ಜಿ.ಇ ಸಿಟಿ ಸ್ಕ್ಯಾನ್ ಯಂತ್ರದ ಕಾರ್ಯಾರಂಭ
ವಿಜಯಪುರ, 09 ಜುಲೈ (ಹಿ.ಸ.) : ಆ್ಯಂಕರ್ : ವಿಜಯಪುರ ನಗರದ ಬಿ.ಎಲ್.ಡಿ.ಇ. ಡಿಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಕ್ಷ-ಕಿರಣ ವಿಭಾಗದಲ್ಲಿ ನೂತನವಾಗಿ(GE CT Scan 32 Slice) ಜಿ.ಇ ಸಿಟಿ ಸ್ಕ್ಯಾನ್ ಯಂತ್ರದ ಕಾರ್ಯಾರಂಭ ಸೋಮವಾರ ನಡೆಯ
ಯಂತ್ರ


ವಿಜಯಪುರ, 09 ಜುಲೈ (ಹಿ.ಸ.) :

ಆ್ಯಂಕರ್ : ವಿಜಯಪುರ ನಗರದ ಬಿ.ಎಲ್.ಡಿ.ಇ. ಡಿಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಕ್ಷ-ಕಿರಣ ವಿಭಾಗದಲ್ಲಿ ನೂತನವಾಗಿ(GE CT Scan 32 Slice) ಜಿ.ಇ ಸಿಟಿ ಸ್ಕ್ಯಾನ್ ಯಂತ್ರದ ಕಾರ್ಯಾರಂಭ ಸೋಮವಾರ ನಡೆಯಿತು.

ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದ ವಿವಿ ಸಮಕುಲಪತಿ ಡಾ. ವೈ. ಎಂ. ಜಯರಾಜ, ಈ‌ ಉಪಕರಣವು ರೋಗಿಯ ರೋಗ ತಪಾಸಣೆ ಮತ್ತು ರೋಗ ನಿರ್ಣಯ ಮಾಡುವಲ್ಲಿ ಬಹಳ ಉಪಯುಕ್ತ ಸಾಧನವಾಗಿದೆ. ಇದರ ಸಹಾಯದಿಂದ ಕೋವಿಡ-19 ದಿನಗಳಲ್ಲಿ ರೋಗದ ಭೀಕರತೆಯನ್ನು ಅರಿಯುಲು ಅರಿಯಲು ಬಹಳ ಸಹಾಯವಾಗಲಿದೆ. ಈ ಸೇವೆಯ ಸೇವೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಅಲ್ಲದೇ, ಅಗತ್ಯವಿರುವ ರೋಗಿಗಳು ಈ ಯಂತ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ವಿ. ಪಾಟೀಲ ಮಾತನಾಡಿ, ಆಸ್ಪತ್ರೆಯ ಘಟಕದಲ್ಲಿ ಈಗಾಗಲೇ ಅತ್ಯುನ್ನತವಾದ(GE City Scan 128 Slice) ಸಿಟಿ ಸ್ಕ್ಯಾನ್ ಉಪಕರಣ ಕಾರ್ಯನಿರ್ವಹಿಸುತ್ತಿದೆ. ಈ ಹೊಸ ಉಪಕರಣದ ಮೂಲಕ ಕಾರ್ಡಿಯಾಕ ಸಿಟಿ(Cardiac City) ಹಾಗೂ ಉನ್ನತ ಮಟ್ಟದ ತಪಾಸಣೆಗಳನ್ನು ಮಾಡಬಹುದಾಗಿದೆ ಎಂದು ತಿಳಿಸಿದರು.

ವಿವಿಯ ಕುಲಪತಿಗ ಡಾ. ಅರುಣ ಚಂ. ಇನಾಮದಾರ ಮಾತನಾಡಿ, ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಮತ್ತು ಕುಲಾಧಿಪತಿ ಬಿ.‌ ಎಂ.‌ ಪಾಟೀಲ ಇವರ ಮಾರ್ಗದರ್ಶನದ ಮೇರೆಗೆ ಬಿ.ಎಲ್.ಡಿ.ಇ. ಕಾಲೇಜು ಹಾಗೂ ಆಸ್ಪತ್ರೆ ಅತ್ಯುನ್ನತ ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ. ತೇಜಶ್ವಿನಿ ವಲ್ಲಭ, ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಡಾ. ರಾಜೇಶ ಹೊನ್ನುಟಗಿ, ಡಾ. ಸತೀಶ ಪಾಟೀಲ ಹಾಗೂ ಕ್ಷ-ಕಿರಣ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande