ಹಾಸನ, 14 ಜೂನ್ (ಹಿ.ಸ.) :
ಆ್ಯಂಕರ್ : ಹಾಸನ ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ 2025–26ನೇ ಸಾಲಿನಿಂದ ಸೆರೆಬ್ರಲ್ ಪಾಲ್ಸಿ, ಮಸ್ಕುಲರ್ ಡಿಸ್ಟ್ರೋಫಿ, ಪಾರ್ಕಿಂಸನ್ ಕಾಯಿಲೆ, ಮಲ್ಟಿಪಲ್ ಸ್ಕ್ಲೆರೋಸಿಸ್, ಆಟಿಸಂ, ಬೌದ್ಧಿಕ ವಿಕಲತೆ ಮತ್ತು ದ್ವಂದ್ವ ಅಂಗವಿಕಲತೆ (ಶ್ರವಣ ಹಾಗೂ ದೃಷ್ಟಿ ನಷ್ಟ) ಹೊಂದಿರುವ ವ್ಯಕ್ತಿಗಳ ಆರೈಕೆದಾರರಿಗೆ ತಿಂಗಳಿಗೆ ರೂ.1000 ಪ್ರೋತ್ಸಾಹಧನ ನೀಡಲು ಯೋಜಿಸಿದೆ.
ಅರ್ಜಿದಾರರು ಕನಿಷ್ಠ 75% ಅಂಗವಿಕಲತೆ ಹೊಂದಿರಬೇಕು ಹಾಗೂ ವಿಶಿಷ್ಟ ಅಂಗವಿಕಲರ ಗುರುತಿನ ಚೀಟಿ ಕಡ್ಡಾಯವಾಗಿದೆ. ವಯಸ್ಸಿಗೆ ಅಥವಾ ಆದಾಯಕ್ಕೆ ಮಿತಿಯಿಲ್ಲ. ಅರ್ಜಿ ನಮೂನೆಯನ್ನು ಪೂರೈಸಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಿತ ತಾಲ್ಲೂಕು ಪುನರ್ವಸತಿ ಕಾರ್ಯಕರ್ತರಿಗೆ ಜೂನ್ 30ರೊಳಗೆ ಸಲ್ಲಿಸಬೇಕಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ತಾಲ್ಲೂಕು ಅಧಿಕಾರಿಗಳನ್ನು ಅಥವಾ ಹಾಸನದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ (ದೂರವಾಣಿ: 08172-295546 / 264546) ಸಂಪರ್ಕಿಸಬಹುದು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa