ಗುರುಪಾದ ಶಿವಯೋಗೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಪರ್ವ ಸಮಾರಾಧನೆ
ರಾಯಚೂರು, 31 ಆಗಸ್ಟ್ (ಹಿ.ಸ.) : ಆ್ಯಂಕರ್ : ನಗರದ ಸಾವಿರ ದೇವರ ಸಂಸ್ಥಾನ ಕಿಲ್ಲೇಬ್ರಹನ್ಮಠದಲ್ಲಿ 19ನೇ ವರ್ಷದ ಸದ್ಬಾವನಾ ಪಾದಯಾತ್ರೆ.ಮತ್ತು ಕೋಳಂಕಿ ಜೀವೈಕ್ಯ ಗುರುಪಾದ ಶಿವಯೋಗೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳ 974ನೇ ವರ್ಷದ ಜಯಂತಿಯ ಪರ್ವ ಸಮಾರಾಧನೆಯನ್ನು ಮಾಜಿ ಶಾಸಕ ತಿಪ್ಪರಾಜ ಹವಲ್ದಾರ್ ಅವ
ಗುರುಪಾದ ಶಿವಯೋಗೀಶ್ವರ ಶಿವಾಚಾರ್ಯ  ಮಹಾಸ್ವಾಮಿಗಳ ಪರ್ವ ಸಮಾರಾಧನೆ


ರಾಯಚೂರು, 31 ಆಗಸ್ಟ್ (ಹಿ.ಸ.) :

ಆ್ಯಂಕರ್ : ನಗರದ ಸಾವಿರ ದೇವರ ಸಂಸ್ಥಾನ ಕಿಲ್ಲೇಬ್ರಹನ್ಮಠದಲ್ಲಿ 19ನೇ ವರ್ಷದ ಸದ್ಬಾವನಾ ಪಾದಯಾತ್ರೆ.ಮತ್ತು ಕೋಳಂಕಿ ಜೀವೈಕ್ಯ ಗುರುಪಾದ ಶಿವಯೋಗೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳ 974ನೇ ವರ್ಷದ ಜಯಂತಿಯ ಪರ್ವ ಸಮಾರಾಧನೆಯನ್ನು ಮಾಜಿ ಶಾಸಕ ತಿಪ್ಪರಾಜ ಹವಲ್ದಾರ್ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಶಾಂತಿ, ನೆಮ್ಮಧಿಗಳ ಸಂಕೇತೇ ಮಠಗಳಾಗಿವೆ ಸದ್ಭಾವನಾ ಪಾದಯಾತ್ರೆಯಲ್ಲಿ ಜಾತಿ, ಮತ, ಪಂಥ ಬೇಧ ಬಾವ ವಿಲ್ಲದೆ ಪಾದಯಾತ್ರೆ ಮಾಡುವ ಮೂಲಕ ಜನರಿಗೆ ರೈತರಿಗೆ ಒಳಿತಾಗಲಿ ಎಂದು ಹೇಳಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮಠದ ಪಂ. ಪಂಪಾಪತಿ ಶಾಸ್ತ್ರಿಗಳು ನಾಡಂಗಮಠದ ಕುಟುಂದವರು ಕೊಳಂಕಿ ಜೀವೈಕ್ಯ ಗುರುಪಾದ ಶಿವಯೋಗಿ ಶಿವಾಚಾರ್ಯರ ಭಾವಚಿತ್ರವನ್ನು ಶ್ರೀಮಠದಲ್ಲಿ ಅಲಂಕಾರಗೊಳಿಸಿದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಹೂಮಾಲೆ ಹಾಕಿ ಸರ್ವ ಶ್ರೀಗಳಿಂದ ಮಹಾ ಮಂಗಳಾರುತಿಯನ್ನು ಬೆಳಗಿಸಲಾಯಿತು.

ಸದ್ಭಾವನಾ ಪಾದಯಾತ್ರೆಯು ಶ್ರೀ ಕಿಲ್ಲೇಬೃನ್ಮಠದಿಂದ ಪ್ರಾರಂಭಗೊಂಡು ಜಿಲ್ಲಾ ಕಾರಾಗೃಹ ರಸ್ತೆ, ತಹಶೀಲ್ದಾರ ಕಛೇರಿ, ಮಹಾನಗರ ಪಾಲಿಕೆ, ಕೇಂದ್ರ ಬಸ್ ನಿಲ್ದಾಣ, ಡಾ. ಬಿ.ಆರ್. ಅಂಬೇಡ್ಕರ ಪುತ್ತಳಿಗೆ ಮಾಲಾರ್ಪಣೆ ಸಲ್ಲಿಸಿ, ನೃಪತುಂಗಾ ಹೋಟೆಲ, ಪಂ. ಸಿದ್ದರಾಮ ಜಂಬಲದಿನ್ನಿ ರಂಗಮಂದಿರ ರಸ್ತೆ, ರೈಲ್ವೇ ಸ್ಟೇಷನ್ ವೃತ್ತ, ಆಶಾಪೂರ ರಸ್ತೆಯ ವೃತ್ತದ ಮೂಲಕ ಕೊಳಂಕಿ ಸುಕ್ಷೇತ್ರವನ್ನು ತಲುಪಿ, ಜೀವೈಕ್ಯ ಕೊಳಂಕಿ ಗುರುಪಾದೇಶ್ವರರ ದೇವಸ್ಥಾನದ ಆವರಣದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಕರ್ತು ಗದ್ದುಗೆಗೆ ಮಹಾ ಮಂಗಳಾರುತಿಯನ್ನು ನೆವೇರಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande