ಕೊಪ್ಪಳ, 11 ಜುಲೈ (ಹಿ.ಸ.) :
ಆ್ಯಂಕರ್ : ಗಣೇಶೋತ್ಸವ ನಿಮಿತ್ತ ನಗರದ ಡಾ.ಸಿಂಪಿ ಲಿಂಗಣ್ಣ ರಸ್ತೆಯ ಶ್ರೀ ಗಜಾನನ ಗೆಳೆಯರ ಬಳಗ 2024ರಿಂದ ಆರಂಭಿಸಿರುವ ಕೊಪ್ಪಳದ ಕೋಟ್ಯಧಿಪತಿ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದ್ದು, 2025ರಲ್ಲಿ ಮತ್ತಷ್ಟೂ ಬದಲಾವಣೆಯ, ಹೊಸ ಕನಸುಗಳೊಂದಿಗೆ ಶುರುವಾಗುತ್ತಿದೆ ಎಂದು ಬಳಗದ ಅಧ್ಯಕ್ಷ ಹಾಗೂ ಕ್ವಿಜ್ ಮಾಸ್ಟರ್ ಬಸವರಾಜ ಕರುಗಲ್ ತಿಳಿಸಿದ್ದಾರೆ.
ಅವರು ಕಳೆದ ವರ್ಷ ಹೊಸ ಪ್ರಯೋಗದ ಹೆಸರಿನಲ್ಲಿ ಪ್ರಾರಂಭಿಸಿದ ಕೊಪ್ಪಳದ ಕೋಟ್ಯಧಿಪತಿ ಕಾರ್ಯಕ್ರಮ ಜನರ ಮೆಚ್ಚುಗೆ ಗಳಿಸಿದೆ. ಈ ವರ್ಷ ಹೊಸ ರೂಪದೊಂದಿಗೆ ಪ್ರತಿಭಾನ್ವಿತರನ್ನು ಪರಿಚಯಿಸುವ, ಬುದ್ಧಿಮತ್ತೆ ಹೆಚ್ಚಿಸುವ, ಮನರಂಜನೆ ಒದಗಿಸುವ ಜೊತೆಗೆ ವಿಜೇತರಿಗೆ ಪುಸ್ತಕ ಹಾಗೂ ನಗದು ಬಹುಮಾನವನ್ನು ನೀಡುವ ಪರಿಕಲ್ಪನೆ ಹೊಂದಿದೆ. ಕೊಪ್ಪಳದ ಕೋಟ್ಯಧಿಪತಿಯ ಆರಂಭಿಕ ಹಂತ ಸಾಮಾನ್ಯ ಜ್ಞಾನ ಕುರಿತ ಪ್ರವೇಶ ಪರೀಕ್ಷೆ ಜುಲೈ 20ರಂದು ಬೆಳಗ್ಗೆ 10-30ಕ್ಕೆ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ (ಬಿಇಒ ಕಚೇರಿ ಹಿಂದುಗಡೆ, ಅಶೋಕ ಸರ್ಕಲ್ ಹತ್ತಿರ) ನಡೆಯುತ್ತಿದೆ.
ಈ ಪ್ರವೇಶ ಪರೀಕ್ಷೆಯು 18 ವರ್ಷದೊಳಗಿನ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಎರಡು ವಿಭಾಗಗಳಲ್ಲಿ ನಡೆಯುತ್ತಿದೆ. ಹೆಸರು ನೋಂದಾಯಿಸುವವರು ಪ್ರವೇಶ ಪರೀಕ್ಷೆಯ ದಿನ ಭಾವಚಿತ್ರ ಮತ್ತು ಆಧಾರ್ ಕಾರ್ಡ್ನ ನಕಲು ಪ್ರತಿ ತರಬೇಕು. ಜೊತೆಗೆ ಫೋನ್-ಎ-ಫ್ರೆಂಡ್ ಆಯ್ಕೆಗೆ ಇಬ್ಬರ ಹೆಸರು ಮತ್ತು ಸಂಪರ್ಕ ಸಂಖ್ಯೆ ಆಯ್ಕೆ ಮಾಡಿಕೊಂಡು ಪ್ರವೇಶ ಪರೀಕ್ಷೆಗೆ ಹಾಜರಾಗಬೇಕು.
ಈ ಕುರಿತು ಹೆಚ್ಚಿನ ಮಾಹಿತಿಗೆ ಬಸವರಾಜ ಕರುಗಲ್ (ಮೊಬೈಲ್ ಸಂಖ್ಯೆ-9380605892), ವಿನೋದ ಚಿನ್ನಿನಾಯ್ಕರ್ (ಮೊಬೈಲ್ ಸಂಖ್ಯೆ-9742560716) ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್