ರಾಜ್ಯ ಮಟ್ಟದ ಈಜು ಬ್ಯಾಕ್ ಸ್ಟ್ರೋಕ್‍ನಲ್ಲಿ ಬಳ್ಳಾರಿಯ ಎಸ್.ಜಿ.ಪ್ರಜ್ವಲ್ ಗೆ ಮೂರನೇ ಸ್ಥಾನ
ಬಳ್ಳಾರಿ, 09 ಜುಲೈ (ಹಿ.ಸ.) : ಆ್ಯಂಕರ್ : ಮೈಸೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಈಜು ಬ್ಯಾಕ್ ಸ್ಟ್ರೋಕ್‍ನಲ್ಲಿ ನಗರದ ಬಾಲಭಾರತಿ ಶಾಲೆಯ ವಿದ್ಯಾರ್ಥಿ ಎಸ್.ಜಿ. ಪ್ರಜ್ವಲ್ ಅವರು 3ನೇ ಸ್ಥಾನ ಪಡೆದಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಈಜು ಕೊಳದಲ್ಲಿ ತರಬೇತಿ ಪಡೆಯುತ್ತಿ
ರಾಜ್ಯಮಟ್ಟದ ಈಜು ಬ್ಯಾಕ್ ಸ್ಟ್ರೋಕ್‍ನಲ್ಲಿ ಬಳ್ಳಾರಿಯ ಎಸ್.ಜಿ.ಪ್ರಜ್ವಲ್ ಗೆ ಮೂರನೇ ಸ್ಥಾನ


ಬಳ್ಳಾರಿ, 09 ಜುಲೈ (ಹಿ.ಸ.) :

ಆ್ಯಂಕರ್ : ಮೈಸೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಈಜು ಬ್ಯಾಕ್ ಸ್ಟ್ರೋಕ್‍ನಲ್ಲಿ ನಗರದ ಬಾಲಭಾರತಿ ಶಾಲೆಯ ವಿದ್ಯಾರ್ಥಿ ಎಸ್.ಜಿ. ಪ್ರಜ್ವಲ್ ಅವರು 3ನೇ ಸ್ಥಾನ ಪಡೆದಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಈಜು ಕೊಳದಲ್ಲಿ ತರಬೇತಿ ಪಡೆಯುತ್ತಿದ್ದ ಎಸ್.ಜಿ.ಪ್ರಜ್ವಲ್, ತರಬೇತುದಾರ ಎರ್ರಿಸ್ವಾಮಿ ಅವರ ನಿರ್ದೇಶನ ಹೊಂದಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಗ್ರೇಸಿ ಅವರು ಈ ಬಾಲಕನ ಸಾಧನೆಗೆ ಜಿಲ್ಲಾಡಳಿತ ಅಭಿನಂದಿಸಿದೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande