳ ಸುರಕ್ಷತಾ ದಿನದ ಅಂಗವಾಗಿ ಜಾಗೃತಿ ಮಾತುಕತೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಲ್.ಡಿ.ಇ ಡೀಮ್ಡ್ ವಿವಿಯ ಸಾಮಾನ್ಯ ಶಸ್ತ್ರಚಿಕಿತ್ಸೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಆನಂದ ಸುಂತಾನ, ರೋಗಿಗಳ ಸುರಕ್ಷತೆಗೆ ಅಗತ್ಯವಾಗಿರುವ ಕ್ರಮಗಳು, ವಹಿಸಬೇಕಿರುವ ಮುಂಜಾಗೃತೆ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ, ಬಿ.ಎಲ್.ಡಿ.ಇ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಡಾ. ಎಂ. ಬಿ. ಪಾಟೀಲ, ಆಯುರ್ವೇದ ಕಾಲೇಜಿನ ಡಾ. ಪ್ರಸಾದಶಕ್ತಿ ಜಿ. ಗಣ್ಣೂರ ಮುಂತಾದವರು ಉಪಸ್ಥಿತರಿದ್ದರು.

ಆಯುರ್ವೇದ ವೈದ್ಯ ವಿದ್ಯಾರ್ಥನಿ ಡಾ. ಸ್ನೇಹಾ ಬಂಗಡಿ ದೇಸಾಯಿ ನಿರೂಪಿಸಿದರು. ವೈದ್ಯಕೀಯ ವಿದ್ಯಾರ್ಥಿಗಳು, ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತದಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande