ಈದ್ ಮಿಲಾದ್ ಗೆ ಡಿಜೆ ಬ್ಯಾನ್, ಮುಸ್ಲಿಂ ಮುಖಂಡರ ತೀರ್ಮಾನ
ಗದಗ, 31 ಆಗಸ್ಟ್ (ಹಿ.ಸ.) : ಆ್ಯಂಕರ್ : ಸೆಪ್ಟೆಂಬರ್ 5ರಂದು ನಡೆಯಲಿರುವ ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಜಯಂತಿ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಜಮಾತ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಗದಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮುಖಂಡರು ಮಾತನಾಡಿದರು,
ಪೋಟೋ


ಗದಗ, 31 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸೆಪ್ಟೆಂಬರ್ 5ರಂದು ನಡೆಯಲಿರುವ ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಜಯಂತಿ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಜಮಾತ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಗದಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮುಖಂಡರು ಮಾತನಾಡಿದರು, ಈ ಬಾರಿ ಹಬ್ಬದ ವೇಳೆ ಡಿಜೆ ಬಳಸಬಾರದು ಎಂದು ನಿರ್ಣಯ ಕೈಗೊಳ್ಳಲಾಗಿದ್ದು, ಅದರಿಂದಾಗುವ ವೆಚ್ಚವನ್ನು ಬಡವರಿಗೆ ಪುಡ್ ಕಿಟ್ ವಿತರಣೆ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಬಳಸಲಾಗುವುದು ಎಂದು ಮೌಲಾನಾ ಜಕಾರಿಯಾ ಸಾಬ್ ತಿಳಿಸಿದರು.

ಗಂಗಿಮಡಿಯ ಅಬು ಹುರೇರಾ ಮಸೀದಿಯಲ್ಲಿ ಜಮಾತ್ ಮುಖಂಡರು, ಈದ್ ಮಿಲಾದ್ ಕಮಿಟಿ ಹಾಗೂ ನೌ-ಜವಾನ್ ಕಮಿಟಿ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ನಡೆದಿತ್ತು. ಸಭೆಯಲ್ಲಿ ಎಲ್ಲರೂ ಒಂದೇ ಮನಸ್ಸಿನಿಂದ ಡಿಜೆ ನಿಷೇಧಕ್ಕೆ ಒಪ್ಪಿಕೊಂಡಿದ್ದಾರೆ.

ಇದರ ಕುರಿತು ಸಮಾಜದ ನಾಯಕರು ಈಗಾಗಲೇ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅವರಿಗೆ ಮನವಿ ಸಲ್ಲಿಸಿದ್ದು, ಹಬ್ಬವನ್ನು ಯಾರಿಗೂ ತೊಂದರೆ ಆಗದಂತೆ ಆಚರಿಸಲು ಕಟಿಬದ್ಧರಾಗಿದ್ದಾರೆ. ಶಾಂತಿಯೇ ನಮ್ಮ ಮೂಲ ಧರ್ಮ, ಡಿಜೆಗೆ ಅವಕಾಶ ನೀಡಬಾರದು ಎಂಬ ನಿರ್ಧಾರವನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೂ ತಿಳಿಸಲಾಗಿದೆ ಎಂದು ಸಭೆಯಲ್ಲಿಯೇ ಒತ್ತಿ ಹೇಳಲಾಯಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande