ನವದೆಹಲಿ, 23 ಜೂನ್ (ಹಿ.ಸ.) :
ಆ್ಯಂಕರ್ : ಭಾರತೀಯ ಸೇನೆ ತನ್ನ ನಿಖರ ದಾಳಿ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ 450 'ನಾಗಾಸ್ತ್ರ-1R' ಲೊಯಟರಿಂಗ್ ಮ್ಯುನಿಷನ್‌ಗಳನ್ನು ಖರೀದಿಸಿದೆ. ಇದನ್ನು ನಾಗ್ಪುರದ ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ್ದು, ಶೇಕಡಾ 80ರಷ್ಟು ಸ್ಥಳೀಯಾಂಶಗಳನ್ನು ಬಳಸಲಾಗಿದೆ.
ಈ ಡ್ರೋನ್’ಗಳು ಜಿಪಿಎಸ್ ವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತವೆ ಮತ್ತು ಶತ್ರು ಗುರಿಯ ಮೇಲೆ ನಿಖರ ದಾಳಿ ನಡೆಸುತ್ತವೆ. 4,500 ಮೀ ಎತ್ತರದಿಂದ ಗುರಿ ಮೇಲ್ವಿಚಾರಣೆ ಸಾಧ್ಯವಾಗುತ್ತಿದ್ದು, ಗಾಳಿಯಲ್ಲಿ 60 ನಿಮಿಷಗಳವರೆಗೆ ತಂಗಬಹುದು. ಈ ಡ್ರೋನ್‌ಗಳು ಹಗಲು-ರಾತ್ರಿ ಕಾರ್ಯಾಚರಣೆಗಳಿಗೆ ಸೂಕ್ತವಾಗಿದ್ದು, ಥರ್ಮಲ್ ಕ್ಯಾಮೆರಾ ಮತ್ತು 360° ಗಿಂಬಲ್ ಕ್ಯಾಮೆರಾವನ್ನು ಹೊಂದಿವೆ.
ಇವುಗಳನ್ನು ಲಡಾಖ್ ಮತ್ತು ಝಾನ್ಸಿಯ ಬಬಿನಾದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಈ ವ್ಯವಸ್ಥೆಯು ಮರುಬಳಕೆ ಸಾಧ್ಯವಾಗುವ ಲಾಂಚರ್ ಸಿಸ್ಟಮ್‌ನೊಂದಿಗೆ ಬರುತ್ತದೆ ಮತ್ತು ದಾಳಿಯ ಅಗತ್ಯವಿಲ್ಲದಿದ್ದರೆ ಹಿಂದಕ್ಕೆ ಕರೆಸಿಕೊಳ್ಳುವಂತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa