ಜನಸಂಖ್ಯಾ ದುಷ್ಪಾರಿಣಾಮಗಳ ಬಗ್ಗೆ ಯುವಜನತೆಗೆ ಜಾಗೃತಿ : ವೈದ್ಯಾಧಿಕಾರಿ ಡಾ.ದಿವ್ಯಶ್ರೀ
ಹೊಸಪೇಟೆ, 11 ಜುಲೈ (ಹಿ.ಸ.) : ಆ್ಯಂಕರ್ : ಆರೋಗ್ಯಕರ ಸಮಾಜಕ್ಕೆ ಎದುರಾಗುವ ಬೆದರಿಕೆಯನ್ನು ನಿಗ್ರಹಿಸಲು ಮತ್ತು ಮುಂಬರುವ ಪೀಳಿಗೆಗೆ ಉತ್ತಮ ಮತ್ತು ಸುಸ್ಥಿರ ಭವಿಷ್ಯವನ್ನು ಒದಗಿಸಲು, ಅಧಿಕ ಜನಸಂಖ್ಯೆಗೆ ಸಂಬ0ಧಿಸಿದ ಅಪಾಯದ ಬಗ್ಗೆ ಯುವಜನತೆಗೆ ಜಾಗೃತಿ ಮೂಡಿಸುವುದು ಮತ್ತು ಜನರಿಗೆ ಶಿಕ್ಷಣ ನೀಡು
ಜನಸಂಖ್ಯಾ ದುಷ್ಪಾರಿಣಾಮಗಳ ಬಗ್ಗೆ ಯುವಜನತೆಗೆ ಜಾಗೃತಿ : ವೈದ್ಯಾಧಿಕಾರಿ ಡಾ.ದಿವ್ಯಶ್ರೀ


ಜನಸಂಖ್ಯಾ ದುಷ್ಪಾರಿಣಾಮಗಳ ಬಗ್ಗೆ ಯುವಜನತೆಗೆ ಜಾಗೃತಿ : ವೈದ್ಯಾಧಿಕಾರಿ ಡಾ.ದಿವ್ಯಶ್ರೀ


ಹೊಸಪೇಟೆ, 11 ಜುಲೈ (ಹಿ.ಸ.) :

ಆ್ಯಂಕರ್ : ಆರೋಗ್ಯಕರ ಸಮಾಜಕ್ಕೆ ಎದುರಾಗುವ ಬೆದರಿಕೆಯನ್ನು ನಿಗ್ರಹಿಸಲು ಮತ್ತು ಮುಂಬರುವ ಪೀಳಿಗೆಗೆ ಉತ್ತಮ ಮತ್ತು ಸುಸ್ಥಿರ ಭವಿಷ್ಯವನ್ನು ಒದಗಿಸಲು, ಅಧಿಕ ಜನಸಂಖ್ಯೆಗೆ ಸಂಬ0ಧಿಸಿದ ಅಪಾಯದ ಬಗ್ಗೆ ಯುವಜನತೆಗೆ ಜಾಗೃತಿ ಮೂಡಿಸುವುದು ಮತ್ತು ಜನರಿಗೆ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ.ದಿವ್ಯಶ್ರೀ ಹೇಳಿದ್ದಾರೆ.

ತಾಲೂಕಿನ ಗಾದಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡಿದರು, ಯೋಚಿತ ಪೋಷಕತ್ವಕ್ಕಾಗಿ ಗರ್ಭಧಾರಣೆಯ ನಡುವಿನ ಆರೋಗ್ಯಕರ ಸಮಯ ಮತ್ತು ಅಂತರ ಎಂಬ ಧ್ಯೇಯದೊಂದಿಗೆ 2025ರ ವಿಶ್ವ ಜನಸಂಖ್ಯೆ ದಿನದ ಘೋಷವಾಕ್ಯವಾದ ತಾಯಿಯಾಗುವ ವಯಸ್ಸು : ದೇಹ ಮತ್ತು ಮನಸ್ಸಿನ ಸಿದ್ದತೆ” ಎಂದು ಈ ವರ್ಷದಲ್ಲಿ ಆಚರಿಸಲಾಗುತ್ತಿದೆ ಎಂದರು.

ಜನಸಂಖ್ಯೆ ನಿಯಂತ್ರಣ ಪ್ರತಿಯೊಬ್ಬರ ಗುರಿಯಾಗಲಿ. ಜನಸಂಖ್ಯೆ ಹೆಚ್ಚಳದಿಂದ ಆಗುವ ಪರಿಣಾಮಗಳು ನಿಯಂತ್ರಣಕ್ಕಾಗಿ ಅನುಸರಿಸಬೇಕಾದ ಕ್ರಮಗಳ ಕುರಿತು ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಮಾತನಾಡಿ, ಜನಸಂಖ್ಯೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ನೀಡುವ ಸೇವಾ ಸೌಲಭ್ಯಗಳು ಮತ್ತು ತಾತ್ಕಾಲಿಕ ಹಾಗೂ ಶಾಶ್ವತ ಮೌಲ್ಯಗಳ ಬಗ್ಗೆ ಪ್ರತಿ ಆಸ್ಪತ್ರೆಗಳಲ್ಲಿ ಮಾಹಿತಿ ನೀಡಲಾಗುತ್ತಿದೆ ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟಲು ಯುವ ಸ್ನೇಹಿ ಕ್ರಮಗಳನ್ನು ಉತ್ತೇಜಿಸುವುದು. ಸಮಾಜದಲ್ಲಿರುವ ಲಿಂಗ ತಾರತಮ್ಯವನ್ನು ತಪ್ಪಿಸಲು ಜನರಿಗೆ ಶಿಕ್ಷಣ ನೀಡುವುದು. ಅತ್ಯಗತ್ಯ ಪ್ರಾಥಮಿಕ ಆರೋಗ್ಯ ಆರೈಕೆಯ ಭಾಗವಾಗಿ, ಪ್ರತಿ ದಂಪತಿಗಳು ಸಂತಾನೋತ್ಪತ್ತಿ ಆರೋಗ್ಯ ಸೇವೆಗಳಿಗೆ ಅಡೆತಡೆಯಿಲ್ಲದ ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದು. ಗರ್ಭಧಾರಣೆಯ ಸಂಬ0ಧಿತ ಕಾಯಿಲೆಗಳ ಬಗ್ಗೆ ದಂಪತಿಗಳಿಗೆ ಶಿಕ್ಷಣ ನೀಡುವುದು, ಆರಂಭಿಕ ಹೆರಿಗೆಯ ಅಪಾಯದ ಬಗ್ಗೆ ಅವರಿಗೆ ಅರಿವು ಮೂಡಿಸುವುದಾಗಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande