ಗದಗ, 29 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ನರೇಗಲ್ ಪಟ್ಟಣ ಪಂಚಾಯತಿಯ 2025-26 ನೇ ಸಾಲಿನ 24.10% ಎಸ್ ಎಫ್ ಸಿ ಮುಕ್ತ ನಿಧಿಯಲ್ಲಿ ಪರಿಶಿಷ್ಟ ಜಾತಿಯ (ಬಿಇ ) ಇಂಜನಿಯರ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವುದು.
ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ನೀಡುವುದು. ಶೇ 5% ರಲ್ಲಿ ವಿಕಲಚೇತನರಿಗೆ ಕೃತಕ ಶ್ರವಣ ಸಾಧನ ಸಾಮಗ್ರಿಗಳನ್ನು ನೀಡುವ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರದ ಸುತ್ತೋಲೆಯಂತೆ ನರೇಗಲ್ ಪಟ್ಟಣದ ಖಾಯಂ ರಹವಾಸಿಯಾಗಿರಬೇಕು. ಅರ್ಜಿಯನ್ನು ಜುಲೈ 17 ರ ಸಂಜೆ 5 ಗಂಟೆಯೊಳಗಾಗಿ ಮುಖ್ಯಾಧಿಕಾರಿಗಳ ಕಚೇರಿ, ಪಟ್ಟಣ ಪಂಚಾಯತ್ ನರೇಗಲ್ ಈ ವಿಳಾಸಕ್ಕೆ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳನ್ನು ನರೇಗಲ್ ಪಟ್ಟಣ ಪಂಚಾಯತ್ ಕಾರ್ಯಾಲಯ ದೂರವಾಣಿ ಸಂಖ್ಯೆ 08381-268228 ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / Lalita MP