ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚರ್ಚಾ ಸ್ಪರ್ಧ
ಗದಗ, 31 ಆಗಸ್ಟ್ (ಹಿ.ಸ.) : ಆ್ಯಂಕರ್ : ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ, ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಶ್ರೀ ಬಸವೇಶ್ವರ ಮಹಾವಿದ್ಯಾಲಯ, ಗದಗ ಇವರ ಸಹಯೋಗದೊಂದಿಗೆ ದಿನಾಂಕ: 02.09.2025 ಮಂಗಳವಾರ ಪ್ರಬಂಧ ಸ್ಪರ್ಧೆ
ಪೋಟೋ


ಗದಗ, 31 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ, ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಶ್ರೀ ಬಸವೇಶ್ವರ ಮಹಾವಿದ್ಯಾಲಯ, ಗದಗ ಇವರ ಸಹಯೋಗದೊಂದಿಗೆ ದಿನಾಂಕ: 02.09.2025 ಮಂಗಳವಾರ ಪ್ರಬಂಧ ಸ್ಪರ್ಧೆಯನ್ನು ಹಾಗೂ ಜೆ.ಟಿ. ಕಾಲೇಜ್, ಗದಗ ಇವರ ಸಹಯೋಗದೊಂದಿಗೆ ದಿನಾಂಕ: 03.09.2025 ರಂದು ಚರ್ಚಾ ಸ್ಪರ್ಧೆಯನ್ನು ಜೆ.ಟಿ. ಅಡಿಟೋರಿಯಂ ಹಾಲ್ ಗದಗದಲ್ಲಿ ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷರಾದ ಸಿ.ಎಂ.ಪಾಟೀಲ ರವರ ಅಧ್ಯಕ್ಷತೆಯಲ್ಲಿ ಜರುಗಿಸಲಾಗುವುದು.

ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ದಿನಾಂಕ: 02.09.2025 ಮಂಗಳವಾರ ಮದ್ಯಾಹ್ನ12:00 ಘಂಟೆಗೆ “ವಿದ್ಯಾರ್ಥಿಗಳಿಗೆ ಸಹಕಾರ ಸಂಘಗಳ ಕಾರ್ಯನಿರ್ವಹಣೆಯ ಪ್ರಾತ್ಯಕ್ಷತೆಯನ್ನು ನೀಡುವುದರಿಂದ ಸಹಕಾರಿ ವ್ಯವಸ್ಥೆಯ ಬೆಳವಣಿಗೆ ನೆರವಾಗಬಲ್ಲದು” ಎಂಬ ವಿಷಯ ಕುರಿತು. ಆಯ್ದ ಪ್ರೌಢಶಾಲೆ ವಿದ್ಯಾರ್ಥಿ/ವಿದ್ಯಾರ್ಥಿನಿಯರುಗಳಿಗೆ ಶ್ರೀ ಬಸವೇಶ್ವರ ಮಹಾವಿದ್ಯಾಲಯ, ಭೂಮರಡ್ಡಿ ಸರ್ಕಲ್ ಹತ್ತಿರ ಪಾಲಾ ಬದಾಮಿ ರಸ್ತೆ, ಗದಗ ಇದರ ಸಭಾಭವನದಲ್ಲಿ ಜರುಗಿಸಲಾಗುವುದು. ವಿಜೇತರಿಗೆ ಸೂಕ್ತ ನಗದು ಬಹುಮಾನ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು ಅನುಕ್ರಮವಾಗಿ ಹೆಚ್ಚು ಅಂಕ ಪಡೆದ ಮೂರು ಉತ್ತರ ಪತ್ರಿಕೆಗಳನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳುರ ಇವರಿಗೆ ರಾಜ್ಯ ಮಟ್ಟದ ಆಯ್ಕೆಗಾಗಿ ಕಳುಹಿಸಲಾಗುವುದು.

ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯನ್ನು ದಿನಾಂಕ: 03.09.2025 ಬುಧವಾರ ರಂದು ಬೆಳಿಗ್ಗೆ 11:00 ಘಂಟೆಗೆ ಜೆ.ಟಿ.ಕಾಲೇಜ್, ಅಡಿಟೋರಿಯಂ ಹಾಲ್, ಗದಗದಲ್ಲಿ “ಶಾಲಾ ಕಾಲೇಜು ಪಠ್ಯದಲ್ಲಿ ಸಹಕಾರ ವಿಷಯ ಸೇರ್ಪಡೆ ಹಾಗೂ ಸಹಕಾರಿ ವಿಶ್ವವಿದ್ಯಾಲಯಗಳ ಸ್ಥಾಪನೆಯಿಂದ ಮಾತ್ರವೇ ಸಹಕಾರಿ ವ್ಯವಸ್ಥೆ ಸದೃಢಗೊಳ್ಳಬಲ್ಲದು” ಎಂಬ ವಿಷಯದ ಕುರಿತು. ಚರ್ಚಾ ಸ್ಫರ್ಧೆ ಏರ್ಪಪಡಿಸಲಾಗಿದೆ. ಈ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಲ್ಲಿ ಎರಡು ಗುಂಪುಗಳನ್ನು ಮಾಡಲಾಗುವುದು(1) ವಿಷಯದ ಪರವಾಗಿ (2) ವಿಷಯದ ವಿರೋಧವಾಗಿ ಮಾತನಾಡಬೇಕಾಗುವುದು. ಈ ಚರ್ಚಾ ಸ್ಪರ್ದೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿಜೇತರಾದ ವಿದ್ಯಾರ್ಥಿಗಳನ್ನು ರಾಜ್ಯದ ಆಯ್ದ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಲು ಕಳುಹಿಸಿ ಕೂಡಲಾಗುವುದು. ರಾಜ್ಯ ಮಟ್ಟದ ಚರ್ಚಾ ಸ್ಫರ್ಧೆ ನಡೆಯುವ ದಿನಾಂಕ, ವೇಳೆ ಇತ್ಯಾದಿಗಳನ್ನು ನಂತರ ತಿಳಿಸಲಾಗುವುದು. ಗದಗ ಬಸವೇಶ್ವರ ಡಿಗ್ರಿ ಕಾಲೇಜ್, ಗದಗದಲ್ಲಿ ಹಾಗೂ ದಿನಾಂಕ: 03.09.2025 ರಂದು ಜೆ.ಟಿ.ಕಾಲೇಜ್, ಅಡಿಟೋರಿಯಂ ಹಾಲ್, ಗದಗದಲ್ಲಿ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರುಗಳಿಗೆ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಎಸ್.ಎಸ್.ಕಬಾಡೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಗದಗ ಇದರ ಉಪನಿರ್ದೇಶಕರಾದ ಸಿದ್ದಲಿಂಗ ಬಂಡು ಮಸನಾಯಕ, ಶಾಲಾ ಶಿಕ್ಷಣ ಇಲಾಖೆ, ಗದಗ ಇದರ ಉಪನಿರ್ದೇಶಕರಾದ ಆರ್. ಎಸ್. ಬುರಡಿ ಬಸವೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎಂ. ಎಂ. ಬುರಡಿ, ಪ್ರಶಾಂತ ಮುಧೋಳ, ಸಹಕಾರ ಅಭಿವೃದ್ಧಿ ಅಧಿಕಾರಿಗಳು, ರೋಣ, ಮುಖ್ಯ ಅತಿಥಿಗಳು ಹಾಗೂ ತೀರ್ಪುಗಾರರಾಗಿ ವಿಶ್ರಾಂತ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಂ. ಸಿ. ಉಪ್ಪಿನ, ಕ.ಹಾ.ಮ.ತರಬೇತಿ ಕೇಂದ್ರದ ನಿವೃತ್ತ ಜಂಟಿ ನಿರ್ದೇಶಕರಾದ ಎಂ. ಬಿ. ಮಡಿವಾಳರ ಮತ್ತು ಕೆ.ಆಯ್.ಸಿ.ಎಂ. ಧಾರವಾಡ ಇದರ ಪ್ರಾಂಶುಪಾಲರಾದ ಡಿ. ಆರ್. ವೆಂಕಟರಾಮ ಇವರು ಆಗಮಿಸುವರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande