ಉತ್ತರಾಖಂಡನಲ್ಲಿ‌ ಭಾರಿ ಮಳೆ ; ಅಪಾರ ಹಾನಿ
ಡೆಹ್ರಾಡೂನ್, 16 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಉತ್ತರಾಖಂಡದ ಸಹಸ್ರಧಾರ ಪ್ರದೇಶದ ಕಾರ್ಲಿಗಢದಲ್ಲಿ ಅಪಾರ ಹಾನಿ ಸಂಭವಿಸಿದೆ. ಅನೇಕ ಮನೆಗಳು ಮತ್ತು ಅಂಗಡಿಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಪ್ರವಾಸಿ ತಾಣ ಸಹಸ್ರಧಾರಕ್ಕೂ ಹಾನಿಯಾಗಿದೆ. ಸಾಂಗ್ ನದಿ ಉಕ್ಕ
ಉತ್ತರಾಖಂಡನಲ್ಲಿ‌ ಭಾರಿ ಮಳೆ ; ಅಪಾರ ಹಾನಿ


ಡೆಹ್ರಾಡೂನ್, 16 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಉತ್ತರಾಖಂಡದ ಸಹಸ್ರಧಾರ ಪ್ರದೇಶದ ಕಾರ್ಲಿಗಢದಲ್ಲಿ ಅಪಾರ ಹಾನಿ ಸಂಭವಿಸಿದೆ. ಅನೇಕ ಮನೆಗಳು ಮತ್ತು ಅಂಗಡಿಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಪ್ರವಾಸಿ ತಾಣ ಸಹಸ್ರಧಾರಕ್ಕೂ ಹಾನಿಯಾಗಿದೆ. ಸಾಂಗ್ ನದಿ ಉಕ್ಕಿ ಹರಿಯುತ್ತಿದ್ದು ಅಪಾಯವನ್ನುಂಟುಮಾಡಿದೆ.

ರಾಯ್‌ಪುರ ಕೇಶರ್ ವಾಲಾದಲ್ಲಿ ಸುಮಾರು 90 ಮೀಟರ್ ರಸ್ತೆ ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿದೆ. ಹರಿದ್ವಾರ ರಾಷ್ಟ್ರೀಯ ಹೆದ್ದಾರಿಯ ಲಾಲ್‌ತಪ್ಪಡ್ ಪ್ರದೇಶದ ಸೀಮಾ ಡೆಂಟಲ್ ಕಾಲೇಜು ಬಳಿಯ ಕಲ್ವರ್ಟ್ ಹಾನಿಗೊಳಗಾಗಿ ಸಂಚಾರ ನಿಷೇಧಿಸಲಾಗಿದೆ. ವಾಹನಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಗಿದೆ.

ಜಿಲ್ಲಾಧಿಕಾರಿ ಸವಿನಯ್ ಬನ್ಸಾಲ್ ಅವರ ನಿರ್ದೇಶನದಂತೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನದಿ ದಡದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande