ನವದೆಹಲಿ, 11 ಜೂನ್ (ಹಿ.ಸ.) :
ಆ್ಯಂಕರ್ : ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಐಎಸ್ಎಸ್‌ಗೆ ಕಳುಹಿಸುವ ಆಕ್ಸಿಯಮ್-4 ಮಿಷನ್ ಉಡಾವಣೆ ಮತ್ತೊಮ್ಮೆ ಮುಂದೂಡಲಾಗಿದೆ. ಇಂದಿಗೆ ನಿಗದಿಯಾಗಿದ್ದ ಉಡಾವಣೆಯು, ಸ್ಪೇಸ್‌ಎಕ್ಸ್ ಫಾಲ್ಕನ್-9 ರಾಕೆಟ್‌ನ ಬೂಸ್ಟರ್ ಭಾಗದಲ್ಲಿ ಸೋರಿಕೆ ಕಂಡುಬಂದ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಸ್ರೋ ಮುಖ್ಯಸ್ಥ ಡಾ. ವಿ. ನಾರಾಯಣನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಮಿಷನ್‌ನ್ನು ಇದುವರೆಗೆ ಮೂವರು ಬಾರಿ ಮುಂದೂಡಲಾಗಿದೆ. ಮೇ 29 ರಂದು ಉಡಾವಣೆಯಾಗಬೇಕಾಗಿದ್ದ ಮಿಷನ್ ಈಗ ಇನ್ನೊಂದು ದಿನಾಂಕಕ್ಕಾಗಿ ಕಾಯುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa