ರಾಯಚೂರು, 01 ಜುಲೈ (ಹಿ.ಸ.) :
ಆ್ಯಂಕರ್ : ನಗರದ ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಯಾತಲಾಬ್ ನಿವಾಸಿಯಾದ ಮೆಹರುನ್ನೀಸಾ ಬೇಗಂ ಗಂಡ ಮಹೆಬೂಬ್(39) ಜೂನ್ 26ರ ರಾತ್ರಿ 8ಕ್ಕೆ ಮನೆಯಿಂದ ಹೊರಗಡೆ ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಕುರಿತು ಸದರ ಬಜಾರ ಪೊಲೀಸ್ ಠಾಣೆಯ ಗುನ್ನೆ ನಂಖ್ಯೆ: 65/2025 ಕಲಂರಡಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಮಹಿಳೆಗೆ ಮಗಳು ಹಲೀಮಾ (18), ಅಲೀಯಾ (16), ಮಗ ಮೌಲಾಲಿ (12) ಸೇರಿದಂತೆ ಒಟ್ಟು ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಇದ್ದಾರೆ.
ಈ ಮಹಿಳೆಯ ಬಗ್ಗೆ ಸುಳಿವು ಸಿಕ್ಕಲ್ಲಿ ಸದರ ಬಜಾರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08532-226148 ಅಥವಾ ಅರಕ್ಷಕ ನಿರೀಕ್ಷಕರು ಸದರ್ ಬಜಾರ್ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ; 9480803830 ಗೆ ಮಾಹಿತಿ ನೀಡುವಂತೆ ಸದರ ಬಜಾರ್ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್