ವಿಶ್ವ ಹುಲಿ ದಿನಾಚರಣೆ
ವಿಶ್ವ ಹುಲಿ ದಿನಾಚರಣೆ
ಬೆಂಗಳೂರಿನ ನಯನ ಕನ್ನಡ ಭವನದಲ್ಲಿ


ಬೆಂಗಳೂರಿನ ನಯನ ಕನ್ನಡ ಭವನದಲ್ಲಿ


ಬೆಂಗಳೂರು, 29 ಜುಲೈ (ಹಿ.ಸ.) :

ಆ್ಯಂಕರ್ : ಬೆಂಗಳೂರಿನ ನಯನ ಕನ್ನಡ ಭವನದಲ್ಲಿ ದಿನಾಂಕ 29 ಜುಲೈ 2025 ರಂದು ಚರಗಿತು. ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್(ರೀ) ಸಂಸ್ಥಾಪಕಿ ಅಂಬಿಕಾ ಸಿ ರವರು ವಿಶ್ವ ಹುಲಿ ದಿನಾಚರಣೆ ಅಂಗವಾಗಿ ನಶಿಸಿ ಹೋಗುತ್ತಿರುವ ಹುಲಿ ಸಂತತಿ - ಸಂರಕ್ಷಣೆ ಕುರಿತಾದಂತಹ ಜನಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಹುಲಿ ವೇಷ ದಾರಿಗಳಾಗಿ, ನೃತ್ಯ ಪ್ರದರ್ಶನ, ನಾಟಕ, ಚಿತ್ರಕಲೆ ಮತ್ತು ಛಾಯ ಚಿತ್ರ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಅರಣ್ಯ ಅಧಿಕಾರಿ ನಾಗಭೂಷಣ್, ಇಂದು ಸಂಜೆ ಪತ್ರಿಕೆ ಸಂಪಾದಕಿ ಪದ್ಮ ನಾಗರಾಜ್, ನಟ, ನಿರ್ಮಾಪಕ ಗಂಡಸಿ ಸದಾ ನಂದ ಸ್ವಾಮಿ, ಹಿರಿಯ ಪತ್ರಕರ್ತರುಗಳಾದ ಶ್ರೀಮತಿ ಶಾಂತಕುಮಾರಿ ಹಾಗೂ ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸಿದ ನಟರಾಜ್ ಮತ್ತು ವನ್ಯ ಜೀವಿ ಛಾಯಾಗ್ರಹಕ ಶಿವಕುಮಾರ್ ಹಾಗೂ ಹಲವಾರು ಪರಿಸರ ಪ್ರೇಮಿಗಳು, ಸಮಾಜ ಸೇವಕರು, ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಉಪಸ್ಥಿತರಿದ್ದು ವಿಶ್ವ ಹುಲಿ ದಿನಾಚರಣೆ ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande