ಭಾರತ-ಚೀನಾ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ
ನವದೆಹಲಿ, 13 ಜೂನ್ (ಹಿ.ಸ.) : ಆ್ಯಂಕರ್ : ನವದೆಹಲಿಯಲ್ಲಿ ಭಾರತ-ಚೀನಾ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಯಲ್ಲಿ ವಾಣಿಜ್ಯ, ನಾಗರಿಕ ವಿಮಾನ, ಜಲವಿಜ್ಞಾನ ದತ್ತಾಂಶ ಹಂಚಿಕೆ, ಮತ್ತು ಜನಸಂಪರ್ಕ ವಿಷಯಗಳ ಬಗ್ಗೆ ಸಕಾರಾತ್ಮಕ ಚರ್ಚೆಗಳು ನಡೆದವು. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು
ಭಾರತ-ಚೀನಾ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ


ನವದೆಹಲಿ, 13 ಜೂನ್ (ಹಿ.ಸ.) :

ಆ್ಯಂಕರ್ : ನವದೆಹಲಿಯಲ್ಲಿ ಭಾರತ-ಚೀನಾ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಯಲ್ಲಿ ವಾಣಿಜ್ಯ, ನಾಗರಿಕ ವಿಮಾನ, ಜಲವಿಜ್ಞಾನ ದತ್ತಾಂಶ ಹಂಚಿಕೆ, ಮತ್ತು ಜನಸಂಪರ್ಕ ವಿಷಯಗಳ ಬಗ್ಗೆ ಸಕಾರಾತ್ಮಕ ಚರ್ಚೆಗಳು ನಡೆದವು.

ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಚೀನಾದ ಉಪ ವಿದೇಶಾಂಗ ಸಚಿವ ಸನ್ ವೀಡಾಂಗ್ ಅವರನ್ನು ಭೇಟಿ ಮಾಡಿದರು. ನೇರ ವಿಮಾನ ಸೇವೆಗಳ ಪುನರಾರಂಭ, ವೀಸಾ ಪ್ರಕ್ರಿಯೆ ಸುಧಾರಣೆ, ಕೈಲಾಸ ಯಾತ್ರೆ ಪುನರಾರಂಭದಲ್ಲಿ ಚೀನಾದ ಸಹಕಾರಕ್ಕಾಗಿ ಧನ್ಯವಾದಗಳು ತಿಳಿಸಲಾಯಿತು.

ವಾಣಿಜ್ಯ ಸಂಬಂಧಗಳನ್ನು ಗಟ್ಟಿಮಾಡಲು ವ್ಯಾಪಾರ ಸಂವಾದ ಮುಂದುವರಿಸಲು ಹಾಗೂ ಜನತೆ-ಮಟ್ಟದ ಸಂಪರ್ಕವನ್ನು ವೃದ್ಧಿಸಲು ಎರಡೂ ದೇಶಗಳು ಒಪ್ಪಿಕೊಂಡವು. ಭಾರತ-ಚೀನಾ ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷಾಚರಣೆ ಕಾರ್ಯಕ್ರಮಗಳನ್ನೂ ಪರಿಗಣಿಸಲಾಯಿತು.

ಸಭೆಯು ಸೌಹಾರ್ದಯುತವಾಗಿದ್ದು, ಸಂಬಂಧಗಳಲ್ಲಿ ವಿಶ್ವಾಸ ಪುನರ್‌ನಿರ್ಮಾಣಕ್ಕೆ ದಾರಿ ವಹಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande