ಆಶ್ರಯ ಕಾಲೋನಿ ಗಣಪತಿ ಉತ್ಸವ ಮಾದರಿಯಾಗಿದೆ : ಎಸ್‌ಪಿ ರೋಹನ್‌ ಜಗದೀಶ್‌
ಗದಗ, 31 ಆಗಸ್ಟ್ (ಹಿ.ಸ.) : ಆ್ಯಂಕರ್ : ಎಲ್ಲಿ ಜಾತಿ, ಧರ್ಮ ಎಂಬುವುದನ್ನು ಮರೆತು ಜನರು ಒಗ್ಗಟ್ಟಾಗಿ ಬಾಳುತ್ತಾರೋ ಅಲ್ಲಿ ಖುಷಿಯ ವಾತಾವರಣ ನಿರ್ಮಾಣವಾಗಿರುತ್ತದೆ ಅದಕ್ಕೆ ಸಾಕ್ಷಿ ಎಂಬುವುದು ಇಲ್ಲಿನ ಜನರ ಜೀವನವಾಗಿದೆ. ಆದ್ದರಿಂದ ನಿತ್ಯ ಜೀವನದಲ್ಲಿ ಸಹಬಾಳ್ವೆ, ಸೌಹಾರ್ದತೆ ಎಂಬುದು ಅಳವಡಿಸಿಕೊಳ್ಳಬ
ಪೋಟೋ


ಗದಗ, 31 ಆಗಸ್ಟ್ (ಹಿ.ಸ.) :

ಆ್ಯಂಕರ್ : ಎಲ್ಲಿ ಜಾತಿ, ಧರ್ಮ ಎಂಬುವುದನ್ನು ಮರೆತು ಜನರು ಒಗ್ಗಟ್ಟಾಗಿ ಬಾಳುತ್ತಾರೋ ಅಲ್ಲಿ ಖುಷಿಯ ವಾತಾವರಣ ನಿರ್ಮಾಣವಾಗಿರುತ್ತದೆ ಅದಕ್ಕೆ ಸಾಕ್ಷಿ ಎಂಬುವುದು ಇಲ್ಲಿನ ಜನರ ಜೀವನವಾಗಿದೆ. ಆದ್ದರಿಂದ ನಿತ್ಯ ಜೀವನದಲ್ಲಿ ಸಹಬಾಳ್ವೆ, ಸೌಹಾರ್ದತೆ ಎಂಬುದು ಅಳವಡಿಸಿಕೊಳ್ಳಬೇಕು ಆಗ ಎಂತಹದೇ ಸಮಸ್ಯೆ ಬಂದರು ತಾವಾಗಿಯೇ ದೂರವಾಗುತ್ತವೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌ ಹೇಳಿದರು.

ಗದಗ ಜಿಲ್ಲೆಯ ನರೇಗಲ್‌ ಪಟ್ಟಣದ 3ನೇ ವಾರ್ಡ್‌ನ ಜಕ್ಕಲಿ ರೋಡ್‌ ಆಶ್ರಯ ಕಾಲೋನಿಯಲ್ಲಿ ಹಿಂದು-ಮುಸ್ಲಿಂ ಧರ್ಮಿಯರು ಸಾಂಘಿಕವಾಗಿ ಪ್ರತಿಷ್ಠಾಪಿಸುವ ʼಭಾವೈಕ್ಯ ಗಣೇಶೋತ್ಸವʼ ಕ್ಕೆ ಭೇಟಿ ನಿವಾಸಿಗಳನ್ನುದ್ದೇಶಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಧರ್ಮ, ನಂಬಿಕೆ, ಕರುಣೆ ಎಂಬುದರ ಕೊರತೆಯಿಂದ ಜನರು ಸಂಬಂಧಗಳನ್ನು ದೂರಮಾಡಿಕೊಳ್ಳುತ್ತಿದ್ದಾರೆ. ಅಂತಹದರಲ್ಲಿ ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರು ಹಾಗೂ ಇತರರು ಎಲ್ಲೂರು ಅನ್ಯೋನ್ಯವಾಗಿ ಬರುದುಕಿತ್ತಿರುವುದು ನೋಡಿ ಸಂತೋಷವಾಗಿದೆ. ಕೂಲಿಕಾರ್ಮಿಕರು, ಬಡವರು, ರೈತರು ಹಾಗೂ ಶ್ರಮಿಕ ವರ್ಗದ ಜನರೇ ಹೆಚ್ಚಾಗಿರುವ ನಿಮ್ಮ ಓಣಿಯಲ್ಲಿ ಆಚರಣೆಯನ್ನು ಅಚ್ಚುಕಟ್ಟಾಗಿ, ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ.

ಇಲ್ಲಿನ ಗಣಪತಿ ಪ್ರತಿಷ್ಠಾಪನೆ ಹಾಗೂ ವಿಶೇಷ ಆಚರಣೆ ಬಗ್ಗೆ ಓದಿದ ಬಳಿಕ ಆಸಕ್ತಿ ಮೂಡಿತು ಅದಕ್ಕಾಗಿ ನಾನೇ ಖುದ್ದು ವೀಕ್ಷಣೆಗೆ ಬಂದಿರುವೆ. ಈ ಓಣಿಯ ಸಂಸ್ಕೃತಿ ಎಲ್ಲರಿಗೂ ಮಾದರಿಯಾಗಿದೆ ಇದನ್ನು ಹೀಗೆ ಮುಂದೊರೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು. ಜನರು ಪ್ರೀತಿಯಿಂದ ಸ್ವಾಗತಿಸಿ ಗೌರವಿಸಿದ್ದಕ್ಕೆ ನಮಗೆ ಬಹಳ ಸಂತೋಷವಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಪ್ರಜೆಗಳನ್ನಾಗಿಸಬೇಕು ಎಂದರು.

ಬಡವರಿಗಾಗಿ ಹಂಚಿಕೆ ಮಾಡಲಾದ ಆಶ್ರಯ ಕಾಲೋನಿಯ ಓಣಿಗೆ ನಾಲ್ಕು ದಶಕಗಳ ನಂತರ ಜಿಲ್ಲೆ ಎಸ್‌ಪಿ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳ ತಂಡ ಇದೇ ಮೊದಲ ಬಾರಿಗೆ ಆಗಮಿಸಿರುವುದಕ್ಕೆ ನಿವಾಸಸಿಗಳು ಖುಷಿಪಟ್ಟರು ಹಾಗೂ ಆರತಿ ಮಾಡುವ ಮೂಲಕ ಸ್ವಾತಿಸಿದರು. ನಂತರ ಪೊಲೀಸ್‌ ಇಲಾಖೆಯವರು ಗಣಪತಿ ಪೂಜೆಯಲ್ಲಿ ಪಾಲ್ಗೊಂಡರು. ಇದೇ ವೇಳೆ ಎಸ್‌ಪಿ ರೋಹನ್‌ ಜಗದೀಶ್‌ ಅವರು ಮುದ್ದು ಮಕ್ಕಳನ್ನು ಎತ್ತಿಕೊಂಡು ಮುದ್ದಾಡುವುದು, ಶಾಲಾ ಮಕ್ಕಳನ್ನು ಮಾತನಾಡಿಸುವುದು, ಅವರಿಗೆ ಮುಂದೇನು ಆಗುತಿಯಾ ಎಂದು ಪ್ರಶ್ನೆ ಕೇಳಿ ಪ್ರೋತ್ಸಾಯಿಸದನ್ನು ನೋಡಿದ ಜನರು ಚಪ್ಪಾಳೆ ತಟ್ಟಿದರು.

ನಂತರ ಓಣಿಯ ಜನರೊಂದಿಗೆ ಕೆಲಕಾಲ ಬೆರೆತರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರನ್ನು ಕರೆದು ಅವರ ಓದು, ಸಾಧನೆ ಬಗ್ಗೆ ಕೇಳಿದರು ಹಾಗೂ ಇದೇ ಓಣಿಯಿಂದ ಮಹಿಳಾ ಪಿಎಸ್‌ಐ, ಎಸ್‌ಪಿಗಳು ಆಗಲಿ ಎಂದು ಬೆನ್ನು ತಟ್ಟಿದರು. ನಂತ ಜನ್ನರ ಒತ್ತಾಸೆಗೆ ಗ್ರೂಪ್‌ ಫೋಟೋ ತೆಗೆಸಿಕೊಂಡು ರೋಣ ಕಡೆಗೆ ನಿರ್ಗಮಿಸಿದರು.

ಈ ವೇಳೆ ನರಗುಂದ ಡಿವೈಎಸ್‌ಪಿ ಪ್ರಭುಗೌಡ ಕಿರೇದಹಳ್ಳಿ, ರೋಣ ಸಿಪಿಐ ಎಸ್. ಎಸ್. ಬೀಳಗಿ, ನರೇಗಲ್‌ ಠಾಣೆಯ ಪಿಎಸ್‌ಐ ಐಶ್ವರ್ಯ ನಾಗರಾಳ, ಓಣಿಯ ನಿವಾಸಿಗಳಾದ ದಾದುಸಾಬ ನದಾಫ್, ಶರಣಪ್ಪ ಹಂಚಿನಾಳ, ಸದ್ದಾಂ ನಶೇಖಾನ್, ಹಸನಪ್ಪ ಕೊಪ್ಪಳ, ಪರಸಪ್ಪ ರಾಠೋಡ, ವೀರೇಶ ಪಮ್ಮಾರ, ವಿರೂಪಾಕ್ಷಯ್ಯ ಹಿರೇಮಠ, ಚನ್ನವೀರಯ್ಯ ಹಿರೇಮಠ, ಶರಣಪ್ಪ ಕೊಂಡಿ, ಹನಮಂತಪ್ಪ ಜೋಡಗಂಬಳಿ, ನಿಂಗಯ್ಯ ಸಿದ್ದನಗೌಡ್ರ, ರಾಚಯ್ಯ ಹಿರೇಮಠ ಇದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande