
ಬೆಂಗಳೂರು, 05 ಆಗಸ್ಟ್ (ಹಿ.ಸ.) :
ಆ್ಯಂಕರ್ : ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಸಾರಿಗೆ ನೌಕರರು ಮುಷ್ಕರ ಆರಂಭವಾಗಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.
ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್ ಗಳ ಅವಲಂಬಿತರು ನೌಕರರ ಮುಷ್ಕರದಿಂದ ಕೆಲಸ, ಶಾಲೆ, ಕಾಲೇಜುಗಳಿಗೆ ಹೋಗಲು ಪರದಾಡುತ್ತಿದ್ದಾರೆ.
ಇದೇ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲು ಸರಕಾರ ತಿರ್ಮಾನಿಸಿದೆ.
ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರ ಭಾಗಶಃ ಸ್ಥಗಿತಗೊಂಡಿದ್ದು, 4,000 ಖಾಸಗಿ ಬಸ್‌ಗಳ ಸೇವೆಗಾಗಿ ಬಸ್ ಮಾಲೀಕರ ಸಂಘಕ್ಕೆ ಸರ್ಕಾರ ಮನವಿ ಮಾಡಿದೆ.
ರಾಜ್ಯವ್ಯಾಪಿ 11,000 ಖಾಸಗಿ ಬಸ್‌ಗಳನ್ನು ಒದಗಿಸುವಂತೆ ತಿಳಿಸಲಾಗಿದೆ. ಇನ್ನು ಆಯಾ ವಿಭಾಗಗಳಲ್ಲಿ ಹೊಸದಾಗಿ ನೇಮಕವಾದ ನೌಕರರು ಹಾಗೂ ಖಾಸಗಿ ಚಾಲಕರನ್ನು ಬಳಸಿಕೊಂಡು ಬಸ್ ಸಂಚಾರ ನಡೆಸಲು ಸಾರಿಗೆ ನಿಗಮಗಳು ಮುಂದಾಗಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa